tamanvi
ದೇಶ

ಭಾರತಕ್ಕೆ ಬಂದಿಳಿದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್

D_shiva_bhat
ಅಮೆರಿಕದ ಉಪಾಧ್ಯಕ್ಷ ನಾಲ್ಕು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಜೆಡಿ ವ್ಯಾನ್ಸ್, ಪತ್ನಿ ಉಷಾ ವ್ಯಾನ್ಸ್, ಅವರ ಮಕ್ಕಳು ಮತ್ತು ಅಮೆರಿಕದ ಆಡಳಿತದ ಇತರ ಹಿರಿಯ ಸದಸ್ಯರು ಜೊತೆಗಿದ್ದಾರೆ ಎನ್ನಲಾಗಿದೆ. ಅಮೆರಿಕ ಉಪಾಧ್ಯಕ್ಷ ಮತ್ತು ಅವರ ಪತ್ನಿಯನ್ನು ಪಾಲಂ ವಾಯುನೆಲೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬರಮಾಡಿಕೊಂಡರು.

ಈ ಸುದ್ದಿಯನ್ನು ಶೇರ್ ಮಾಡಿ

ಅಮೆರಿಕದ ಉಪಾಧ್ಯಕ್ಷ ನಾಲ್ಕು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಜೆಡಿ ವ್ಯಾನ್ಸ್, ಪತ್ನಿ ಉಷಾ ವ್ಯಾನ್ಸ್, ಅವರ ಮಕ್ಕಳು ಮತ್ತು ಅಮೆರಿಕದ ಆಡಳಿತದ ಇತರ ಹಿರಿಯ ಸದಸ್ಯರು ಜೊತೆಗಿದ್ದಾರೆ ಎನ್ನಲಾಗಿದೆ. ಅಮೆರಿಕ ಉಪಾಧ್ಯಕ್ಷ ಮತ್ತು ಅವರ ಪತ್ನಿಯನ್ನು ಪಾಲಂ ವಾಯುನೆಲೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬರಮಾಡಿಕೊಂಡರು.

ಭಾರತ ಪ್ರವಾಸದಲ್ಲಿರುವ ಅಮೆರಿಕ ಉಫಾಧ್ಯಕ್ಷ ಜೆಡಿ ವ್ಯಾನ್ಸ್ ಗೆ, ರಾಷ್ಟ್ರ ರಾಜಧಾನಿ ಹೊಸದೆಹಲಿಯಲ್ಲಿ ಸೇನಾ ಗೌರವ ವಂದನೆ ಸಲ್ಲಿಸಲಾಗಿದೆ. ಯುಎಸ್ ಉಪಾಧ್ಯಕ್ಷರಿಗೆ ಭಾರತದ ಮೂರೂ ರಕ್ಷಣಾ ಪಡೆಗಳಿಂದ ಗೌರವ ವಂದನೆ ಸಲ್ಲಿಸಲಾಯಿತು. ಜೆಡಿ ವ್ಯಾನ್ಸ್ ಇಂದು ಪತ್ನಿ ಉಷಾ ವ್ಯಾನ್ಸ್ ಮತ್ತು ಮೂವರು ಮಕ್ಕಳೊಂದಿಗೆ ಭಾರತಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಭೆ ನಡೆಯುವುದೂ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅಗ್ರಾ, ಜೈಪುರ್ ಮುಂತಾದ ಕಡೆಯೂ ತೆರಳಲಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಶೀಘ್ರದಲ್ಲೇ ಅಂಕಿತ ಹಾಕುವ ಒಂದು ಮುಖ್ಯ ಅಜೆಂಡಾ ಈ ಭೇಟಿಯ ಹಿಂದಿದೆ. ಇದರ ಜೊತೆಗೆ, ಎರಡೂ ದೇಶಗಳ ನಡುವಿನ ಮೈತ್ರಿಯನ್ನು ಗಟ್ಟಿಗೊಳಿಸಲು ಹಲವು ವಿಚಾರಗಳನ್ನು ಅವಲೋಕಿಸುವ ಸಾಧ್ಯತೆ ಇದೆ. ವ್ಯಾಪಾರ, ರಕ್ಷಣೆ, ಸುಂಕ ಇತ್ಯಾದಿ ವಿವಿಧ ವಿಚಾರಗಳ ಬಗ್ಗೆ ಮಾತುಕತೆ ನಡೆಯುವ ನಿರೀಕ್ಷೆ ಇದೆ.

13 ವರ್ಷಗಳಲ್ಲಿ ಭಾರತಕ್ಕೆ ಭೇಟಿ ನೀಡುತ್ತಿರುವ ಮೊದಲ ಅಮೆರಿಕದ ಉಪಾಧ್ಯಕ್ಷರು ವ್ಯಾನ್ಸ್ ಎನ್ನಲಾಗಿದೆ. ಕಳೆದ ದಶಕದಲ್ಲಿ ಯಾವುದೇ ಹಾಲಿ ಅಮೆರಿಕದ ಉಪಾಧ್ಯಕ್ಷರು ಭಾರತಕ್ಕೆ ಭೇಟಿ ನೀಡಿಲ್ಲವಾದ್ದರಿಂದ ಈ ಭೇಟಿ ವಿಶೇಷವಾಗಿದೆ.

ಫೆಬ್ರವರಿ 2013 ರಲ್ಲಿ, ಮಾಜಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಉಪಾಧ್ಯಕ್ಷರಾಗಿದ್ದಾಗ ಭಾರತಕ್ಕೆ ಭೇಟಿ ನೀಡಿದ್ದರು


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ದೇಶದ ಮೊದಲ ಖಾಸಗಿ ಕಕ್ಷಾ ರಾಕೆಟ್ ‘ವಿಕ್ರಮ್-1’ ಯಶಸ್ವಿ ಉಡಾವಣೆ! ಬಾಹ್ಯಾಕಾಶಕ್ಕೆ ರವಾನೆಯಾದ ಪ್ರಧಾನಿ ಮೋದಿಯ ಪೋಸ್ಟ್ ಕಾರ್ಡ್!

ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲು ನಿರ್ಮಾಣವಾಗಿದ್ದು, ದೇಶದ ಮೊದಲ…