ಧಾರ್ಮಿಕ

ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪ: ನಾಲ್ವರ ಸೆರೆ

ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ)ದ ಲಡ್ಡು ಪ್ರಸಾದ ಸಿದ್ಧಪಡಿಸಲು ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪ ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ 4 ಮಂದಿಯನ್ನು ಬಂಧಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ)ದ ಲಡ್ಡು ಪ್ರಸಾದ ಸಿದ್ಧಪಡಿಸಲು ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪ ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ 4 ಮಂದಿಯನ್ನು ಬಂಧಿಸಿದೆ.

maithri

ಬಂಧಿತರಲ್ಲಿ ಎ.ಆರ್ ಡೈರಿ ಮಾಲೀಕ ಆ್ಯಂಡಿ ರಾಜಶೇಖರನ್, ಉತ್ತರ ಪ್ರದೇಶದ ಪರಾಗ್ ಡೈರಿ, ಪ್ರೀಮಿಯರ್ ಅಗೋ ಫುಡ್ಸ್ ಮತ್ತು ಆಲ್ಫಾ ಮಿಲ್ಕ್ ಫುಡ್ಸ್‌ನ ಪ್ರಮುಖರನ್ನು 3 ದಿನಗಳಿಂದ ತಿರುಪತಿಯಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು. ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಹೇಳಿದೆ. ಬಂಧಿತರನ್ನು ಸೋಮವಾರ ತಿರುಪತಿಯ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಇದೆ.

ನಿಯಮಗಳನ್ನು ಮೀರಿ ಲಡ್ಡು ಪ್ರಸಾದ ತಯಾರಿಕೆಗೆ ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪ ಪೂರೈಕೆ ಮಾಡಿದ ಆರೋಪವನ್ನು ಬಂಧಿತರ ವಿರುದ್ಧ ಹೊರಿಸಲಾಗಿದೆ. ಜತೆಗೆ ಅವರು ಭಾಗಿಯಾಗಿರುವ ಬಗ್ಗೆ ಪ್ರಾಥಮಿಕ ಮಟ್ಟದಲ್ಲಿ ಪುರಾವೆಗಳೂ ಇವೆ ಎನ್ನಲಾಗಿದೆ. ಉತ್ತರ ಭಾರತದ ರಾಜ್ಯಗಳಿಂದ ತುಪ್ಪ ಖರೀದಿ ಬಗ್ಗೆ ಟಿಟಿಡಿ ಮಾಡಿಕೊಂಡಿರುವ ಒಪ್ಪಂದದಲ್ಲೂ ಈ ಸಂಸ್ಥೆಗಳು ಅವ್ಯವಹಾರ ನಡೆಸಿವೆ ಎನ್ನಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಜೂನ್ 7ರಂದು ಸಾಮೂಹಿಕ ಸರಸ್ವತೀ ವಂದನೆ, ವಿದ್ಯಾ ಸಂಕಲ್ಪ | ಶಾಲಾ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲು ಕರೆ

ಪುತ್ತೂರು: ಪ್ರಸ್ತುತ ವರ್ಷದ ಶಾಲಾ ಹಾಗೂ ಕಾಲೇಜುಗಳ ಆರಂಭದ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ…