Gl
ಸ್ಥಳೀಯ

ತುಡ‌ರ್ ತುಳು ಸಿನಿಮಾ ಜೂನ್ 14 ರಂದು ತೆರೆಗೆ

ಸುಮುಖ ಪೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ "ತುಡರ್" ತುಳು ಸಿನಿಮಾ ಜೂನ್ 14 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ನಾಯಕ ನಟ ಸಿದ್ಧಾರ್ಥ್ ಎಚ್ ಶೆಟ್ಟಿ ಹೇಳಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸುಮುಖ ಪೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ “ತುಡರ್” ತುಳು ಸಿನಿಮಾ ಜೂನ್ 14 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ನಾಯಕ ನಟ ಸಿದ್ಧಾರ್ಥ್ ಎಚ್ ಶೆಟ್ಟಿ ಹೇಳಿದರು.

rachana_rai
Pashupathi
akshaya college
Balakrishna-gowda

ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಸುರತ್ನಲ್ ನಲ್ಲಿ ಸಿನಿಗ್ಯಾಲಕ್ಕಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್. ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ಪ್ರಾನೆಟ್, ರಾಧಿಕಾ, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ ಬೆಳ್ತಂಗಡಿಯಲ್ಲಿ ಭಾರತ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆಕಾಣಲಿದೆ ಎಂದರು.

pashupathi

ಈಗಾಗಲೇ ತುಡರ್ ಸಿನಿಮಾ ವಿದೇಶದಲ್ಲಿ ಪ್ರೀಮಿಯರ್ ಶೋ ಪ್ರದರ್ಶನಗೊಂಡು ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿದೆ. ಉತ್ತಮ ಚಿತ್ರಕತೆಯನ್ನೊಳಗೊಂಡ ಸಿನಿಮಾ ಕುಟುಂಬ ವರ್ಗದವರನ್ನು ಆಕರ್ಷಿಸಿದೆ. ನಾಯಕ ನಟ ಸಿದ್ಧಾರ್ಥ್ ಶೆಟ್ಟಿ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.

ಸಿನಿಮಾಕ್ಕೆ ವಿಲ್ಸನ್ ರೆಬೆಲ್ಲೊ ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ಸಹ ನಿರ್ಮಾಪಕರು: ಹರೀಶ್ ಶೆಟ್ಟಿ, ವಿದ್ಯಾ ಸಂಪತ್ ನಿರ್ದೇಶಕರು: ತೇಜೇಶ್ ಪೂಜಾರಿ ಎಲ್ಮನ್ ಮಸ್ಕರೇನಸ್, ಕಥೆ, ಚಿತ್ರ ಕಥೆ, ಸಂಭಾಷಣೆ ಸಾಹಿತ್ಯ: ಮೋಹನ್ ರಾಜ್. ಸಂಗೀತ : ಪ್ಯಾಡ್ಮಿನ್ ಪಿರೇರಾ, ಸಾಯೀಶ್ ಭಾರದ್ಮಾಜ್ ಛಾಯಾಗ್ರಹಣ: ಚಂತೂ ಮೆಪ್ಪಯುರು, ಪ್ರೊಡಕ್ಷನ್ ಮ್ಯಾನೇಜರ್ ಕಾರ್ತಿಕ್ ರೈ ಅಡ್ಯನಡ್ಕ ನೃತ್ಯ ಸಂಯೋಜಕ ವಿಜೇತ್ R ನಾಯಕ್, ಸಂಕಲನ : ಗಣೇಶ್ ನೀರ್ಚಾಲ್, ಪ್ರಚಾರ ವಿನ್ಯಾಸ: ದೇವಿ.

ತುಡ‌ರ್ ಸಿನಿಮಾಕ್ಕೆ ಮಂಗಳೂರು ಮತ್ತು ಉಡುಪಿಯ ಆಸುಪಾಸಿನಲ್ಲಿ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆದಿದೆ.

ತಾರಾಗಣದಲ್ಲಿ ನಾಯಕನಾಗಿ ಸಿದ್ದಾರ್ಥ್ ಎಚ್. ಶೆಟ್ಟಿ, ದೀಕ್ಷಾ ಭಿಷೇ, ಅರವಿಂದ ಬೋಳಾರ್, ರೂಪ ವರ್ಕಾಡಿ, ಸದಾಶಿವ ಅಮೀನ್, ನಮಿತಾ ಕೂಳೂರು, ಎಲ್ಮನ್ ಮಶ್ವರೇನ್ಹಸ್, ವಿಕಾಸ್ ಪುತ್ರನ್, ಪುಜ್ವಲ್ ಶೆಟ್ಟಿ, ಹರ್ಷಿತಾ ಶೆಟ್ಟಿ, ರಾಧೇಶ್ ಶೆಣೈ ಅನ್ನಿತಾ ಸಾಗರ್, ಜಯಶೀಲ, ಉಮೇಶ್ ಮಿಜಾರ್, ಅಶೋಕ್ ಕುಮಾರ್, ಉದಯ ಪೂಜಾರಿ, ಮೋಹನ್ ರಾಜ್ ಇದ್ದಾರೆ ಎಂದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಪುತ್ತೂರು ಹಿಂಜಾವೇ ಪ್ರತಿಭಟನೆಯಲ್ಲಿ ಶಾಸಕರ ನಿಂದನೆ ಆರೋಪ! | ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್’ನಿಂದ ಪೊಲೀಸರಿಗೆ ದೂರು

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ…

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

1 of 101