ಪುತ್ತೂರು: ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದರ್ಕಳ ಗರಡಿಯ 17ನೇ ವರ್ಷದ ಗರಡಿ ನೇಮ ಜಾತ್ರೆಯಂತೆ ಕಂಗೊಳಿಸುತ್ತಿದ್ದು, ಬ್ರಹ್ಮಬೈದೇರ್ಕಳ ಗರಡಿ ಇಳಿಯುವ ಕಾರ್ಯಕ್ರಮ ನಡೆಯಿತು.
ಶನಿವಾರ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು, ಸಂಜೆ ಭಂಡಾರ ಆಗಮನವಾಯಿತು. ಬಳಿಕ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮ ಜರಗಿತು.
ನಂತರ ಶ್ರೀ ಬ್ರಹ್ಮಬೈದರ್ಕಳ ಗರಡಿ ಇಳಿಯುವ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಿತು. ಬೈದೇರುಗಳ ಗರಡಿ ಇಳಿಯುವ ವೈಭವಕ್ಕೆ ಭಕ್ತ ಸಮೂಹ ಭಕ್ತಿ – ಭಾವದಿಂದ ಪರವಶರಾದರು.