ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಶೀಘ್ರ ಬಂಧಮುಕ್ತವಾಗಲೆಂದು ದರ್ಶನ್ ಪತ್ನಿ ಕೊಲ್ಲೂರು ಮೂಕಾಂಬಿಕೆ Kollur Mookambika Temple ಮೊರೆ ಹೋಗಿದ್ದಾರೆ,
ಶುಕ್ರವಾರ ವಿಜಯಲಕ್ಷ್ಮಿ ಹಾಗೂ ಸಂಗಡಿಗರು ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪತಿ ಹೆಸರಿನಲ್ಲಿ ಚಂಡಿಕಾ ಯಾಗ ನಡೆಯುತ್ತಿದ್ದು ಪತ್ನಿ ವಿಜಯಲಕ್ಷ್ಮಿ ಭಾಗಿಯಾಗಿದ್ದಾರೆ.
ಜೋರಾಗಿ ಸುರಿಯುತ್ತಿರುವ ಮಳೆಯಲ್ಲೇ ದೇವಸ್ಥಾನಕ್ಕೆ ಐದು ಸುತ್ತು ಬಂದು ಜೈಲಿನಲ್ಲಿರುವ ತನ್ನ ಪತಿ ಆದಷ್ಟು ಬೇಗ ಬಂಧಮುಕ್ತವಾಗುವಂತೆ ಬೇಡಿಕೊಂಡಿದ್ದಾರೆ.
ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ಪತಿ ದರ್ಶನ್ ಅವರನ್ನ ಹೊರತರಲು ಪತ್ನಿ ವಿಜಯಲಕ್ಷ್ಮೀ ಹರಸಾಹಸ ಪಡುತ್ತಿದ್ದಾರೆ. ಪತಿ ದರ್ಶನ್ ಒಳಿತಿಗಾಗಿ ವಿಜಯಲಕ್ಷ್ಮೀ ಒದ್ದಾಡುತ್ತಿದ್ದಾರೆ. ವಕೀಲರ ಜೊತೆ ಚರ್ಚೆ ನಡೆಸಿರುವ ವಿಜಯಲಕ್ಷ್ಮೀ ಆಗಾಗ ಜೈಲಿಗೆ ಭೇಟಿಕೊಟ್ಟು ಪತಿ ದರ್ಶನ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ.