Gl ugadhi
ರಾಜ್ಯ ವಾರ್ತೆ

ಕರ್ನಾಟಕ ಬಂದ್: ಕೆಲ ಸಂಘಟನೆಗಳಿಂದ ಬಂದ್ ಗಿಲ್ಲ ಬೆಂಬಲ!

ಮಾರ್ಚ್ 22ರಂದು ಶನಿವಾರ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಹಲವು ಸಂಘಟನೆಗಳು ನೈತಿಕ ಬೆಂಬಲ ಮಾತ್ರ ಘೋಷಿಸಿವೆ.ಸಂಪೂರ್ಣ ಬಂದ್ ಗೆ ಬೆಂಬಲ ವ್ಯಕ್ತಪಡಿಸಿಲ್ಲ.

ಈ ಸುದ್ದಿಯನ್ನು ಶೇರ್ ಮಾಡಿ

ಮಾರ್ಚ್ 22ರಂದು ಶನಿವಾರ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಹಲವು ಸಂಘಟನೆಗಳು ನೈತಿಕ ಬೆಂಬಲ ಮಾತ್ರ ಘೋಷಿಸಿವೆ.ಸಂಪೂರ್ಣ ಬಂದ್ ಗೆ ಬೆಂಬಲ ವ್ಯಕ್ತಪಡಿಸಿಲ್ಲ.

srk ladders
Pashupathi
Muliya

ಕನ್ನಡಿಗರ ಮೇಲೆ ಹಲ್ಲೆ, ಪರಭಾಷಿಕರಿಂದ ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ ವಿವಿಧ ಭೇಡಿಕೆ ಮುಂದಿಟ್ಟು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.

ಕೆಲ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಕೊಡುತ್ತೇವೆ. ಆದರೆ ಬಂದ್ ಗೆ ಬೆಂಬಲ ನೀಡಲ್ಲ ಎಂದಿದ್ದಾರೆ. ಖಾಸಗಿ ಶಾಲೆಗಳ ಒಕ್ಕೂಟ ಬಂದ್ ಗೆ ಬೆಂಬಲ ನೀಡಿಲ್ಲ. ಇದು ಪರೀಕ್ಷಾ ಸಮಯವಾಗಿರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ಬಂದ್‌ ಸರಿಯಲ್ಲ ಎಂದು ತಿಳಿಸಿದೆ.

ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ಬಂದ್ ಗೆ ಬೆಂಬಲ ವಿಲ್ಲ. ಆದರೆ ಹೋರಾಟ, ಪ್ರತಿಭಟನೆಯನ್ನು ಬೆಂಬಲಿಇಸುತ್ತೇವೆ ಎಂದಿದೆ. ಇನ್ನು ಹೊಟೆಲ್ ಮಾಲೀಕರ ಸಂಘ ಬಂದ್‌ ಬೆಂಬಲವಿಲ್ಲ ಎಂದು ತಿಳಿಸಿದೆ.

ಹೋರಾಟಕ್ಕೆ ನೈತಿಕವಾಗಿ ಬೆಂಬಲ ಘೋಷಿಸುತ್ತೇವೆ. ಆದರೆ ಹೋಟೆಲ್ ಬಂದ್‌ ಇರಲ್ಲ. ಕಾರಣ ಆಹಾರ ಎಲ್ಲರಿಗೂ ಅಗತ್ಯ ಹೋಟೆಲ್ ಬಂದ್ ಮಾಡಿದರೆ ಎಲ್ಲರಿಗೂ ತೊಂದರೆ ಆಗುತ್ತದೆ. ಅಲ್ಲದೇ ವ್ಯಾಪಾರಕ್ಕೂ ನಷ್ಟವಾಗುತ್ತದೆ. ಹಾಗಾಗಿ ಹೋಟೆಲ್ ಬಂದ್ ಇರಲ್ಲ ಎಂದು ತಿಳಿಸಿದೆ.

ಮಾ.22ರಂದು ನಡೆಯಲಿರುವ ಬಂದ್‌ನಿಂದ ಪಿಯು ಮೌಲ್ಯಮಾಪನ ಮತ್ತು ಮೌಲ್ಯಮಾಪಕರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ರಾಜ್ಯದ ಶಕ್ತಿಕೇಂದ್ರಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರ! ಯು.ಟಿ. ಖಾದರ್’ಗೆ ಅಭಿನಂದನೆ‌ ತಿಳಿಸಿದ ಸಿದ್ದರಾಮಯ್ಯ

ವಿಧಾನಸೌಧಕ್ಕೆ ಇದೀಗ ಸರಕಾರವು 5 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ವಿದ್ಯುತ್‌ ದೀಪಾಲಂಕಾರದ…

ಕರ್ನಾಟಕ ಪೊಲೀಸರಿಗೆ ‘ಸ್ಮಾರ್ಟ್ ಪೀಕ್ ಹ್ಯಾಟ್’, ಶೀಘ್ರ ಬ್ರಿಟಿಷ್ ಕಾಲದ ಟೋಪಿಗೆ ಬೀಳುತ್ತೆ ಬ್ರೇಕ್..!!

ಪ್ರಸ್ತುತ ಕರ್ನಾಟಕದಲ್ಲಿ ಪೊಲೀಸರು ಬ್ರಿಟಿಷರ ಕಾಲದ ಟೋಪಿಗಳನ್ನೇ ಬಳಸುತ್ತಿದ್ದಾರೆ. ಈ ಒಂದು…

ಖಾಸಗಿ ವಾಹನದಲ್ಲಿ ‘ಪೊಲೀಸ್’ ಎಂದು ಬರೆದಿದ್ದರೆ ಕ್ರಮ! ವಿಧಾನಸೌಧದಲ್ಲಿ ಗಮನ ಸೆಳೆದ ಗೃಹ ಸಚಿವರ ರಿಪ್ಲೈ!!

ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್‌ ಎಂದು…