ಕರಾವಳಿಸ್ಥಳೀಯ

ಮತ್ತೊಮ್ಮೆ ಅಧಿವೇಶನದಲ್ಲಿ ಮುನ್ನೆಲೆಗೆ ಬಂದ ಎಸ್.ಪಿ. ಕಚೇರಿ ವರ್ಗ ವಿಚಾರ: ವಿವಾದಕ್ಕೆ ತೆರೆ ಎಳೆದ ಐವನ್ ಡಿಸೋಜಾ | ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅಧಿವೇಶನದಲ್ಲಿ ಕೇಳಿದ ಪ್ರಶ್ನೆ ಹಾಗೂ ಗೃಹ ಸಚಿವರು ನೀಡಿದ ಉತ್ತರವಾದರೂ ಏನು? ಇಲ್ಲಿದೆ ಡೀಟೈಲ್ಸ್

ಪುತ್ತೂರು: ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ.) ಕಚೇರಿ ಮಂಗಳೂರಿನಿಂದ ಪುತ್ತೂರಿಗೆ ವರ್ಗ ಆಗಬೇಕು ಎನ್ನುವುದು ಬಹುದಿನಗಳ ಬೇಡಿಕೆ. ಈ ವಿಚಾರ ಅಲ್ಲಿ- ಇಲ್ಲಿ ಚರ್ಚೆ ಆಗುವುದು ಬಿಟ್ಟರೆ, ವರ್ಗಾವಣೆಯಂತೂ ಆಗಿಯೇ ಇಲ್ಲ. ಇದೀಗ ಮತ್ತೊಮ್ಮೆ ಈ ಚರ್ಚೆ ಮುನ್ನೆಲೆಗೆ ಬಂದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ.) ಕಚೇರಿ ಮಂಗಳೂರಿನಿಂದ ಪುತ್ತೂರಿಗೆ ವರ್ಗ ಆಗಬೇಕು ಎನ್ನುವುದು ಬಹುದಿನಗಳ ಬೇಡಿಕೆ. ಈ ವಿಚಾರ ಅಲ್ಲಿ- ಇಲ್ಲಿ ಚರ್ಚೆ ಆಗುವುದು ಬಿಟ್ಟರೆ, ವರ್ಗಾವಣೆಯಂತೂ ಆಗಿಯೇ ಇಲ್ಲ. ಇದೀಗ ಮತ್ತೊಮ್ಮೆ ಈ ಚರ್ಚೆ ಮುನ್ನೆಲೆಗೆ ಬಂದಿದೆ.

ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಅವರು, ಎಸ್.ಪಿ ಕಚೇರಿ ಪುತ್ತೂರಿಗೆ ವರ್ಗ ಆಗುವುದು ಬೇಡ ಎಂದಿದ್ದಾರೆ ಎಂಬ ವರದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಐವನ್ ಡಿಸೋಜಾ ಅವರು, ಇದು ಸುಳ್ಳು ವರದಿ. ನೈಜತೆಯನ್ನು ವಿವೇಚನೆ ಮಾಡದೇ, ಈ ರೀತಿಯಾಗಿ ಸಂದೇಶ ರವಾನಿಸುತ್ತಿದ್ದಾರೆ. ಯಾವುದೇ ಸುದ್ದಿಯಾದರೂ ನೈಜತೆಯನ್ನು ಅರಿತುಕೊಂಡು, ವರದಿ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ.

SRK Ladders

“ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿರುವ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನು ಮಂಗಳೂರಿನಿಂದ ತೆರವು ಮಾಡಬೇಕು ಎಂಬ ತೀರ್ಮಾನ ಆಗಿತ್ತು. ಇದರ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ್ದೆ. ಎಸ್.ಪಿ. ಕಚೇರಿಯ ವಿಷಯ ಅಧಿವೇಶನದಲ್ಲಿ ಚರ್ಚೆಗೆ ಬಂದಿಲ್ಲ. ಆದರೆ ಗೃಹ ಸಚಿವರು ಲಿಖಿತ ಉತ್ತರ ನೀಡಿದ್ದಾರೆ” ಎಂದಿದ್ದಾರೆ.

