Gl harusha
ಕರಾವಳಿರಾಜ್ಯ ವಾರ್ತೆ

ರೈಲು ಡಿಕ್ಕಿ: ನಾಲ್ಕು ಕಾರ್ಮಿಕರ ಸಾವು!

ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಕಾರ್ಮಿಕರು ಮೃತಪಟ್ಟ ಘಟನೆ ಕೇರಳದಲ್ಲಿ ಶನಿವಾರ ಸಂಜೆ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ತಿರುವನಂತಪುರಂ: ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಕಾರ್ಮಿಕರು ಮೃತಪಟ್ಟ ಘಟನೆ ಕೇರಳದಲ್ಲಿ ಶನಿವಾರ ಸಂಜೆ ನಡೆದಿದೆ.

srk ladders
Pashupathi
Muliya

ಶೋರನೂರ್‌ ರೈಲು ನಿಲ್ದಾಣದ ಬಳಿ ಈ ದುರ್ಘಟನೆ ನಡೆದಿದ್ದು, ತಿರುವನಂತಪುರಂ ಕಡೆಗೆ ಸಾಗುತ್ತಿದ್ದ ಕೇರಳ ಎಕ್ಸ್‌ಪ್ರೆಸ್‌ ಡಿಕ್ಕಿ ಹೊಡೆದ ಪರಿಣಾಮ ತಮಿಳುನಾಡಿನ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಪೌರ ಕಾರ್ಮಿಕರು ಮೃತಪಟ್ಟಿದ್ದಾರೆ.

ರೈಲು ನಿಲ್ದಾಣದಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಶೋರನೂ‌ರ್ ಸೇತುವೆ ಬಳಿ ಹಳಿಯಿಂದ ಕಸವನ್ನು ತೆರವುಗೊಳಿಸುತ್ತಿದ್ದಾಗ ನವದೆಹಲಿ-ತಿರುವನಂತಪುರಂ ಮಾರ್ಗದ ಎಕ್ಸ್ ಪ್ರೆಸ್ ರೈಲು ಮಧ್ಯಾಹ್ನ 3.05ರ ಸುಮಾರಿಗೆ ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಡಿಕ್ಕಿಯ ರಭಸಕ್ಕೆ ಹಳಿಯಿಂದ ಕಾರ್ಮಿಕರು ಎಸೆಯಲ್ಪಟ್ಟಿದ್ದಾರೆ. ಮೂವರ ಶವಗಳನ್ನು ಈ ಸ್ಥಳದಿಂದ ಹೊರತೆಗೆಯಲಾಗಿದ್ದು, ನಾಲ್ಕನೆಯ ಮೃತದೇಹವನ್ನು ಪತ್ತೆ ಹಚ್ಚಲು ಯತ್ನಿಸಲಾಗುತ್ತಿದೆ. ಇದು ಭರತಪುಳ ನದಿಗೆ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts