ಪುತ್ತೂರು: ಮೂಡುಬಿದರೆಯಲ್ಲಿ ನಡೆಯುತ್ತಿದ್ದ ಆಟೋ ಕ್ರಾಸ್ ಡರ್ಟ್ ರೇಸಿಂಗ್ ಈ ಬಾರಿ ಪುತ್ತೂರಿನ ಆತೂರಿನಲ್ಲಿ ಆಯೋಜನೆಗೊಳ್ಳಲಿದೆ. ಫೆಬ್ರವರಿ 9ರಂದು ಉಪ್ಪಿನಂಗಡಿ ಸಮೀಪದ ಆತೂರಿನಲ್ಲಿ ಈ ಕಾರ್ ರೇಸ್ ಅನ್ನು ಆಯೋಜನೆ ಮಾಡಲಾಗಿದೆ ಎಂದು ರೇಸ್ ಆಯೋಜಕ ನಜೀರ್ ಕೆ.ಟಿ. ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮೂಡುಬಿದರೆಯಲ್ಲಿ ಎರಡು ಬಾರಿ ಕಾರ್ ರೇಸ್ ಆಯೋಜನೆ ಮಾಡಲಾಗಿತ್ತು. ಇದೀಗ ಪುತ್ತೂರಿನಲ್ಲಿ ರೇಸ್ ನಡೆಸಲಾಗುತ್ತಿದೆ. ಸುಮಾರು ಒಂದು ಕಾಲು ಕಿಲೋ ಮೀಟರಿನ ಟ್ರ್ಯಾಕಿನಲ್ಲಿ ರೇಸ್ ಕಾರ್ ಗಳು ತಮ್ಮ ಚಮತ್ಕಾರ ಪ್ರದರ್ಶಿಸಲಿವೆ. 13 ವಿಭಾಗಗಳಲ್ಲಿ ಸ್ಪರ್ಧೆ ಆಯೋಜನೆ ಮಾಡಿದ್ದು, ಗೆದ್ದವರಿಗೆ ಟ್ರೋಫಿ ನೀಡಲಾಗುವುದು ಎಂದು ವಿವರಿಸಿದರು.
ಫೆ. 9ರಂದು ಕರ್ನಾಟಕ ವಿಧಾನ ಸಭೆಯ ಸಭಾಪತಿ ಯು.ಟಿ. ಖಾದರ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅವರು ಅಧ್ಯಕ್ಷತೆ ವಹಿಸುವರು ಎಂದರು.