ಕರಾವಳಿಸ್ಥಳೀಯ

ನಾಪತ್ತೆಯಾಗಿದ್ದ ಕೋಟಿ ದರ್ಶನ ಪಾತ್ರಿಯ ಮೃತದೇಹ ಪತ್ತೆ! ಎಣ್ಮೂರು ಕೋಟಿ ಚೆನ್ನಯ ಶ್ರೀ ನಾಗಬ್ರಹ್ಮ ದೈವಸ್ಥಾನದ ಬೈದರ್ಕಳ ಗರಡಿಯ ಪಾತ್ರಿ ಗಿರೀಶ್

ನಾಪತ್ತೆಯಾಗಿದ್ದ ಕೋಟಿ ದರ್ಶನ ಪಾತ್ರಿ ಗಿರೀಶ್ ಅವರ ಮೃತದೇಹ ಬಂಟ್ವಾಳ ಸಮೀಪ ಇಂದು ಮಧ್ಯಾಹ್ನ ಪತ್ತೆಯಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಬಂಟ್ವಾಳ: ನಾಪತ್ತೆಯಾಗಿದ್ದ ಕೋಟಿ ದರ್ಶನ ಪಾತ್ರಿ ಗಿರೀಶ್ ಅವರ ಮೃತದೇಹ ಬಂಟ್ವಾಳ ಸಮೀಪ ಇಂದು ಮಧ್ಯಾಹ್ನ ಪತ್ತೆಯಾಗಿದೆ.

ಕುಕ್ಕಿಪಾಡಿ ಗ್ರಾಮದ ರಿಕ್ಷಾ ಚಾಲಕ ಗಿರೀಶ್ ಎಂಬವರು ಕಾಣೆಯಾಗಿರುವ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

SRK Ladders

ಗಿರೀಶ್ ಬುಧವಾರ ತಡರಾತ್ರಿ 2 ಗಂಟೆ ಸುಮಾರಿಗೆ ಬಾಡಿಗೆ ಹೋಗಲು ಇದೆ ಎಂದು ಹೇಳಿ ಮನೆಯಿಂದ ತೆರಳಿದ್ದರು. ಬುಧವಾರ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಪೊಳಲಿ ಗುರುಪುರ ಸೇತುವೆ ಮೇಲೆ ರಿಕ್ಷಾ ಒಂದು ಅಡ್ಡವಾಗಿ ನಿಂತಿದ್ದನ್ನು ಗಮನಿಸಿ ಪರಿಶೀಲನೆ ನಡೆಸಿದಾಗ ರಿಕ್ಷಾದಲ್ಲಿ ಯಾರೂ ಇಲ್ಲದೇ ಇರುವುದರಿಂದ ರಿಕ್ಷಾವನ್ನು ಪರಿಶೀಲಿಸಿದ ಪೊಲೀಸರು ಗಿರೀಶ ಅವರ ಮನೆಗೆ ಮಾಹಿತಿ ತಿಳಿಸಿದ್ದಾರೆ.

ಈಜುಗಾರರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ನದಿಯಲ್ಲಿ ಹುಡುಕಾಟ ನಡೆಸಿದಾಗ ಇಂದು ಮಧ್ಯಾಹ್ನ ವೇಳೆಗೆ ಮೃತದೇಹ ಪತ್ತೆಯಾಗಿದೆ. ಗಿರೀಶ್ ಎಣ್ಮೂರು ಕೋಟಿ ಚೆನ್ನಯ ಶ್ರೀ ನಾಗಬ್ರಹ್ಮ ದೈವಸ್ಥಾನದ ಬೈದರ್ಕಳ ಗರಡಿಯಲ್ಲಿ ಕೋಟಿಯ ದರ್ಶನ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3