ಪುತ್ತೂರು: ರಹ್ಮಾನಿಯಾ ಜುಮಾ ಮಸೀದಿ – ವಲಿಯುಲ್ಲಾಹಿ ದರ್ಗಾ ಶರೀಫ್ ಮುಕ್ವೆ ಆಶ್ರಯದಲ್ಲಿ ಜನವರಿ 19ರಿಂದ ಮುಕ್ವೆ ಮಖಾಂ ಉರೂಸ್ ನಡೆಯಲಿದೆ ಎಂದು ಮುಕ್ವೆ ಮಸೀದಿ ಖತೀಬರಾದ ಇರ್ಷಾದ್ ಫೈಝಿ ಪಾಲ್ತಾಡು ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಮುಕ್ವೆ ಉರೂಸ್ ಸಮಾರಂಭ ಈ ಬಾರಿ, 2025ರ ಜನವರಿ 19ರಿಂದ 26ರವರೆಗೆ ನಡೆಯಲಿದೆ. ಜ. 19ರಂದು ಬೆಳಿಗ್ಗೆ 9ಕ್ಕೆ ಬಹು| ಎಂ.ಎಸ್.ತಂಙಳ್ ಓಲೆಮುಂಡೋವು ಅವರು ಧ್ವಜಾರೋಹಣ ಮತ್ತು ಕೂಟು ಝಿಯಾರತ್ ನಡೆಸಿಕೊಡಲಿದ್ದಾರೆ. ಬಹು| ಸಯ್ಯಿದಲ್ ಉಲಮಾ ಸಯ್ಯದ್ ಜಿಫ್ರಿ ಮುತ್ತುಕೊಯ ತಂಙಳ್ ಅವರು ಉದ್ಘಾಟಿಸಿ ದುವಾ ನೆರವೇರಿಸಲಿದ್ದಾರೆ. ಬಹು| ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಹಾಗೂ ಮುಕ್ವೆ ಜುಮಾ ಮಸ್ಜಿದ್ ಖತೀಬರಾದ ಬಹು| ಇರ್ಷಾದ್ ಫೈಝಿ ಪಾಲ್ತಾಡ್ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದರು.
ಜನವರಿ 20ರಂದು ಬಹು| ಲುಕ್ಮಾನುಲ್ ಹಕೀಮ್ ಸಖಾಫಿ ಪುಲ್ಲಾರ ಅವರು ಮುಖ್ಯಪ್ರಭಾಷಣ ಮಾಡಲಿದ್ದಾರೆ. ಜನವರಿ 21ರಂದು ಬಹು| ಶಮೀರ್ ದಾರಿಮಿ ಕೊಲ್ಲಂ, ಜನವರಿ 22ರಂದು ಬಹು| ಮುಹಮ್ಮದ್ ಅಝ್ಝರಿ ಪೇರೋಡ್ ಮುಖ್ಯಪ್ರಭಾಷಣ ಮಾಡಲಿದ್ದಾರೆ ಎಂದರು.
ಜನವರಿ 23ರಂದು ನೂರೇ ಅಜ್ಮಿರ್ ಆಧ್ಯಾತ್ಮಿಕ ಸಂಗಮ ನಡೆಯಲಿದ್ದು, ಬಹು| ವಲಿಯುದ್ದೀನ್ ಫೈಝಿ ವಾಝಕ್ಕಾಡ್, ಬಹು| ಅಲಿ ತಂಙಳ್ ಕುಂಬೋಲ್, ಬಹು| ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಬಹು| ಉಸ್ಮಾನ್ ಫೈಝಿ ತೋಡಾರ್ ಭಾಗವಹಿಸಲಿದ್ದಾರೆ. ಜನವರಿ 24ರಂದು ಬಹು| ಫಝಲ್ ಶಿಹಾಬ್ ತಂಙಳ್ ಮಲಪ್ಪುರಂ, ಬಹು| ಅನ್ಸರ್ ಅಲಿ ಹುದವಿ ಮಲಪ್ಪುರಂ ಮುಖ್ಯಪ್ರಭಾಷಣ ಮಾಡಲಿದ್ದಾರೆ ಎಂದರು.
ಜನವರಿ 25ರಂದು ಉರೂಸ್ ಸಮಾರಂಭ ನಡೆಯಲಿದ್ದು, ಬಹು| ಹಮೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಬಹು| ಹಾಫಿಲ್ ಸಮೀಸ್ ಖಾನ್ ನಾಫೀ ಇಡುಕ್ಕಿ ಕೇರಳ ಅವರು ಮುಖ್ಯಪ್ರಭಾಷಣ ಮಾಡಲಿದ್ದಾರೆ. ಬಹು| ಅನೀಸ್ ಕೌಸರಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಈ ಸಂದರ್ಭ ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಶಾಸಕ ಅಶೋಕ್ ರೈ, ಬೆಂಗಳೂರು ಫಿಜಾ ಗ್ರೂಪಿನ ಬಿ.ಎಂ. ಫಾರೂಕ್, ಉದ್ಯಮಿ ಇನಾಯತ್ ಅಲಿ ಉಪಸ್ಥಿತರಿರುವರು.
ಮಗ್ರಿಬ್ ನಮಾಜಿನ ನಂತರ ಸಂದಲ್ ಮೆರವಣಿಗೆ ನಡೆಯಲಿದೆ. ಅದೇ ದಿನ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಹಳೆ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಜನವರಿ 26ರಂದು ಬೆಳಿಗ್ಗೆ 10ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಬಹು| ಸಯ್ಯದ್ ಜಿಫ್ರಿ ತಂಙಳ್ ಬೆಳ್ತಂಗಡಿ, ಬಹು| ಸಯ್ಯಿದ್ ಸಾದಾತ್ ತಂಳ್ ಗುರುವಾಯನಕೆರೆ ಉಪಸ್ಥಿತರಿರುವರು. ಬಹು| ಸಿರಾಜುದ್ದೀನ್ ಸಖಾಫಿ ಕನ್ಯಾನ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ ಸಾರ್ವಜನಿಕ ಅನ್ನದಾನ ನಡೆಯಲಿದೆ ಎಂದರು.
ವಲಿಯುಲ್ಲಾಹಿ ದರ್ಗಾ: ಮುಕ್ವೆ ದರ್ಗಾ ಅತ್ಯಂತ ಪ್ರಾಚೀನ ಇತಿಹಾಸ ಹೊಂದಿದ್ದು, ಅತ್ಯಂತ ಕಾರಣಿಕತೆಯಿಂದಲೂ ಕೂಡಿದೆ. ಅನೇಕ ಮಂದಿ ತಮ್ಮ ಕಷ್ಟಗಳನ್ನು ಭಕ್ತಿಯಿಂದ ಹೇಳಿಕೊಂಡು ಪರಿಹಾರ ಕಂಡುಕೊಂಡ ನಿದರ್ಶನವಿದೆ.
ಪತ್ರಿಕಾಗೋಷ್ಠಿಯಲ್ಲಿ ಮುಕ್ವೆ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಮುಳಾರ್, ಪ್ರ. ಕಾರ್ಯದರ್ಶಿ ಮುಹಮ್ಮದ್ ಕುಂಞ ಹಾಜಿ, ಖಜಾಂಚಿ ಉಮ್ಮರ್ ಹಾಜಿ ಪಟ್ಟೆ, ಯಾಕೂಬ್ ಮುಳಾರ್ ಉಪಸ್ಥಿತರಿದ್ದರು.