ದೇಶ

ಶೀಘ್ರದಲ್ಲೇ  ಮಂಗಳೂರು-ಮುಂಬೈ ವಂದೇ ಭಾರತ್ ರೈಲು!!

GL
ಮಂಗಳೂರು-ಮುಂಬಯಿ ಮಧ್ಯೆ ಶುರುವಾಗಲಿದ್ದು, ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಪ್ರಸ್ತುತ ಮುಂಬಯಿ-ಮಂಗಳೂರು ನಡುವಿನ ರೈಲು ಪ್ರಯಾಣಕ್ಕೆ 15-16 ತಾಸು ಹಿಡಿಯುತ್ತದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಮುಂಬಯಿಯಲ್ಲಿ ನೆಲೆಸಿರುವ ಕರಾವಳಿ ಭಾಗದ ಜನರಿಗೆ ರೈಲ್ವೆ ಸಿಹಿಸುದ್ದಿ ನೀಡಿದೆ. ಭಾರಿ ಜನಮೆಚ್ಚುಗೆಗೆ ಪಾತ್ರವಾಗಿರುವ ವಂದೇ ಭಾರತ್ ರೈಲು ಸೇವೆ ಮಂಗಳೂರು-ಮುಂಬಯಿ ಮಧ್ಯೆ ಶುರುವಾಗಲಿದ್ದು, ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಪ್ರಸ್ತುತ ಮುಂಬಯಿ-ಮಂಗಳೂರು ನಡುವಿನ ರೈಲು ಪ್ರಯಾಣಕ್ಕೆ 15-16 ತಾಸು ಹಿಡಿಯುತ್ತದೆ. ವಂದೇ ಭಾರತ್ ರೈಲು ಕೇವಲ 12 ತಾಸಿನಲ್ಲಿ ತಲುಪುತ್ತದೆ. ಹೀಗಾಗಿ ವಂದೇ ಭಾರತ್‌ನಿಂದ ಜನರ ಸಮಯ ಬಹಳಷ್ಟು ಉಳಿತಾಯವಾಗಲಿದೆ. ವಂದೇ ಭಾರತ್ ಪ್ರಯಾಣ ಆರಾಮದಾಯಕವೂ ಹೌದು.

chennai-shopping
maithri

ರೈಲ್ವೆ ಇಲಾಖೆ ಮುಂಬಯಿ-ಮಂಗಳೂರು ವಂದೇ ಭಾರತ್ ರೈಲು ಸಂಚಾರ ಪ್ರಾರಂಭಿಸಲು ಎಲ್ಲ ಸಿದ್ಧತೆ ಮಾಡುತ್ತಿದೆ. ಈಗಾಗಲೇ ಮಂಗಳೂರು-ಗೋವಾ ಹಾಗೂ ಗೋವಾ-ಮುಂಬಯಿ ನಡುವೆ ವಂದೇ ಭಾರತ್ ರೈಲು ಸಂಚರಿಸುತ್ತಿದೆ. ಆದರೆ ಈ ಎರಡೂ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ನಿಬಹಳ ಕಡಿಮೆ ಇದ್ದು, ನಷ್ಟದಲ್ಲಿ ಓಡುತ್ತಿದೆ. ಪ್ರಯಾಣಿಕರ ಸಂಖ್ಯೆ ಸರಾಸರಿ ಶೇಕಡಾ 70 ಮಾತ್ರ ಇದೆ. ಅದರಲ್ಲೂ ಮಂಗಳೂರು-ಗೋವಾ ರೈಲಿನ ಪ್ರಯಾಣಿಕರ ಸಂಖ್ಯೆ ಸರಾಸರಿ ಶೇಕಡಾ 40 ಮಾತ್ರ. ಹೀಗಾಗಿ ರೈಲ್ವೆ ಇಲಾಖೆ ಈ ರೈಲನ್ನು ಸ್ಥಗಿತಗೊಳಿಸಲು ಮುಂದಾಗಿತ್ತು.

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಇತ್ತೀಚೆಗೆ ರೈಲ್ವೆ ಸಚಿವರನ್ನು ಭೇಟಿ ಮಾಡಿ ವಂದೇ ಭಾರತ್ ರೈಲು ಸ್ಥಗಿತಗೊಳಿಸುವ ಬದಲು ಮುಂಬಯಿ ತನಕ ವಿಸ್ತರಿಸಿದರೆ ಪ್ರಯಾಣಿಕರ ಕೊರತೆಯಾಗದು ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಈಗ ರೈಲ್ವೆ ಇಲಾಖೆ ಮಂಗಳೂರು-ಮುಂಬಯಿ ನಡುವೆ ವಂದೇ ಭಾರತ್ ಓಡಿಸಲು ಸಿದ್ಧತೆ ನಡೆಸಿದೆ.

ಆರಂಭದಲ್ಲಿ ಮುಂಬಯಿ-ಮಂಗಳೂರು-ಕೋಝಿಕ್ಕೋಡ್ ಮಧ್ಯೆ ವಂದೇ ಭಾರತ್ ರೈಲು ಓಡಿಸಲು ಪ್ರಸ್ತಾವನೆ ಇಡಲಾಗಿತ್ತು. ಆದರೆ ಪ್ರತಿಬಾರಿ ಮಂಗಳೂರು ಡಿವಿಶನ್‌ನ ರೈಲು ಸೇವೆ ಕೇರಳದ ಪಾಲಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕರ್ನಾಟಕದ ನಾಯಕರು ಮುಂಬಯಿ-ಮಂಗಳೂರು ವಂದೇ ಭಾರತ್ ರೈಲನ್ನು ಕೋಝಿಕ್ಕೋಡ್‌ಗೆ ವಿಸ್ತರಣೆ ಮಾಡುವ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಇದೀಗ ಮುಂಬಯಿ-ಮಂಗಳೂರು ವಂದೇ ಭಾರತ್ ರೈಲು ಯೋಜನೆ ಅಂತಿಮಗೊಂಡಿದೆ. ಈ ರೈಲಿನ ಸಮಯ, ನಿಲುಗಡೆ ಇತ್ಯಾದಿಗಳು ಇನ್ನಷ್ಟೇ ಅಂತಿಮವಾಗಬೇಕಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಆನ್’ಲೈನ್ ಗೇಮಿಂಗಿಗೆ ಕೇಂದ್ರದ ಅಂಕುಶ!! ಆತ್ಮಹತ್ಯೆ, ಸಾಲಬಾಧೆಯ ಮೊರೆ ಹೋಗುತ್ತಿರುವ ಯುವಕರ ರಕ್ಷಣೆಗೆ ಮುಂದಾದ ಕೇಂದ್ರ!

ದೇಶದ ಯುವಜನತೆ ಆನ್‌ಲೈನ್ ಗೇಮ್‌ಗಳತ್ತ ಹೆಚ್ಚಾಗಿ ಆಕರ್ಷಿತರಾಗುತ್ತಿರುವ ಹಿನ್ನೆಲೆಯಲ್ಲಿ, ಅದರ…

ಮಧ್ಯಪ್ರಾಚ್ಯ ಉದ್ವಿಗ್ನತೆ : ಸಂಕಷ್ಟದಲ್ಲಿನ ಕನ್ನಡಿಗರ ನೆರವಿಗೆ ಉಡುಪಿ ಜಿಲ್ಲಾಡಳಿತದಿಂದ ತುರ್ತು ಸಹಾಯವಾಣಿ

ಮಂಗಳೂರು: ಮಧ್ಯಪ್ರಾಚ್ಯದ ಕೆಲವು ರಾಷ್ಟ್ರಗಳಲ್ಲಿ ಉಂಟಾಗಿರುವ ಅಸ್ಥಿರತೆ ಹಾಗೂ ಅಂತರಾಷ್ಟ್ರೀಯ…