ಪುತ್ತೂರು: ಜಿಲ್ಲಾ ಪ್ರಶಸ್ತಿ ವಿಜೇತ ಸಂಸ್ಥೆ ಬನ್ನೂರು ಸ್ಫೂರ್ತಿ ಯುವ ಸಂಸ್ಥೆಯ ಆಶ್ರಯದಲ್ಲಿ ಯಕ್ಷಗಾನ ಉಚಿತ ತರಬೇತಿ ಉದ್ಘಾಟನೆ ಬನ್ನೂರು ಶ್ರೀ ಶನೈಶ್ಚರ ದೇವರ ಸನ್ನಿಧಿಯಲ್ಲಿ ನಡೆಯಿತು.
ಯಕ್ಷಗಾನ ಕಲಾವಿದ ಗಂಗಾಧರ ಭಂಡಾರಿ ಅವರು ದೀಪ ಬೆಳಗಿಸಿ, ಶುಭಹಾರೈಸಿದರು.
ನಗರಸಭಾ ಸದಸ್ಯೆ ಗೌರಿ ಬನ್ನೂರು, ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ಪೂಜಾರಿ, ನಿವೃತ್ತ ಸೈನಿಕ ವಸಂತ ಗೌಡ, ಬಲ್ನಾಡು ಸಂಸಾರ ಕಲಾವಿದರು ತಂಡದ ವ್ಯವಸಾಪಕ ನಾಗೇಶ್ ಬಲ್ನಾಡ್, ಬನ್ನೂರು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಗುರುಪ್ರಸಾದ್ ಉಪಸ್ಥಿತರಿದ್ದರು.
ಸ್ಫೂರ್ತಿ ಬಾಲಸಭಾದ ಶಾನ್ವಿ ವಿ., ಧನ್ಯಶ್ರೀ ಪ್ರಾರ್ಥಿಸಿದರು. ತರಬೇತಿ ನೀಡಲಿರುವ ಯಕ್ಷಗಾನ ಕಲಾವಿದ ಭವಿಶ್ ಭಂಡಾರಿ ಸ್ವಾಗತಿಸಿದರು. ಯುವಕ ಮಂಡಲದ ಕಾರ್ಯದರ್ಶಿ ನಿತಿನ್ ಕೆ.ಆರ್. ವಂದಿಸಿದರು. ಕಾರ್ಯಕ್ರಮ ನಿರೂಪಿಸಿದ ಸ್ಫೂರ್ತಿ ಯುವ ಸಂಸ್ಥೆಯ ಸಂಚಾಲಕ ದಿನೇಶ್ ಸಾಲಿಯಾನ್ ಅವರು ತರಬೇತಿ ಬಗ್ಗೆ ಮಾಹಿತಿ ನೀಡಿದರು.