ರಾಜ್ಯ ವಾರ್ತೆಸ್ಥಳೀಯ

ನದಿಯಲ್ಲಿ 30 ಟನ್‌ ಗ್ಯಾಸ್‌ ಟ್ಯಾಂಕರ್! ಅನಿಲ ಬಿಡುಗಡೆಯಿಂದ ಆತಂಕ: ಸ್ಥಳೀಯರ ಸ್ಥಳಾಂತರ!! MRPL ಸಹಿತ ನೌಕಾದಳದಿಂದ ಕಾರ್ಯಾಚರಣೆ

GL
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಸಮೀಪದ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತದ ವೇಳೆ ಗಂಗಾವಳಿ ನದಿಯಲ್ಲಿ ತೇಲಿ ಹೋಗಿದ್ದ ಎಚ್‌ಪಿ ಗ್ಯಾಸ್‌ ಟ್ಯಾಂಕರ್‌ ಮೇಲೆತ್ತುವ ಸವಾಲಿನ ಕಾರ್ಯಾಚರಣೆ ಗುರುವಾರ ಆರಂಭಗೊಂಡಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಅಂಕೋಲಾ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಸಮೀಪದ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತದ ವೇಳೆ ಗಂಗಾವಳಿ ನದಿಯಲ್ಲಿ ತೇಲಿ ಹೋಗಿದ್ದ ಎಚ್‌ಪಿ ಗ್ಯಾಸ್‌ ಟ್ಯಾಂಕರ್‌ ಮೇಲೆತ್ತುವ ಸವಾಲಿನ ಕಾರ್ಯಾಚರಣೆ ಗುರುವಾರ ಆರಂಭಗೊಂಡಿದೆ.
ಎರಡು ದಿನಗಳಿಂದ ಶಿರೂರಿಗೆ 7 ಕಿ.ಮೀ. ದೂರದ ಸಗಡಗೇರಿ ಗ್ರಾಮದ ಬಳಿ ನದಿಯಲ್ಲಿ ತೇಲುತ್ತಾ ಲಂಗರು ಹಾಕಿದ್ದ ಟ್ಯಾಂಕರನ್ನು ನದಿಯಲ್ಲೇ ಅನಿಲ ಖಾಲಿ ಮಾಡಿ ಹೊರಗೆಳೆದು ತರಲಾಗುತ್ತಿದೆ.

core technologies

ಮಂಗಳೂರಿನ ಎಂಆರ್‌ಪಿಎಲ್‌, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ನೌಕಾದಳ ಹಾಗೂ ಇತರ ಪರಿಣತರ ತಂಡ ಗುರುವಾರ ಬೆಳಗ್ಗೆಯೇ ಬೋಟ್‌ ಮೂಲಕ ತೆರಳಿ ಟ್ಯಾಂಕರ್‌ಗೆ ಹಗ್ಗದಿಂದ ಕಟ್ಟಿ ನಾಲ್ಕು ಕ್ರೇನ್‌ಗಳನ್ನು ಬಳಸಿ ಅರ್ಧತಾಸಿನಲ್ಲೇ ದಡದಂಚಿಗೆ ಎಳೆದು ತಂದಿತು.

ಅಪರಾಹ್ನ 2 ಗಂಟೆ ಹೊತ್ತಿಗೆ ಟ್ಯಾಂಕರ್‌ನಿಂದ ಅನಿಲವನ್ನು ನದಿ ನೀರಿಗೆ ಬಿಡುವ ಕಾರ್ಯ ಆರಂಭಗೊಂಡಿತು. ಶುಕ್ರವಾರ ಸಂಜೆ ಹೊತ್ತಿಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ! ಕುತ್ತಿಗೆಗೆ ಗಾಯವಾಗಿ ಗಂಭೀರ ಸ್ಥಿತಿಯಲ್ಲಿದ್ದ ವಾನರನ ರಕ್ಷಣೆ!!

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ…

1 of 147