ನಿಧನ

ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ನಿಧನ!

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇಲ್ಲಿನ  ಕಡೇಶಿವಾಲಯ ಗ್ರಾಮದ ಪಟ್ಲ ಮನೆತನದ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ (97 ವ) ರವರು ಮಾ. 7ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.

chennai-shopping
maithri

ಪ್ರಗತಿಪರ ಕೃಷಿಕರೂ ಆಗಿರುವ ಇವರು ಕಳೆದ ಹಲವಾರು ವರ್ಷಗಳಿಂದ ಕೆಂಪು, ಸರ್ಪಸುತ್ತು, ಹಳದಿರೋಗ (ಮಂಜರೋಗ), ಹಾವು ಕಡಿತ, ಬಾಪು ಸೇರಿದಂತೆ  ಹಲವಾರು ಕಾಯಿಲೆಗಳಿಗೆ  ಗಿಡ ಮೂಲಿಕೆ ಔಷಧಿ ನೀಡುತ್ತಿದ್ದರು.  ಸಂಘ ಸಂಸ್ಥೆಗಳಿಂದ ಇವರ ಸೇವೆಗೆ ಹಲವಾರು ಪ್ರಶಸ್ತಿಗಳು ಸಂದಿವೆ.

ಮೃತರು  ಪುತ್ರಿಯರಾದ ಕುಸುಮಾ, ಲೀಲಾವತಿ, ಯಶೋಧ, ಚಿತ್ರಾವತಿ, ಪುತ್ರರಾದ ವೆಂಕಪ್ಪ ಪೂಜಾರಿ, ಆನಂದ ಪೂಜಾರಿ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts