ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬಗಳು ಸಾಲು ಸಾಲಾಗಿ ಬರುತ್ತಿವೆ. ಈ ರಜೆಗಳ ಸಂದರ್ಭ ಬೆಂಗಳೂರು ಮತ್ತು ಮಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳಲು ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತದೆ. ಹೀಗಾಗಿ, ಸಾರ್ವಜನಿಕರ ಬೇಡಿಕೆ ಮೇರೆಗೆ ಬೆಂಗಳೂರು, ಮಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲು ಕಾರ್ಯಾಚರಣೆ ಆರಂಭವಾಗಲಿದೆ.
ಈ ಬಗ್ಗೆ ನೈಋತ್ಯ ರೈಲ್ವೆಯು ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಮಾಹಿತಿ ನೀಡಿದೆ. ಯಾವ್ಯಾವ ಜಿಲ್ಲೆಗಳಿಗೆ ವಿಶೇಷ ರೈಲು ಓಡಿಸಲಾಗುತ್ತದೆ? ಮಾಹಿತಿ ಇಲ್ಲಿದೆ.
ಬೆಂಗಳೂರು-ಮಡಗಾಂವ್ ಎಕ್ಸ್ಪ್ರೆಸ್
• ರೈಲು ಸಂಖ್ಯೆ 06569: ಎಸ್ಎಮ್ವಿಟಿ ಬೆಂಗಳೂರು-ಮಡಗಾಂವ್ ರೈಲು ಆಗಸ್ಟ್ 26 ರಂದು ಎಸ್ಎಮ್ವಿಟಿ ಬೆಂಗಳೂರಿನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ನಸುಕಿನ ಜಾವ 5:30ಕ್ಕೆ ಮಡಗಾಂವ್ ತಲುಪಲಿದೆ.
• ಇದೇ ರೈಲು ವಾಪಸ್ 06570: ಆಗಸ್ಟ್ 27 ರಂದು ಬೆಳಿಗ್ಗೆ 6:30ಕ್ಕೆ ಮಡಗಾಂವ್ನಿಂದ ಹೊರಟು ಅದೇ ದಿನ ರಾತ್ರಿ 11:40 ಎಸ್ಎಮ್ವಿಟಿ ಬೆಂಗಳೂರು ತಲುಪಲಿದೆ.
ರೈಲು ನಿಲುಗಡೆ
ಈ ರೈಲು ಚಿಕ್ಕಬಾನಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲ ಮತ್ತು ಕಾರವಾರ ನಿಲ್ದಾಣಗಳಲ್ಲಿ ನಿಲ್ಲುತ್ತದೆ.
ಬೆಂಗಳೂರು-ಬೀದರ್
• ರೈಲು ಸಂಖ್ಯೆ 06549: ಎಸ್ಎಮ್ವಿಟಿ ಬೆಂಗಳೂರು-ಬೀದರ್ ರೈಲು ಆಗಸ್ಟ್ 26 ರಂದು ರಾತ್ರಿ 9:15ಕ್ಕೆ ಎಸ್ಎಮ್ವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 11:30ಕ್ಕೆ ಬೀದರ್ ತಲುಪಲಿದೆ.
• ಇದೇ ರೈಲು ವಾಪಸ್ 06550: ಬೀದರ್ನಿಂದ ಆಗಸ್ಟ್ 27 ರಂದು ಮಧ್ಯಾಹ್ನ 2:30ಕ್ಕೆ ಹೊರಟು ಮರುದಿನ ನಸುಕಿನ ಜಾವ 4:30ಕ್ಕೆ ಎಸ್ಎಮ್ವಿಟಿ ಬೆಂಗಳೂರು ತಲುಪಲಿದೆ.
ರೈಲು ನಿಲುಗಡೆ
ಯಲಹಂಕ, ಹಿಂದುಪುರ, ಧರ್ಮಾವರಮ್, ಅನಂತಪುರ, ಗುಂಟಕಲ್, ಅದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ, ವಾಡಿ, ಶಹಬಾದ್, ಕಲಬುರಗಿ ಮತ್ತು ಹುಮನಾಬಾದ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಬೆಂಗಳೂರು-ಹುಬ್ಬಳ್ಳಿ
• ರೈಲು ಸಂಖ್ಯೆ 07341: ಎಸ್ಎಸ್ಎಸ್ ಹುಬ್ಬಳ್ಳಿ-ಯಶವಂತಪುರ ರೈಲು ಆಗಸ್ಟ್ 25 ರಂದು ಮಧ್ಯಾಹ್ನ 3:30 ಕ್ಕೆ ಯಶವಂತಪುರದಿಂದ ಹೊರಟು ಅದೇ ದಿನ ರಾತ್ರಿ 10:40 ಕ್ಕೆ ಹುಬ್ಬಳ್ಳಿ ತಲುಪಲಿದೆ.
• ರೈಲು ಸಂಖ್ಯೆ 07342: ಯಶವಂತಪುರ- ಎಸ್ಎಸ್ಎಸ್ ಹುಬ್ಬಳ್ಳಿ ರೈಲು ಆಗಸ್ಟ್ 28 ರಂದು ಯಶವಂತಪುರದಿಂದ ಮಧ್ಯರಾತ್ರಿ 12:15 ಕ್ಕೆ ಹೊರಟು ಬೆಳಿಗ್ಗೆ 09:45 ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ತಲುಪಲಿದೆ.
ರೈಲು ನಿಲುಗಡೆ
ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ ಮತ್ತು ತುಮಕೂರು ಎರಡೂ ದಿಕ್ಕುಗಳಲ್ಲಿ ನಿಲ್ಲುತ್ತದೆ. ಬೆಂಗಳೂರು-ಮಂಗಳೂರು
ಬೆಂಗಳೂರು-ಮಂಗಳೂರು
• ರೈಲು ಸಂಖ್ಯೆ 06251: ಯಶವಂತಪುರ-ಮಂಗಳೂರು ಸೆಂಟ್ರಲ್ ರೈಲು ಯಶವಂತಪುರದಿಂದ ಆಗಸ್ಟ್ 25 ರಂದು ರಾತ್ರಿ 11:55ಕ್ಕೆ ಮರುದಿನ ಬೆಳಗ್ಗೆ 11:45 ಕ್ಕೆ ಮಂಗಳೂರು ಸೆಂಟ್ರಲ್ಗೆ ತಲುಪುತ್ತದೆ.
• ರೈಲು ಸಂಖ್ಯೆ 06252: ಮಂಗಳೂರು ಸೆಂಟ್ರಲ್-ಯಶವಂತಪುರ ರೈಲು ಆಗಸ್ಟ್ 26 ರಂದು ಮಧ್ಯಾಹ್ನ 1ಗಂಟೆಗೆ ಮಂಗಳೂರು ಸೆಂಟ್ರಲ್ನಿಂದ ಹೊರಟು ಅದೇ ದಿನ ರಾತ್ರಿ 10:40 ಕ್ಕೆ ಯಶವಂತಪುರ ತಲುಪುತ್ತದೆ.
• ರೈಲು ಸಂಖ್ಯೆ 06253: ಯಶವಂತಪುರ-ಮಂಗಳೂರು ಸೆಂಟ್ರಲ್ ರೈಲು ಆಗಸ್ಟ್ 26 ರಂದು ಯಶವಂತಪುರದಿಂದ ರಾತ್ರಿ 11:55 ಕ್ಕೆ ಹೊರಟು ಮರುದಿನ ಬೆಳಗ್ಗೆ 11:45 ಮಂಗಳೂರು ಸೆಂಟ್ರಲ್ ತಲುಪುತ್ತದೆ.
• ರೈಲು ಸಂಖ್ಯೆ 06254: ಮಂಗಳೂರು ಸೆಂಟ್ರಲ್-ಯಶವಂತಪುರ ರೈಲು ಆಗಸ್ಟ್ 27 ರಂದು ಮಧ್ಯಾಹ್ನ 2:15 ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಟು ಅದೇ ದಿನ ರಾತ್ರಿ 11:50 ಕ್ಕೆ ಯಶವಂತಪುರ ತಲುಪಲಿದೆ.
ರೈಲು ನಿಲುಗಡೆ
ಈ ರೈಲುಗಳು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು ಮತ್ತು ಬಂಟವಾಳದಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆಗಳಿವೆ.
ರೈಲು ಸಂಚಾರ ದಿನಾಂಕ ವಿಸ್ತರಣೆ
• ಈ ಹಿಂದೆ ಆಗಸ್ಟ್ 31 ರವರೆಗೆ ಸಂಚರಿಸುವುದಾಗಿ ತಿಳಿಸಲಾಗಿದ್ದ ರೈಲು ಸಂಖ್ಯೆ 06539 SMVT ಬೆಂಗಳೂರು-ಬೀದರ್ ದ್ವೈವಾರಿಕ ವಿಶೇಷ ಎಕ್ಸ್ಪ್ರೆಸ್ ರೈಲು, ಸೆಪ್ಟೆಂಬರ್ 05 ರಿಂದ 28 ರವರೆಗೆ ಸಂಚರಿಸಲಿದೆ.
