ಸ್ಥಳೀಯ

ರೋಟರಿ ಕ್ಲಬ್ ಪುತ್ತೂರು ಯುವ ಅತ್ಯುತ್ತಮ ಕ್ಲಬ್ ಆಗಿ ಮೂಡಿಬಂದಿದೆ‌| ರೋಟರಿ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ವಿಕ್ರಮ್ ದತ್ತ

ರೋಟರಿ ಕ್ಲಬ್ ಪುತ್ತೂರು ಯುವಕ್ಕೆ ರೋಟರಿ ಗವರ್ನರ್ ವಿಕ್ರಮ್ ದತ್ತ ಅವರ ಅಧಿಕೃತ ಭೇಟಿ ಕಾರ್ಯಕ್ರಮ ಬುಧವಾರ ಸಂಜೆ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವಕ್ಕೆ ರೋಟರಿ ಗವರ್ನರ್ ವಿಕ್ರಮ್ ದತ್ತ ಅವರ ಅಧಿಕೃತ ಭೇಟಿ ಕಾರ್ಯಕ್ರಮ ಬುಧವಾರ ಸಂಜೆ ಎಪಿಎಂಸಿ ರಸ್ತೆಯ ದಿ‌ ಪುತ್ತೂರು ಗಾರ್ಡನ್’ನಲ್ಲಿ ನಡೆಯಿತು.

maithri

ರೋಟರಿ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಮಾತನಾಡಿ, ಇಂದು ಬೆಳಿಗ್ಗೆ ಮಹಮ್ಮಾಯಿ ದೇವರ ದರ್ಶನ ಪಡೆದು, ಬಿಸಿಲ ಬೇಗೆ ತಣಿಸಲು ಕುಡಿಯುವ ನೀರಿನ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು. ನಂತರ ರೈಲ್ವೇ ನಿಲ್ದಾಣದಲ್ಲಿ ಫೀಡಿಂಗ್ ರೂಮ್ ಅನ್ನು ಉದ್ಘಾಟಿಸಿದ್ದು, ರೋಟರಿಯನ್ನು ಸಮಾಜ ತಿರುಗಿ ನೋಡುವಂತಹ ಯೋಜನೆ ಇದಾಗಿದೆ. ಸಾಂತ್ವನ ಕೇಂದ್ರಕ್ಕೆ ನೀಡಿದ ಕೊಡುಗೆಗಳ ಮಹತ್ವ ಅಲ್ಲಿನ ಸಿಬ್ಬಂದಿಗಳ ನಗುವಿನಲ್ಲಿ ಕಾಣಿಸಿದೆ. ನಂತರ ನಡೆದ ಕ್ಲಬ್ ಅಸೆಂಬ್ಲಿಯಲ್ಲಿ ಕ್ಲಬ್ಬಿನ ಒಗ್ಗಟ್ಟು ಪ್ರದರ್ಶನಗೊಂಡಿದೆ. ರೋಟರಿ ಕ್ಲಬ್ ಪುತ್ತೂರು ಯುವ ಅತ್ಯುತ್ತಮ ಕ್ಲಬ್ ಆಗಿ ಮೂಡಿಬಂದಿದ್ದು, ತಮ್ಮ ಕೆಲಸಗಳಿಗೆ ಪೂರ್ಣ ಅಂಕ ಪಡೆಯುವುದರಲ್ಲಿ ಎರಡು ಮಾತಿಲ್ಲ ಎಂದರು.

ಸರ್ವಿಸ್ ಅಬೌವ್ ಸೆಲ್ಫ್ ಎನ್ನುವುದು ರೋಟರಿ ಧ್ಯೇಯ. ಅದಕ್ಕೆ ಪೂರಕವಾಗಿ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ನಿರ್ವಹಿಸಿಕೊಂಡು ಬರುತ್ತಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಕ್ಲಬ್ಬಿಗೆ ನೀಡುವ ಹಣ ಎಲ್ಲಿಗೆ ಹೋಗುತ್ತದೆ ಎನ್ನುವುದಕ್ಕೆ ಈ ಕೆಲಸಗಳೇ ಉತ್ತರ. ಮನೆ ನಿರ್ಮಾಣ, ಕಣ್ಣಿನ ಮೂಲಕ ಜಗತ್ತಿನ ಬೆಳಕು ತೋರಿಸಿರುವುದು ಹೀಗೆ ಅನೇಕ ಉದಾಹರಣೆಗಳಿವೆ ಎಂದರು.

ಅಸಿಸ್ಟೆಂಟ್ ಗವರ್ನರ್ ಡಾ. ಹರ್ಷಕುಮಾರ್ ರೈ ಮಾಡಾವು ಮಾತನಾಡಿ, ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ. ಈ ವರ್ಷ ಹಲವು ವಿಭಿನ್ನ ಕೆಲಸಗಳನ್ನು ನಿರ್ವಹಿಸಿ ದಶಮಾನೋತ್ಸವ ಸಂಭ್ರಮಕ್ಕೆ ಮೆರುಗು ತಂದಿದೆ. ಈ ಅದ್ಭುತ ವರ್ಷಕ್ಕೆ ಕಾರಣರು ರೋಟರಿ ಗವರ್ನರ್ ವಿಕ್ರಮ್ ದತ್ತ ಎಂದರು.

