ಸ್ಥಳೀಯ

ಪಿಕಪ್‌ – ಬೈಕ್‌ ಮಧ್ಯೆ ಅಪಘಾತ: ಸವಾರರು ಗಂಭೀರ!!

ಸವಣೂರು: ಪಿಕಪ್‌ ಮತ್ತು ಬೈಕ್‌ ಮಧ್ಯೆ ಅಪಘಾತ ಸಂಭವಿಸಿ ಬೈಕ್‌ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ಸವಣೂರು ಸಮೀಪ ಚಾಪಳ್ಳ ಎಂಬಲ್ಲಿ ಸೋಮವಾರ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಸವಣೂರು: ಪಿಕಪ್‌ ಮತ್ತು ಬೈಕ್‌ ಮಧ್ಯೆ ಅಪಘಾತ ಸಂಭವಿಸಿ ಬೈಕ್‌ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ಸವಣೂರು ಸಮೀಪ ಚಾಪಳ್ಳ ಎಂಬಲ್ಲಿ ಸೋಮವಾರ ನಡೆದಿದೆ.

ಪುತ್ತೂರು ಕಡೆಯಿಂದ ಬರುತ್ತಿದ್ದ ಪಿಕಪ್‌ ಮತ್ತು ಪುತ್ತೂರು ಕಡೆಗೆ ಹೋಗುತ್ತಿದ್ದ ಬೈಕ್‌ ಮಧ್ಯೆ ಅಪಘಾತ ನಡೆದಿದ್ದು, ರಸ್ತೆಯಲ್ಲಿದ್ದ ಅಪಾಯಕಾರಿ ಗುಂಡಿಯನ್ನು ತಪ್ಪಿಸುವ ಸಂದರ್ಭದಲ್ಲಿ ಢಿಕ್ಕಿಯಾಗಿದೆ.

SRK Ladders

ಬೈಕ್‌ ಸವಾರರಾದ ಕಾಣಿಯೂರು ಗ್ರಾಮದ ಪುಣತ್ತಾರು ನಿವಾಸಿ ಭಾಸ್ಕರ (53) ಹಾಗೂ ಆಲಂಕಾರು ಗ್ರಾಮದ ಕೊಂಡಾಡಿಕೊಪ್ಪ ನಿವಾಸಿ ಪವನ್‌ (18) ಗಾಯಗೊಂಡಿದ್ದಾರೆ.

ಭಾಸ್ಕರ ಅವರ ಮುಖ ಹಾಗೂ ತಲೆಗೆ ಗಂಭೀರ ಗಾಯವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3