• ಈ ಹಿಂದೆ ಸೆಪ್ಟೆಂಬರ್ 01 ರವರೆಗೆ ಸಂಚರಿಸುವುದಾಗಿ ಸೂಚಿಸಲಾಗಿದ್ದ ರೈಲು ಸಂಖ್ಯೆ 06540 ಬೀದರ್-SMVT ಬೆಂಗಳೂರು ದ್ವೈವಾರಿಕ ವಿಶೇಷ ಎಕ್ಸ್ಪ್ರೆಸ್ ರೈಲು ಈಗ ಸೆಪ್ಟೆಂಬರ್ 06 ರಿಂದ 29 ರವರೆಗೆ ಸಂಚರಿಸಲಿದೆ.
• ಈ ಹಿಂದೆ ಆಗಸ್ಟ್ 25 ರವರೆಗೆ ಮಾತ್ರ ಸಂಚರಿಸುವುದಾಗಿ ಸೂಚಿಸಲಾಗಿದ್ದ ರೈಲು ಸಂಖ್ಯೆ 07315 SSS ಹುಬ್ಬಳ್ಳಿ-ಮುಜಫರ್ಪುರ್ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್, ಈಗ ಸೆಪ್ಟೆಂಬರ್ 01 ರಿಂದ 22 ರವರೆಗೆ ಸಂಚರಿಸಲಿದೆ.
• ಈ ಹಿಂದೆ ಆಗಸ್ಟ್ 28 ರವರೆಗೆ ಮಾತ್ರ ಓಡುವುದಾಗಿ ತಿಳಿಸಲಾಗಿದ್ದ ರೈಲು ಸಂಖ್ಯೆ 07316 ಮುಜಫರ್ಪುರ್-ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್, ಈಗ ಸೆಪ್ಟೆಂಬರ್ 04 ರಿಂದ 12 ರವರೆಗೆ ಓಡಲಿದೆ.
• ಈ ಹಿಂದೆ ಆಗಸ್ಟ್ 25 ರವರೆಗೆ ಮಾತ್ರ ಓಡುವುದಾಗಿ ತಿಳಿಸಲಾಗಿದ್ದ ರೈಲು ಸಂಖ್ಯೆ 07311 ವಾಸ್ಕೋ ಡ ಗಾಮಾ-ಮುಜಫರ್ ಪುರ್ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್, ಈಗ ಸೆಪ್ಟೆಂಬರ್ 8 ರಿಂದ 22 ರವರೆಗೆ ಓಡಲಿದೆ.
- Home
- ರಾಜ್ಯ ವಾರ್ತೆ
- ಹಬ್ಬಗಳ ಸಾಲು: ಬೆಂಗಳೂರು, ಮಂಗಳೂರಿನಿಂದ ವಿಶೇಷ ರೈಲು – ವಿವರ ಹೀಗಿದೆ
ಹಬ್ಬಗಳ ಸಾಲು: ಬೆಂಗಳೂರು, ಮಂಗಳೂರಿನಿಂದ ವಿಶೇಷ ರೈಲು – ವಿವರ ಹೀಗಿದೆ
What's your reaction?
- 3294c
- 3194cc
- 31ai technology
- 30ajjavara
- 30alwas
- 29apology
- 29artificial intelegence
- 29avg
- 28belthangady-provocative-speech-case-conviction
- 28bihar minister
- 27bjp
- 27bjp leader
- 26bjp national president
- 26bt ranjan
- 25co-operative
- 25coastal
- 24Court convicts accused in provocative speech case
- 24crime
- 23crime news
- 23cyclothon
- 23darmasthala
- 22death news
- 22dust bin
- 21education
- 21fraud
- 20gl
- 20gods own country
- 19gold
- 19google for education
- 18independence
- 18jewel
- 17jewellers
- 17jnana vikasa
- 17karnataka state
- 16kerala village
- 16kukke - kollur temple
- 15lokayuktha
- 15lokayuktha raid
- 14Mangalore
- 14manipal
- 13minister krishna bairegowda
- 13mla ashok rai
- 12mohan alwa
- 12mudubidre
- 12nidana news
- 11nirvathu mukku
- 11nitin nabin
- 10police
- 10ptr tahasildar
- 9puttur
- 9puttur news
- 8puttur tahasildar
- 8republic
- 7revenue
- 7revenue department
- 6revenue minister
- 6school
- 6senior citizen
- 5silver
- 5society
- 4sowmya
- 4students
- 3tahasildar
- 3tahasildar absconded
- 2teachers
- 2tour
- 1trending
- 1udupi
- 0wastage
Related Posts
ರಾಜ್ಯದ ದೇವಾಲಯಗಳ ಆಸ್ತಿ ವೆಬ್ಸೈಟ್ನಲ್ಲಿ ಪ್ರಕಟಿಸಿ: ಹೈಕೋರ್ಟ್ ಮಹತ್ವದ ನಿರ್ದೇಶನ..!!
ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ ದೇವಾಲಯಗಳ…
ಪಡಿತರ ಚೀಟಿದಾರರಿಗೆ ಸರ್ಕಾರದ ಸೂಚನೆ: ಇ-ಕೆವೈಸಿಗೆ ಸೆ.30 ಕೊನೆಯ ಗಡುವು..!!
ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ ಹೊರಬಿದ್ದಿದ್ದು, ಅರ್ಹ ಫಲಾನುಭವಿಗಳು…
ಬಸ್ ಪ್ರಯಾಣ ದರ ಅಲ್ಪ ಪ್ರಮಾಣದಲ್ಲಿ ಏರಿಕೆ: ಸಾರಿಗೆ ಸಚಿವ ಬೈರತಿ ಸುರೇಶ್ ಮುನ್ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಹೆಚ್ಚಿನ…
ವಂದೇ ಮಾತರಂಗೆ ಅವಮಾನ ಆರೋಪ: ಸೋನಿಯಾ ಗಾಂಧಿ ವಿರುದ್ಧ ವಿಕಾಸ್ ಪುತ್ತೂರು ದೂರು
ಮಂಗಳೂರು: ವಂದೇ ಮಾತರಂ ಗೀತೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ವಿಕಾಸ್…
ವಾಲ್ಮೀಕಿ ನಿಗಮ ಹಗರಣ: ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಆ.21ರಂದು ಪುತ್ತೂರಿನಲ್ಲಿ ಬಿಜೆಪಿ ಪ್ರತಿಭಟನೆ
ಪುತ್ತೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ…
ಕೇರಳದ ಹೆಸರು ಇನ್ನು ‘ಕೇರಳಂ’: ರಾಷ್ಟ್ರಪತಿ ಮುರ್ಮು ಒಪ್ಪಿಗೆ
ಹೊಸದಿಲ್ಲಿ: ಕೇರಳ ರಾಜ್ಯದ ಹೆಸರನ್ನು ‘ಕೇರಳ’ದಿಂದ ‘ಕೇರಳಂ’ ಎಂದು ಬದಲಾಯಿಸುವ ಕೇರಳ (ಹೆಸರು…
5, 8 ಮತ್ತು 9ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಸುಪ್ರೀಂ ತಡೆ
ನವದೆಹಲಿ: ರಾಜ್ಯಾದ್ಯಂತ ಮಂಗಳವಾರ 5,8 ಮತ್ತು 9ನೇ ತರಗತಿ ಮೌಲ್ಯಾಂಕನ ಪರೀಕ್ಷೆ ಯಶಸ್ವಿಯಾಗಿ…
ಗುರುವಾರ ರಾಜ್ಯದ ಎಲ್ಲಾ ಕೋರ್ಟ್’ಗಳಿಗೂ ರಜೆ!
ರಾಜ್ಯದಲ್ಲಿ ಹೋಲಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ನ್ಯಾಯಾಲಯ ಕಲಾಪಕ್ಕೆ ರಜೆ ಘೋಷಿಸಲಾಗಿದೆ.
ಮಾ.9 ರಾಜ್ಯ ಪೊಲೀಸರ ಮ್ಯಾರಥಾನ್
ರಾಜ್ಯ ಪೊಲೀಸ್ ಇಲಾಖೆಯು ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ 'ನಮ್ಮ…
ರಾಯರ ಮಠದೊಳಗೆ ಚಪ್ಪಲಿ ಎಸೆದ ಅಪರಿಚಿತೆ: ಆಕ್ರೋಶ!!
ಬೆಂಗಳೂರು: ರಾಯರ ಮಠದೊಳಗೆ ಅಪರಿಚಿತೆಯೋರ್ವರು ಚಪ್ಪಲಿ ಎಸೆದು ಪರಾರಿಯಾದ ಘಟನೆ ನಡೆದಿದೆ.

