ಝೋನಲ್ ಲೆಫ್ಟಿನೆಂಟ್ ಪೀಟರ್ ವಿಲ್ಸನ್ ಪ್ರಭಾಕರ್ ಶುಭ ಹಾರೈಸಿದರು. ಪಶುಪತಿ ಶರ್ಮಾ ಉಪಸ್ಥಿತರಿದ್ದರು.

ಹಿರಿಯ ವಕೀಲ ರಾಮ್ ಮೋಹನ್ ರಾವ್, ವೈದ್ಯ ಡಾ. ಸುರೇಶ್ ಪುತ್ತೂರಾಯ, ಸೈನ್ಯದಿಂದ ನಿವೃತ್ತರಾದ ಲಕ್ಷ್ಮೀಶ್ ಕಡಮಜಲು ಅವರನ್ನು ಸನ್ಮಾನಿಸಲಾಯಿತು.

ರೋಟರಿ ಕ್ಲಬ್ ಪುತ್ತೂರು ಯುವ ಚಾರಿಟೇಬಲ್ ಟ್ರಸ್ಟ್’ನ ಡೀಡ್ ಅನ್ನು ಕ್ಲಬ್ ಸ್ಥಾಪಕಾಧ್ಯಕ್ಷ ರತ್ನಾಕರ್ ರೈ ಅವರಿಗೆ ಹಸ್ತಾಂತರಿಸಲಾಯಿತು.

ಆಲಂಕಾರು ಭಾರತೀ ಹೈಯರ್ ಪ್ರೈಮರಿ ಸ್ಕೂಲ್’ಗೆ ಸ್ಯಾನಿಟರಿ ನ್ಯಾಪ್ಕಿನ್ ಬರ್ನಿಂಗ್ ಮೆಷಿನ್ ಅನ್ನು ಹಸ್ತಾಂತರಿಸಲಾಯಿತು. ಇದೇ ಸಂದರ್ಭ ಪುಣ್ಚಪ್ಪಾಡಿ ಸರಕಾರಿ ಹಿ.ಪ್ರಾ. ಶಾಲೆಗೆ ನೀರಾವರಿ ಸಲಕರಣೆಗಾಗಿ ಧನ ಸಹಾಯದ ನೆರವು ನೀಡಲಾಯಿತು.

ಕ್ಲಬ್ ಸದಸ್ಯರಾದ ಧನ್ವಂತರಿ ಕ್ಲಿನಿಕಲ್‌ ಲ್ಯಾಬೋರೇಟರಿಯ ಚೇತನ್‌ ಪ್ರಕಾಶ್ ಕಜೆ, ಕನ್ನಡ ಪರ ಸೇವೆಗಾಗಿ ಕಸಾಪ ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರನ್ನು ಗೌರವಿಸಲಾಯಿತು. ಶ್ರೀಪ್ರಕಾಶ್ ಅವರನ್ನು ಕ್ಲಬ್ಬಿಗೆ ಸೇರ್ಪಡೆಗೊಳಿಸಲಾಯಿತು.

ಕ್ಲಬ್ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ ಸ್ವಾಗತಿಸಿ, ಕಾರ್ಯದರ್ಶಿ ವಚನಾ ಜಯರಾಂ ವರದಿ ಮಂಡಿಸಿದರು. ಪ್ರಜ್ಞಾ ಮುಳಿಯ ಅತಿಥಿಗಳನ್ನು ಪರಿಚಯಿಸಿದರು. ಸನ್ಮಾನಿತರ ಪರಿಚಯವನ್ನು ಗೌರವ್ ಭಾರಧ್ವಾಜ್, ನಿಹಾಲ್ ಶೆಟ್ಟಿ ಸಭೆಯ ಮುಂದಿಟ್ಟರು. ಕುಸುಮಾಕರ್, ಸುದರ್ಶನ್ ರೈ ಸಹಕರಿಸಿದರು. ವಚನಾ ಜಯರಾಂ ವಂದಿಸಿದರು. ಭರತ್ ಪೈ, ಹೃತ್ವಿಕಾ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ನಮ್ಮ ಗ್ರಾಮಕ್ಕೆ ಅನುದಾನ ನೀಡಿಲ್ಲ ಎಂದು ಸುದ್ದಿಗೋಷ್ಠಿ ನಡೆಸಿದ ವ್ಯಕ್ತಿಯಿಂದಲೇ ಕಾಮಗಾರಿ ಉದ್ಘಾಟಿಸಿದ ಶಾಸಕ!

ಪುತ್ತೂರು: ಕುಡಿಪ್ಪಾಡಿ ಗ್ರಾಮಕ್ಕೆ ಶಾಸಕರು ಅನುದಾನ ನೀಡಿಲ್ಲ, ಇಲ್ಲಿನ ರಸ್ತೆಗಳು ಸಂಚಾರಕ್ಕೆ…

ಕಲ್ಲರ್ಪೆಯಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ | ಸಂತೆಗೆ ಆಗಮಿಸಿದೆ ಮಹಿಳೆಯರೇ ತಯಾರಿಸಿದ ಗೃಹೋಪಯೋಗಿ ಉತ್ಪನ್ನಗಳು

ಪುತ್ತೂರು: ತಾಲೂಕು ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಬುಧವಾರ ಆರ್ಯಾಪು ಗ್ರಾಮದ ಕಲ್ಲರ್ಪೆ ಬಸ್…

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

1 of 124