Gl jewellers
ಧಾರ್ಮಿಕ

ಫೆ. 8ರಂದು 20ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ | ಬನ್ನೂರು ಸ್ಫೂರ್ತಿ ಯುವಕ-ಯುವತಿ ಮಂಡಲ, ಮಹಿಳಾ ಮಂಡಲ, ಬಾಲಸಭಾದ 35ನೇ ವಾರ್ಷಿಕೋತ್ಸವ

Karpady sri subhramanya
ಪುತ್ತೂರು: ಬನ್ನೂರು ಸ್ಪೂರ್ತಿ ಮೈದಾನದ ಶ್ರೀ ಶನೀಶ್ವರ ದೇವರ ಸನ್ನಿಧಿಯಲ್ಲಿ ಫೆ. 8ರಂದು ಬೆಳಿಗ್ಗೆ 9ರಿಂದ 20ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ನಡೆಯಲಿದೆ ಎಂದು ಸ್ಫೂರ್ತಿ ಯುವ ಸಂಸ್ಥೆ ಸಂಚಾಲಕ ದಿನೇಶ್ ಸಾಲ್ಯಾನ್ ಹೇಳಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬನ್ನೂರು ಸ್ಪೂರ್ತಿ ಮೈದಾನದ ಶ್ರೀ ಶನೀಶ್ವರ ದೇವರ ಸನ್ನಿಧಿಯಲ್ಲಿ ಫೆ. 8ರಂದು ಬೆಳಿಗ್ಗೆ 9ರಿಂದ 20ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ನಡೆಯಲಿದೆ ಎಂದು ಸ್ಫೂರ್ತಿ ಯುವ ಸಂಸ್ಥೆ ಸಂಚಾಲಕ ದಿನೇಶ್ ಸಾಲ್ಯಾನ್ ಹೇಳಿದರು.

SRK Ladders
Akshaya College

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 9 ಗಂಟೆಗೆ ಗಣಪತಿ ಹೋಮ ನಡೆದು ಶನೀಶ್ವರ ಪೂಜೆ ಪ್ರಾರಂಭಗೊಳ್ಳಲಿದೆ. ಮಧ್ಯಾಹ್ನ ಮಹಾಮಂಗಳಾರತಿ ನಡೆದು, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ಮಧ್ಯಾಹ್ನ 1 ಗಂಟೆಯಿಂದ ಶ್ರೀ ಶನೀಶ್ವರ ಕುಣಿತ ಭಜನಾ ಮಂಡಳಿಯಿಂದ ಕುಣಿತ ಭಜನೆ ನಡೆಯಲಿದೆ ಎಂದರು.

ಮಧ್ಯಾಹ್ನ 12 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ನಗರಸಭೆ ಉಪಾಧ್ಯಕ್ಷ ಬಾಲಚಂದ್ರ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮುಖ್ಯ ಅತಿಥಿಗಳಾಗಿರುವರು ಎಂದರು.

ರಾತ್ರಿ 7 ಗಂಟೆಗೆ ಜಿಲ್ಲಾ ಪ್ರಶಸ್ತಿ ವಿಜೇತ ಸ್ಫೂರ್ತಿ ಯುವಕ – ಯುವತಿ ಮಂಡಲ, ಸ್ಫೂರ್ತಿ ಮಹಿಳಾ ಮಂಡಲ, ಸ್ಫೂರ್ತಿ ಬಾಲಸಭಾದ 35ನೇ ವಾರ್ಷಿಕೋತ್ಸವ ಸಮಾರಂಭ ನಡೆಯಲಿದ್ದು, ಯುವ ಸಬಲೀಕರಣ ಕ್ರೀಡಾ ಇಲಾಖೆಯ ಪುತ್ತೂರು ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವು ಅಧ್ಯಕ್ಷತೆ ವಹಿಸುವರು. ಕಟ್ಟೆಮಾರು ಮಂತ್ರದೇವತೆ ಸಾನಿಧ್ಯದ ಧರ್ಮದರ್ಶಿ ಮನೋಜ್ ಕಟ್ಟೆಮಾರು ದೀಪ ಪ್ರಜ್ವಲನೆಗೊಳಿಸಲಿದ್ದಾರೆ. ಕರ್ನಾಟಕ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್, ಶಾಸಕ ಅಶೋಕ್ ಕುಮಾರ್ ರೈ, ನಗರಸಭೆ ಅಧ್ಯಕ್ಷೆ ಲೀಲಾವತಿ ಕೃಷ್ಣನಗರ, ನಗರಸಭೆ ಸದಸ್ಯೆ ಗೌರಿ, ನಗರ ಠಾಣೆ ನಿರೀಕ್ಷಕ ಜಾನ್ಸನ್ ಡಿಸೋಜ ಮುಖ್ಯ ಅತಿಥಿಯಾಗಿರುವರು. ಇದೇ ಸಂದರ್ಭ ಶಿವನಗರ ಶಿವಮಣಿ ಕಲಾ ಸಂಘದ ಸಂಚಾಲಕ ಕೆ.ಎಸ್. ಮನು ಕುಮಾರ್ ಅವರಿಗೆ ಸ್ಫೂರ್ತಿಶ್ರೀ ಪ್ರಶಸ್ತಿ ಪ್ರದಾನ ನಡೆಯಲಿದೆ. ನಿವೃತ್ತ ಸೈನಿಕ ಅಶೋಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖರ ಭಂಡಾರಿ, ಯಕ್ಷಗಾನ ಕಲಾವಿದ ಗಂಗಾಧರ ಭಂಡಾರಿ ಅವರನ್ನು ಸನ್ಮಾನಿಸಲಾಗುವುದು. ಲೈನ್’ಮ್ಯಾನ್’ಗಳಾದ ಸಂತೋಷ್, ಪೂವಪ್ಪ ಗೌಡ, ಜಗದೀಶ, ಶೇಖರ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಸಾತ್ವಿಕ್, ಹಿತೇಶ್ ಅವರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದರು.

