ಕ್ರೀಡೆ

ಭಾರತ ಮತ್ತು ಪಾಕಿಸ್ಥಾನದ ಮಧ್ಯೆ ನಡೆಯಲಿದ್ದ ಚೊಚ್ಚಲ ಖೋ ಖೋ ವಿಶ್ವಕಪ್ ಪಂದ್ಯಾವಳಿ ರದ್ದು..!

ಖೋಖೋ ವಿಶ್ವಕಪ್ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ. ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಮೊದಲ ಪಂದ್ಯ ಏರ್ಪಡಿಸಲಾಗಿತ್ತು. ಆದರೆ ಪಾಕಿಸ್ತಾನ ತಂಡ ಭಾರತಕ್ಕೆ ಬರಲು ಸಾಧ್ಯವಾಗದ ಕಾರಣ ಉಭಯ ತಂಡಗಳ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಈ ಕುರಿತು ಖೋಖೋ ಫೆಡರೇಷನ್ ಆಫ್ ಇಂಡಿಯಾ (ಕೆಕೆಎಫ್‌ಐ) ಪ್ರಕಟಣೆ ಹೊರಡಿಸಿದೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ಜನವರಿ 13 ರಿಂದ ಭಾರತದಲ್ಲಿ ಚೊಚ್ಚಲ

Shani-pooja

ಬಾರಿಗೆ ಖೋಖೋ ವಿಶ್ವಕಪ್ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ. ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಮೊದಲ ಪಂದ್ಯ ಏರ್ಪಡಿಸಲಾಗಿತ್ತು. ಆದರೆ ಪಾಕಿಸ್ತಾನ ತಂಡ ಭಾರತಕ್ಕೆ ಬರಲು ಸಾಧ್ಯವಾಗದ ಕಾರಣ ಉಭಯ ತಂಡಗಳ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಈ ಕುರಿತು ಖೋಖೋ ಫೆಡರೇಷನ್ ಆಫ್ ಇಂಡಿಯಾ (ಕೆಕೆಎಫ್‌ಐ) ಪ್ರಕಟಣೆ ಹೊರಡಿಸಿದೆ.

ಕೆಕೆಎಫ್‌ಐ ನೀಡಿದ ಮಾಹಿತಿ ಪ್ರಕಾರ, ಖೋಖೋ ವಿಶ್ವಕಪ್‌ 2025ರ ಮೊದಲ ಆವೃತ್ತಿಯಲ್ಲಿ ಪಾಕಿಸ್ತಾನ ಭಾಗವಹಿಸುವುದಿಲ್ಲ ಎಂದು ಘೋಷಿಸಿತು.

ವೇಳಾಪಟ್ಟಿಯ ಪ್ರಕಾರ ಜನವರಿ 13 ರಂದು ಭಾರತ- ಪಾಕಿಸ್ತಾನ ಮಧ್ಯೆ ಪಂದ್ಯಗಳು ನಡೆಯಬೇಕಿತ್ತು.

ಆದರೆ ಪಾಕ್‌ ತಂಡಕ್ಕೆ ವೀಸಾ ವಿಳಂಬವಾಗಿದ್ದರಿಂದ ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಭಾರತವು ಮೊದಲ ಪಂದ್ಯದಲ್ಲಿ ಪಾಕ್ ಬದಲಿಗೆ ನೇಪಾಳವನ್ನು ಎದುರಿಸಲಿದೆ ಎಂದು ಖೋಖೋ ಫೆಡರೇಷನ್ ಆಫ್ ಇಂಡಿಯಾ ಹೇಳಿಕೆ ಬಿಡುಗಡೆ ಮಾಡಿದೆ. ಪಾಕ್ ಭಾಗಿಯಾಗಲು ಸಾಧ್ಯವಾಗದ ಕಾರಣು ಖೋಖೋ ವಿಶ್ವಕಪ್‌ನಲ್ಲಿ 40 ತಂಡಗಳ ಬದಲಿಗೆ 39 ತಂಡಗಳು ಭಾಗವಹಿಲಿವೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರಿನಲ್ಲಿ ಇದೇ ಮೊದಲ ಬಾರಿಗೆ ಕಾರ್ ರೇಸ್ ಚಮತ್ಕಾರ!ಫೆ. 9ರಂದು ಆತೂರಿನಲ್ಲಿ ನಡೆಯಲಿದೆ ಆಟೋ ಕ್ರಾಸ್ ಡರ್ಟ್ ರೇಸಿಂಗ್!

ಮೂಡುಬಿದರೆಯಲ್ಲಿ ನಡೆಯುತ್ತಿದ್ದ ಆಟೋ ಕ್ರಾಸ್ ಡರ್ಟ್ ರೇಸಿಂಗ್ ಈ ಬಾರಿ ಪುತ್ತೂರಿನ ಆತೂರಿನಲ್ಲಿ…

ಸವಾಲು, ಸಮಸ್ಯೆ ಬದುಕಿನ ಸಾಧನೆಗೆ ಸ್ಫೂರ್ತಿ | ರಾಮಕುಂಜದಲ್ಲಿ ಮೈಸೂರು ವಿಭಾಗ ಮಟ್ಟದ ಕಬಡ್ಡಿ ಉದ್ಘಾಟಿಸಿ ಭಾಗೀರಥಿ ಮುರುಳ್ಯ

ಕ್ರೀಡೆಯಲ್ಲಿ ಭಾಗವಹಿಸುವುದು ಬಹುಮಾನ ಗಿಟ್ಟಿಸಿಕೊಳ್ಳುವ ಲೆಕ್ಕಚಾರಕ್ಕೆ ಸೀಮಿತವಾಗದೆ ಪ್ರತಿಭೆ…

ಪ್ರೀಮಿಯರ್ ಲೀಗ್: ಕ್ರಿಸ್ ಗೇಲ್ ದಾಖಲೆ ಧೂಳೀಪಟ! ಸ್ಫೋಟಕ ದಾಳಿ ನಡೆಸಿದ ರೊಮಾರಿಯೊ ಶೆಫರ್ಡ್’ನಿಂದ ಹೊಸ ದಾಖಲೆ!

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರೊಮಾರಿಯೊ ಶೆಫರ್ಡ್ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ…