ಪುತ್ತೂರು: ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಮಿನಿಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಅಯ್ಯಪ್ಪ ದೇವರಿಗೆ ಮಹಾಪೂಜೆ, ಗುಳಿಗ ದೈವದ ನೇಮೋತ್ಸವ ಮಾ. 23ರಂದು ನಡೆಯಿತು.
ಶ್ರೀ ಮಹಾಬಲೇಶ್ವರ ಸ್ವಾಮೀಜಿ ಹಾಗೂ ಜ್ಯೋತಿಷಿ ಗಣೇಶ್ ಭಟ್ ಕೇಕನಾಜೆ ಅವರ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೆ. ಉದಯ ನಾರಾಯಣ ಕಲ್ಲೂರಾಯ ಅವರು ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಭಾನುವಾರ ಬೆಳಿಗ್ಗೆ ಸ್ಥಳ ಶುದ್ಧಿ ಪೂರ್ವಕ ಗಣಪತಿ ಹವನ ನಡೆದು ಭಜನೆ, ಮಧ್ಯಾಹ್ನ ಅಯ್ಯಪ್ಪ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.
ಮಧ್ಯಾಹ್ನದ ಬಳಿಕ ಕ್ಷೇತ್ರ ರಕ್ಷಕ ಗುಳಿದ ದೈವದ ನರ್ತನ ಸೇವೆ ನಡೆಯಿತು.


