ಸ್ಥಳೀಯ

ಅಂಗನವಾಡಿ ಪುಟಾಣಿಗಳಿಗೆ ಪಾದರಕ್ಷೆ ವಿತರಣೆ | ರೋಟರಿ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ನೇತೃತ್ವದಲ್ಲಿ ಕೊಡುಗೆ

ರೋಟರಿ ಕ್ಲಬ್ ಪುತ್ತೂರು ಹಾಗೂ ರೋಟರ್ಯಾಕ್ಟ್ ಕ್ಲಬ್‌ ಪುತ್ತೂರು ಆಶ್ರಯದಲ್ಲಿ ಮಂಜಲ್ಪಡ್ಪು ಹಾಗೂ ಸಿಟಿಗುಡ್ಡೆ ಅಂಗನವಾಡಿ ಪುಟಾಣಿಗಳಿಗೆ ಮೇ 16ರಂದು ಪಾದರಕ್ಷೆ ವಿತರಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಹಾಗೂ ರೋಟರ್ಯಾಕ್ಟ್ ಕ್ಲಬ್‌ ಪುತ್ತೂರು ಆಶ್ರಯದಲ್ಲಿ ಮಂಜಲ್ಪಡ್ಪು ಹಾಗೂ ಸಿಟಿಗುಡ್ಡೆ ಅಂಗನವಾಡಿ ಪುಟಾಣಿಗಳಿಗೆ ಮೇ 16ರಂದು ಪಾದರಕ್ಷೆ ವಿತರಿಸಲಾಯಿತು.

Shani-pooja

ಮಂಜಲ್ಪಡ್ಪು ಅಂಗನವಾಡಿಯಲ್ಲಿ ನಡೆದ ಸರಳ ಸಮಾರಂಭವನ್ನು ರೋಟರಿ ಕ್ಲಬ್ ಕಾರ್ಯದರ್ಶಿ ದಾಮೋದರ್ ಉದ್ಘಾಟಿಸಿ, ಶುಭ ಹಾರೈಸಿದರು.

ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಪಿ.ವಿ. ಸುಬ್ರಮಣಿ ಅಧ್ಯಕ್ಷತೆ ವಹಿಸಿದ್ದರು.

ಪ್ರೀತಾ ಹೆಗ್ಡೆ, ಶ್ರೀಧರ ಆಚಾರ್ಯ, ರಾಜಗೋಪಾಲ, ಆಶಾ ಕಾರ್ಯಕರ್ತೆ ಉಷಾ, ನಮಿತಾ, ಬಾಲವಿಕಾಸ ಸಮಿತಿಯ ಚಿತ್ರ, ಕವಿತಾ, ರೋಟರಾಕ್ಟ್ ಕಾರ್ಯದರ್ಶಿ ವಿಶಾಲ್, ಪದಾಧಿಕಾರಿಗಳಾದ ಹಿಮಾಂಶು, ನವೀನ್ ಚಂದ್ರ, ಸುಶಾಂತ್, ಅಂಗನವಾಡಿ ಕಾರ್ಯಕರ್ತೆ ಜಾನಕಿ, ಸಹಾಯಕರು, ಹೆತ್ತವರು ಪೋಷಕರು ಪುಟಾಣಿಗಳು ಉಪಸ್ಥಿತರಿದ್ದರು.

ದರ್ಬೆ ನಯಾ ಚಪ್ಪಲ್ ಬಜಾರ್’ನ ರಫೀಕ್ ಅವರು ಪಾದರಕ್ಷೆಗಳ ಪ್ರಾಯೋಜಕರಾಗಿ ಸಹಕರಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 122