ಪುತ್ತೂರು: ಇಲ್ಲಿನ ದರ್ಬೆಯ ಫಾ. ಪತ್ರಾವೋ ವೃತ್ತದ ಬಳಿ ರಸ್ತೆ ಬದಿ ಹಾಕಿದ್ದ ಒಣ ತರಗೆಲೆಗೆ ಬೆಂಕಿ ಹತ್ತಿಕೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆಯಿತು.
ದುಗ್ಗಮ್ಮ ದೇರಣ್ಣ ಸಭಾಭವನಕ್ಕೆ ಹೊಂದಿಕೊಂಡಂತಿರುವ ಗಣಪತಿ ಗುಡಿ ಬಳಿಯಲ್ಲೇ ಬೆಂಕಿ ಕಾಣಿಸಿಕೊಂಡಿತು.
ಮಧ್ಯಾಹ್ನದ ಸುಡುಬಿಸಿಲಿನ ಹೊತ್ತಿನಲ್ಲಿ ಒಣಗಿದ ತರಗೆಲೆಗಳಿಗೆ ಬೆಂಕಿ ಆವರಿಸಿಕೊಂಡಿತು. ಅಗ್ನಿಶಾಮಕ ದಳದ ಸಕಾಲಿಕ ಕ್ರಮದಿಂದ ಅವಘಡ ಸಂಭವಿಸಿಲ್ಲ.