ಮಂಗಳೂರಿಗೆ ಹೈಕೋರ್ಟ್ ಬೆಂಚ್ ತರಬೇಕೆಂಬ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಜಾಗದ ಅವಶ್ಯಕತೆ ಇದೆ. ಒಂದು ವೇಳೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಕಮೀಷನರೇಟ್ ವ್ಯಾಪ್ತಿಯಿಂದ ಹೊರ ಹೋದರೆ, ಆ ಜಾಗದಲ್ಲಿ ಹೈಕೋರ್ಟ್ ಬೆಂಚ್ ಕೆಲಸ ನಿರ್ವಹಿಸಬಹುದು. ಮಾತ್ರವಲ್ಲ, ಮಂಗಳೂರು ಕಮೀಷನರೇಟ್ ವ್ಯಾಪ್ತಿಗೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಡಿ.ಆರ್. ಅಗತ್ಯವೇ ಇಲ್ಲ. ಸುಮಾರು 80 ಕಿ.ಮೀ. ದೂರದಲ್ಲಿರುವ ಸುಳ್ಯಕ್ಕೆ ತುರ್ತು ಸಂದರ್ಭದಲ್ಲಿ ಎಸ್.ಪಿ. ತೆರಳಬೇಕಾದರೂ ಸಾಕಷ್ಟು ಕಾಲಾವಕಾಶ ಬೇಕು. ಹಾಗಾಗಿ, ಎಸ್.ಪಿ. ಕಚೇರಿಯನ್ನು ಇಲ್ಲಿಂದ ತೆರವು ಮಾಡಿ ಎಂಬ ನೆಲೆಯಲ್ಲಿ ನಮ್ಮ ಒತ್ತಾಯ ಇದೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳನ್ನು ಹರಡುವ ಮೊದಲು ನೈಜತೆಯನ್ನು ತಿಳಿದುಕೊಳ್ಳಬೇಕು. ವೃಥಾ ಸುಳ್ಳುಗಳನ್ನು ಹರಡುವುದು ಸರಿಯಲ್ಲ. ಸುದ್ದಿಗಳನ್ನು ವಿವೇಚನೆ ಮಾಡದೇ ವೈರಲ್ ಮಾಡುವ ಸಂಡೇ ಪತ್ರಕರ್ತರು, ಸರಿಯಾದ ಮಾಹಿತಿಯನ್ನು ಸರಕಾರದ ವೆಬ್’ಸೈಟ್’ನಿಂದ ಪಡೆದುಕೊಳ್ಳಬಹುದು ಎಂದು ಐವನ್ ಡಿಸೋಜಾ ಉತ್ತರಿಸಿದ್ದಾರೆ.

ಐವನ್ ಡಿಸೋಜಾ ಅವರು ಕೇಳಿರುವ ಪ್ರಶ್ನೆ ಹಾಗೂ ಗೃಹ ಸಚಿವರು ನೀಡಿರುವ ಉತ್ತರದ ಯಥಾಪ್ರತಿ ಇಲ್ಲಿದೆ:

ಸೂಚನೆ: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ದ.ಕ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯನ್ನು ನಗರಪಾಲಿಕೆ ಪೊಲೀಸ್ ಆಯುಕ್ತರ ವ್ಯಾಪ್ತಿಯಿಂದ ಹೊರವಲಯಕ್ಕೆ ಸ್ಥಳಾಂತರಿಸಲು ನಿರ್ಣಯವಾಗಿದ್ದರು ಇದುವರೆಗೆ ಸ್ಥಳಾಂತರಗೊಳ್ಳದೇ ಇರುವ ಅಡಚಣೆಗಳ ಬಗ್ಗೆ ಮಾನ್ಯ ಗೃಹ ಸಚಿವರ ಗಮನ ಸೆಳೆಯ ಬಯಸುತ್ತೇನೆ.

ಉತ್ತರ: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ದ.ಕ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯನ್ನು ನಗರಪಾಲಿಕೆ ಪೊಲೀಸ್ ಆಯುಕ್ತರ ವ್ಯಾಪ್ತಿಯಿಂದ ಹೊರವಲಯಕ್ಕೆ ಸ್ಥಳಾಂತರಿಸಲು ನಿರ್ಣಯವಾಗಿರುವುದಿಲ್ಲ. ಹೊರವಲಯಕ್ಕೆ ಪೊಲೀಸ್ ಅಧೀಕ್ಷಕರ ಕಛೇರಿಗೆ ಸ್ಥಳಾಂತರಿಸಲು ಸ್ಥಳ ಕಾಯ್ದಿರಿಸಿರುವುದಿಲ್ಲ ಹಾಗೂ ಪೊಲೀಸ್ ಅಧೀಕ್ಷಕರ ಕಛೇರಿಯನ್ನು ಹೊರವಲಯಕ್ಕೆ ಸ್ಥಳಾಂತರಿಸುವ ಬಗ್ಗೆ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆಯನ್ನು ಸಲ್ಲಿಸಿರುವುದಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕುಗಳ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಪುತ್ತೂರಿನಲ್ಲಿ ಈಗಾಗಲೇ ಸಹಾಯಕ ಪೊಲೀಸ್ ಅಧೀಕ್ಷಕರ ಕಛೇರಿಯು ಕಾರ್ಯನಿರ್ವಹಿಸುತ್ತಿದೆ. ಅದೇ ರೀತಿ ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿಗೆ ಸಂಬಂಧಪಟ್ಟಂತೆ ಬಂಟ್ವಾಳದಲ್ಲಿ ಪೊಲೀಸ್ ಉಪಾಧೀಕ್ಷಕರ ಕಛೇರಿಯು ಕಾರ್ಯನಿರ್ವಹಿಸುತ್ತಿದೆ.

ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ಪಂಚಾಯತ್ ಕಚೇರಿ, ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯಂತಹ ಜಿಲ್ಲಾ ಮಟ್ಟದ ಕಛೇರಿಗಳು ಮಂಗಳೂರಿನಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವುದರಿಂದ ಜಿಲ್ಲಾ ಪೊಲೀಸ್ ಕಛೇರಿಗೆ ಬರುವಂತಹ ಸಾರ್ವಜನಿಕರು ಸದರಿ ಕಛೇರಿಗಳಿಗೂ ತೆರಳಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗುತ್ತಿರುತ್ತಾರೆ. ಅಲ್ಲದೇ ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಆಡಳಿತಾತ್ಮಕ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲು ಅನುಕೂಲಕರವಾಗಿರುತ್ತದೆ. ಜಿಲ್ಲಾ ಪೊಲೀಸ್ ಕಛೇರಿಯನ್ನು ಹೊರವಲಯಕ್ಕೆ ಸ್ಥಳಾಂತರಿಸುವುದರ ಜೊತೆಗೆ ಇತರ ಜಿಲ್ಲಾ ಮಟ್ಟದ ಕಛೇರಿಗಳನ್ನು ಸಹ ಸ್ಥಳಾಂತರಿಸಿದಲ್ಲಿ ಮಾತ್ರ ಅನುಕೂಲವಾಗಬಹುದು.
ಹುಬ್ಬಳ್ಳಿ ಧಾರವಾಡ, ಮೈಸೂರು, ಬೆಳಗಾವಿ, ಗುಲ್ಬರ್ಗಾದಲ್ಲಿಯೂ ಸಹ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಗಳು ನಗರ ಪಾಲಿಕೆಯ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲೇ ಕಾರ್ಯ ನಿರ್ವಹಿಸುತ್ತಿರುತ್ತದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

1 of 3