ಸ್ಥಳೀಯ

ಪುತ್ತೂರು: ಮತ್ತೆ ಗಮನ ಸೆಳೆದ ರಾಷ್ಟ್ರಧ್ವಜ!! ರಾಷ್ಟ್ರಧ್ವಜ ಹಾರಾಟದ ಮಾಹಿತಿ ನೀಡಿದ್ದಾರೆ ನಗರಸಭೆ ಪೌರಾಯುಕ್ತೆ!

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರಾಜ್ಯದ ಮೂರನೇ ಅತೀ ದೊಡ್ಡ ರಾಷ್ಟ್ರ ಧ್ವಜ ಹಾಗೂ ತಾಲೂಕು ಕೇಂದ್ರಗಳ ಪೈಕಿ ಅತೀ ದೊಡ್ಡ ರಾಷ್ಟ್ರಧ್ವಜ ಪುತ್ತೂರಿನಲ್ಲಿ ಮತ್ತೆ ಸೋಮವಾರ ಬಾನಂಗಳದಲ್ಲಿ ರಾರಾಜಿಸಿತು.

chennai-shopping
maithri

ಕೆಲ ದಿನಗಳ ಹಿಂದೆ ಸುರಿದ ಗಾಳಿ – ಮಳೆಗೆ ರಾಷ್ಟ್ರ ಧ್ವಜ ನೆಲಕ್ಕುರುಳಿ, ಸುದ್ದಿಯಾಗಿತ್ತು. ಗಾಳಿಯ ಹೊಡೆತಕ್ಕೆ ಹಾಗೂ ಮಳೆಯ ಭಾರಕ್ಕೆ ರಾಷ್ಟ್ರಧ್ವಜ ಹರಿದು ಹೋಗಿತ್ತು. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ಸ್ತಂಭಕ್ಕೆ ಹೊಸ ರಾಷ್ಟ್ರ ಧ್ವಜವನ್ನು ಹಾಕಿರಲಿಲ್ಲ. ಇದೀಗ ವಾತಾವರಣ ತಿಳಿಯಾಗಿದ್ದು, ರಾಷ್ಟ್ರಧ್ವಜ ಎಲ್ಲರ ಗಮನ ಸೆಳೆಯುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರಸಭೆ ಪೌರಾಯುಕ್ತೆ ವಿದ್ಯಾ ಎಂ. ಕಾಳೆ, ಈ ವಾರ ವಾತಾವರಣ ತಿಳಿಯಾಗಿರುವ ಬಗ್ಗೆ ಹವಾಮಾನ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. ಇದರ ಬಗ್ಗೆ ಪುಡಾ ಜೊತೆಗೆ ಮಾತುಕತೆ ನಡೆಸಿದ್ದೇವೆ. ಮುಂದೆ ಗಾಳಿ- ಮಳೆಯ ಮುನ್ಸೂಚನೆ ಇದ್ದರೆ, ರಾಷ್ಟ್ರಧ್ವಜವನ್ನು ಇಳಿಸಲಾಗುವುದು ಎಂದು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ರಂಜಾನ್ ಹಿನ್ನೆಲೆ: ಪುತ್ತೂರಿನಲ್ಲಿ ಶಾಂತಿ ಸಭೆ | ಚರ್ಚ್ ಮುಂಭಾಗ ರಿಕ್ಷಾ ಪಾರ್ಕಿಂಗ್!! ದೇವಳ ಮುಂಭಾಗ ಭಿಕ್ಷುಕರ ಹಾವಳಿ!!

ಪುತ್ತೂರು: ಪೊಲೀಸರು ಇರುವುದು ನಮ್ಮ ರಕ್ಷಣೆಗೆ ಎನ್ನುವ ಮನೋಭಾವ ಜನರಲ್ಲಿ ಬೆಳೆಯಬೇಕು. ಕಾನೂನು…

1 of 122