ಸಂಜೆ 5.30ರಿಂದ ಅಂಗನವಾಡಿ ಪುಟಾಣಿಗಳಿಂದ, ಶಾಲಾ ಮಕ್ಕಳಿಂದ, ಸಂಘ – ಸಂಸ್ಥೆಗಳ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 11 ಗಂಟೆಯಿಂದ ಬದ್ಕೆರೆ ಕಲ್ಪಿ ಖ್ಯಾತಿಯ ಸಂಸಾರ ಕಲಾವಿದೆರ್ ಪುತ್ತೂರು ಅಭಿನಯದಲ್ಲಿ ಮಾರ್ನೆಮಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಯುವಕ ಮಂಡಲ ಅಧ್ಯಕ್ಷ ದೀಪಕ್ ಆಚಾರ್ಯ, ಕಾರ್ಯದರ್ಶಿ ನಿತಿನ್ ಕುಮಾರ್, ಸಂಘಟನಾ ಕಾರ್ಯದರ್ಶಿ ಶರತ್ ಕುಮಾರ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಶೇರ್ ಮಾಡಿ

Related Posts

ರಾಜೇಶ್ ಬನ್ನೂರು ಮನೆ ತೆರವು ವಿವಾದ | ತೆರವಾದ ಮನೆ ಮುಂದೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು; ಸ್ಥಳಕ್ಕಾಗಮಿಸಿದ ಪೊಲೀಸರು

ಪುತ್ತೂರು: ಮುಖ್ಯರಸ್ತೆಗೆ ಹೊಂದಿಕೊಂಡಂತಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ…

ಒಂದು ಮನೆ ಬಿಟ್ಟು ಉಳಿದ ವಿವಾದಿತ ಮನೆಗಳ ತೆರವು!! ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಿಂಭಾಗದ ಮನೆಗಳ ಮೇಲೆ ಬಿದ್ದ ಮರ!

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳ ಹಿಂಭಾಗದಲ್ಲಿದ್ದ ವಿವಾದಿತ ಮನೆಗಳ ತೆರವು ಕಾರ್ಯ ಸೋಮವಾರ…

ಮಹಾಲಿಂಗೇಶ್ವರ ದೇವಳದ ಎಲ್ಲಾ ಮನೆಗಳ ತೆರವು!! ಉಳಿಕೆಯಾಗಿದ್ದ ಕೊನೆ ಮನೆಯ ವಿವಾದಕ್ಕೂ ಪೂರ್ಣ ವಿರಾಮ!

ಪುತ್ತೂರು ಮುಖ್ಯರಸ್ತೆಗೆ ಹೊಂದಿಕೊಂಡತ್ತಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ…

ಪುತ್ತೂರು: ಮಾ.1, 2 ಕೋಟಿ-ಚೆನ್ನಯ ಜೋಡು ಕರೆ ಕಂಬಳ | ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆದ ಕರೆ ಮುಹೂರ್ತ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ. ದೇವರಮಾರು ಗದ್ದೆಯಲ್ಲಿ ಮಾರ್ಚ್1 ಮತ್ತು 2 ರಂದು…

ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವಕ್ಕೆ ಹೊರೆಕಾಣಿಕೆ | ಪುರಪ್ರವೇಶಿಸಿದ ನೂತನ ಪಲ್ಲಕ್ಕಿ; ನಾಳೆ ಸಮರ್ಪಣೆ

ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವಕ್ಕೆ ಜ.…