ದೇಶವಿಶೇಷಸ್ಥಳೀಯ

ಓಣಂ (Onam) ಹಬ್ಬ: ಸರ್ಕಾರಿ ಬಸ್ ಪ್ರಯಾಣಿಕರಿಗೆ ಕೇರಳ ಸರ್ಕಾರ (Kerala Govt)ದ ಗಿಫ್ಟ್!! ಆರ್.ಎಫ್.ಐ.ಡಿ. ತಂತ್ರಜ್ಞಾನದ ಟ್ರಾವೆಲ್ ಸ್ಮಾರ್ಟ್ ಕಾರ್ಡ್ ಬಿಡುಗಡೆ! ಏನಿದರ ಪ್ರಯೋಜನ, ಬಳಕೆ ಹೇಗೆ? ಡಿಜಿಟಲ್ ಪಾವತಿಗೆ ಹೇಗೆ ಪೂರಕ? ಇಲ್ಲಿದೆ ಕಂಪ್ಲೀಟ್ ಸ್ಟೋರಿ

ಈ ಸುದ್ದಿಯನ್ನು ಶೇರ್ ಮಾಡಿ

ಸದ್ಯವೇ ಓಣಂ ಹಬ್ಬ (Onam Festival) ಆಗಮಿಸಲಿದೆ. ಕೇರಳದಾದ್ಯಂತ ಓಣಂ ಹಬ್ಬಕ್ಕೆ ಇನ್ನಿಲ್ಲದ ತಯಾರಿ ಈಗಾಗಲೇ ಆರಂಭಗೊಂಡಿದೆ. ಕೇರಳ ರಾಜ್ಯ ಸರ್ಕಾರ (Kerala state govt)ವೂ ಜನರಿಗೆ ಏನಾದರೊಂದು ಹೊಸತನ ಪರಿಚಯಿಸಬೇಕು ಎಂಬ ಚಿಂತನೆಯಲ್ಲಿ, ಟ್ರಾವೆಲ್ ಸ್ಮಾರ್ಟ್ ಕಾರ್ಡ್ (travel smart card) ಅನ್ನು ಪರಿಚಯಿಸುತ್ತಿದೆ.

ಈ ಕಾರ್ಡಿಗೆ ಚಲೋ ಟ್ರಾವೆಲ್ ಕಾರ್ಡ್ ಎಂಬ ಹೆಸರೂ ಇದೆ. ಆರ್.ಎಫ್.ಐ.ಡಿ. ತಂತ್ರಜ್ಞಾನವನ್ನು ಬಳಸಿಕೊಂಡು ಆವಿಷ್ಕರಿಸಿರುವ ಈ ಕಾರ್ಡ್ ಗಳು ಡಿಜಿಟಲ್ ಪಾವತಿ ವ್ಯವಸ್ಥೆಗೆ ಪೂರಕವಾಗಿರಲಿದೆ. ಇದು ಜನಸಾಮಾನ್ಯರಿಗೆ ಅನುಕೂಲವಾಗಿರಲಿದೆ. ಮಾತ್ರವಲ್ಲ, ಬಸ್ ಗಳಲ್ಲಿ ಎದುರಾಗುವ ಚಿಲ್ಲರೆ ಸಮಸ್ಯೆಯನ್ನು ದೂರ ಮಾಡಲಿದೆಯಂತೆ.

SRK Ladders

ಈಗಿನ ಸೀಸನ್ ಟಿಕೇಟ್ ಮಾದರಿಯನ್ನೇ ಅನುಸರಿಸಿಕೊಂಡು ಆರ್‌.ಎಫ್‌.ಐ.ಡಿ. ತಂತ್ರಜ್ಞಾನವನ್ನು ಬಳಸಿಕೊಂಡು ಭದ್ರತಾ ವ್ಯವಸ್ಥೆಗಳೊಂದಿಗೆ ಕಾರ್ಡ್‌ ಅನ್ನು ವಿತರಿಸುವ ಯೋಜನೆ ರೂಪಿಸಲಾಗಿದೆ.

ತಿರುವನಂತಪುರದಲ್ಲಿ ಕಳೆದ ಡಿಸೆಂಬರಿನಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಇದು ಯಶಸ್ವಿಯಾಗಿದ್ದು, ಇದೀಗ ಇತರ ಜಿಲ್ಲೆಗಳಿಗೂ ವಿಸ್ತರಿಸುವ ಯೋಜನೆ ಇಟ್ಟುಕೊಳ್ಳಲಾಗಿದೆ.

ಚಲೋ ಮೊಬಿಲಿಟಿ ಸೊಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಸಂಸ್ಥೆ ಇದರ ಟೆಂಡರ್‌ ಪಡೆದುಕೊಂಡಿದೆ. ಕಾರ್ಡ್‌ನಲ್ಲಿಎಷ್ಟು ಹಣ ರೀಚಾರ್ಜ್ ಮಾಡಲಾಗಿದೆ ಎಂಬುದರ ಮೇಲೆ ವಿವಿಧ ಕೊಡುಗೆಗಳನ್ನು ನೀಡಲಾಗುತ್ತದೆ ಎನ್ನಲಾಗಿದೆ.

ಕ್ಯೂ ಆರ್ ಕೋಡ್ / ಕಾರ್ಡ್ ಸಂಖ್ಯೆ:

ಹೊಸ ಟಿಕೆಟ್‌ ಯಂತ್ರಗಳಲ್ಲಿ ಕಾರ್ಡ್‌ ಸಂಖ್ಯೆಯನ್ನು ನಮೂದಿಸುವ ಮೂಲಕ ಅಥವಾ ಕ್ಯೂ ಆರ್‌ ಕೋಡ್‌ ಅನ್ನು ಸ್ಕ್ಯಾ‌ನ್‌ ಮಾಡುವ ಮೂಲಕ ಬ್ಯಾಲೆನ್ಸ್‌ ಅನ್ನು ಪರಿಶೀಲಿಸಬಹುದು. ಕಾರ್ಡ್‌ ಅನ್ನು ದೀರ್ಘ ದೂರದ ಸೇವೆಗಳಲ್ಲೂ ಬಳಸಬಹುದು. ಗುತ್ತಿಗೆ ಕಂಪನಿಯು ಎಲ್ಲ ಪ್ರಮುಖ ಡಿಪೋಗಳಲ್ಲಿ ಕಾರ್ಡ್‌ ಪ್ರಿಂಟಿಂಗ್‌ ಯಂತ್ರಗಳು, ಸರ್ವರ್‌, ಅಗತ್ಯ ಕಾಗದಗಳು ಮತ್ತು ನಾಲ್ಕು ಕಂಪ್ಯೂಟರ್‌ಗಳನ್ನು ಒದಗಿಸುತ್ತವೆ.
ಕೆಎಸ್ಸಾರ್ಟಿಸಿ ಪ್ರತಿ ಟಿಕೆಟ್‌ಗೆ 13 ಪೈಸೆಯನ್ನು ಚಲೋ ಟ್ರಾವೆಲ್‌ ಕಾರ್ಡ್‌ ಮೂಲಕ ಪಾವತಿಸಲು ಒಪ್ಪಂದದಲ್ಲಿ ಒಪ್ಪಿಕೊಂಡಿದೆ. ಯಂತ್ರಗಳ ವಾರ್ಷಿಕ ನಿರ್ವಹಣೆ ಮತ್ತು ಡೇಟಾ ಅನಾಲಿಟಿಕ್ಸ್‌ ಸೇರಿದಂತೆ ವೆಚ್ಚಗಳನ್ನು ಗುತ್ತಿಗೆ ಕಂಪನಿ ಭರಿಸಲಿದೆ.

ಮುಂಗಡ ಟಿಕೆಟಿಗಾಗಿ ಚಲೋ ಟ್ರಾವೆಲ್ ಅಪ್ಲಿಕೇಷನ್:

ಓಣಂ ಹಬ್ಬದ (Onam Festival) ಸಲುವಾಗಿ ಚಲೋ ಟ್ರಾವೆಲ್‌ ಕಾರ್ಡ್‌ ಜತೆಗೆ ಚಲೋ ಟ್ರಾವೆಲ್‌ ಅಪ್ಲಿಕೇಶನ್‌ ಬಿಡುಗಡೆಯಾಗಲಿದೆ. ಇದರ ಮೂಲಕ ಟಿಕೆಟ್‌ಗಳನ್ನು ಮುಂಗಡವಾಗಿ ಬುಕ್‌ ಮಾಡಬಹುದು. ಕಾರ್ಡ್‌ ಬಳಕೆದಾರರ ವಿವರಗಳು, ಬಸ್‌ ಲೈವ್‌ ಟ್ರ್ಯಾಕಿಂಗ್‌ ಮತ್ತು ಸೀಟ್‌ ಲಭ್ಯತೆಯನ್ನು ಅಪ್ಲಿಕೇಶನ್‌ ಮೂಲಕ ತಿಳಿಯಬಹುದು. ಆರಂಭದಲ್ಲಿ100 ರೂ. ಕಾರ್ಡ್‌ ಬೆಲೆಗೆ 150 ರೂ. ಲಭಿಸುತ್ತದೆ. 250 ಅಥವಾ ಅದಕ್ಕಿಂತ ಹೆಚ್ಚಿನ ಶುಲ್ಕ ನೀಡುವವರಿಗೆ ಶೇ.10 ಅಧಿಕ ಶುಲ್ಕ ಲಭಿಸುವುದು. ಈ ಕಾರ್ಡ್‌ಗಳ ಕಾಲಾವಧಿ ಒಂದು ವರ್ಷ ಆಗಿರುತ್ತದೆ. ಬಳಿಕ ಅದನ್ನು ನವೀಕರಿಸಬಹುದು.

ಈಗಾಗಲೇ ಕೇರಳ ಸಾರಿಗೆ ಸಚಿವ ಕೆ.ಬಿ. ಗಣೇಶ್‌ ಕುಮಾರ್‌ ನೇತೃತ್ವ ಸಭೆಯಲ್ಲಿ ಚಲೋ ಟ್ರಾವೆಲ್‌ ಕಾರ್ಡ್‌ಗೆ ಸಂಬಂಧಿಸಿದ ಪ್ರಗತಿಯನ್ನು ಮೌಲ್ಯಮಾಪನ ಮಾಡಲಾಯಿತು. ಕೇರಳ ಸರಕಾರದ 100 ದಿನಗಳ ಕ್ರಿಯಾ ಯೋಜನೆಗಳ ಭಾಗವಾಗಿ ಓಣಂ ದಿನ(Onam Festival)ದಂದು ಚಲೋ ಟ್ರಾವೆಲ್‌ ಕಾರ್ಡ್‌ ಬಿಡುಗಡೆ ಮಾಡಲಾಗುವುದು. ಈ ಮೂಲಕ ಬಸ್‌ಗಳಲ್ಲಿ ಚಿಲ್ಲರೆ ಸಮಸ್ಯೆ ಇರುವುದಿಲ್ಲ. ಸುಲಭವಾಗಿ ಕಾರ್ಡ್‌ ಮೂಲಕ ಟಿಕೆಟ್‌ ಪಡೆಯಲು ಸಾಧ್ಯವಾಗುವುದು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3