ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗುರುವಾರ ಬೆಳಿಗ್ಗೆ ಧ್ವಜಾರೋಹಣ ನೆರವೇರಿತು.
ದೇವರ ಬಲಿ ಹೊರಟು ನಡೆ ಮುಂದೆ ಬಂದು ನಿಂತಾಗ ಪ್ರಸಾದ ಸ್ವೀಕರಿಸಿ ಬಳಿಕ ಧ್ವಜ ಕಟ್ಟೆಗೆ ಹತ್ತಲಾಯಿತು. ಮೊದಲಿಗೆ ಬೇತಾಳನನ್ನು ಧ್ವಜ ಕಂಬದ ತುದಿಗೆ ಏರಿಸಿ, ಬಳಿಕ ಫಲವಸ್ತುಗಳನ್ನು ಧ್ವಜ ಕಂಬಕ್ಕೆ ಕಟ್ಟಲಾಯಿತು.
ಬೆಳಿಗ್ಗೆ 9.25ರ ವೃಷಭ ಲಗ್ನ ಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಿತು.
ರವೀಶ ತಂತ್ರಿಗಳ ನೇತೃತ್ವದಲ್ಲಿ ಏ. 18ರವರೆಗೆ ಜಾತ್ರೋತ್ಸವ ನಡೆದು, ಏ. 19ರಂದು ಧ್ವಜಾವರೋಹಣ ನಡೆಯಲಿದೆ. ಬಳಿಕ ದೈವಗಳ ನೇಮೋತ್ಸವ ಜರುಗಲಿದೆ.




































