ಬೀದಿ ನಾಯಿ ದಾಳಿಗೆ ಬಾಲಕನೋರ್ವ ಸಾವನ್ನಪ್ಪಿದಾನೆ. ಈ ಘಟನೆ ಚಿತ್ರದುರ್ಗದ ಮೊಳಕಾಲ್ಕೂರು ತಾಲೂಕಿನ ರಾಮಾಪುರ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬಾಲಕ ಮಿಥುನ್ ನವೋದಯ ಪ್ರವೇಶ ಪರೀಕ್ಷಾ ತರಬೇತಿಗೆ ಹೋಗಿ ವಾಪಸ್ಸಾಗುತ್ತಿದ್ದ ವೇಳೆ ಬೀದಿ ನಾಯಿ ಬಾಲಕನ ಮೇಲೆ ದಾಳಿ ಮಾಡಿದೆ . ನಾಯಿಗಳು ತಲೆ, ಕಿವಿ, ಎದೆ, ಎರಡೂ ಕೈ ಮತ್ತು ಕಾಲುಗಳನ್ನು ಕಚ್ಚಿ ಬಾಲಕನನ್ನು ಘಾಸಿಗೊಳಿಸಿತ್ತು ಎಂದು ಮೃತ ಬಾಲಕನ ಅಜ್ಜಿ ದೂರಿನಲ್ಲಿ ತಿಳಿಸಿದ್ದಾರೆ.
ತಕ್ಷಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಾಲಕನನ್ನು ಸ್ಥಳಾಂತರಿಸಲಾಯಿತು. ಚಿಕಿತ್ಸೆ ಫಲಕಾರಿ ಕಾಣದೆ ಬಾಲಕ ಮೃತ ಪಟ್ಟಿದ್ದಾನೆ ಎಂದು ಹೇಳಲಾಗಿದೆ.

























