ವಿದೇಶ

ಶಹಬಾಜ್ ಷರೀಫ್ ರಣಹೇಡಿ: ಪಾಕ್ ಸಂಸದ ಟೀಕೆ! ಟಿಪ್ಪು ಸುಲ್ತಾನ್ ಉಲ್ಲೇಖಿಸಿ ಕಿಡಿಕಾರಿದ ಶಾಹಿದ್ ಖಟ್ಟಕ್

GL

ಈ ಸುದ್ದಿಯನ್ನು ಶೇರ್ ಮಾಡಿ

ಪಾಕಿಸ್ತಾನದ ಕ್ಷಿಪಣಿ ಹಾಗೂ ಡ್ರೋಣ್​ ದಾಳಿಗಳನ್ನು ಭಾರತ ಸೇನಾಪಡೆ ವಿಫಲಗೊಳಿಸಿದೆ. ಅಲ್ಲದೇ ಭಾರತ ಸೇನೆ ಪಾಕಿಸ್ತಾನದ ವಿವಿಧ ನಗರಗಳ ಮೇಲೆ ಪ್ರತಿದಾಳಿ ಮಾಡಿದ್ದು, ಪಾಕಿಸ್ತಾನ ತತ್ತರಿಸಿ ಹೋಗಿದೆ. ಇನ್ನು ಭಾರತದ ದಾಳಿಗೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಹೆದರಿ ಗೌಪ್ಯ ಸ್ಥಳದಲ್ಲಿ ಅಡಗಿಕೊಂಡಿದ್ದಾರೆ ಎನ್ನುವ ವರದಿಯಾಗಿದೆ. ಇದರ ಮಧ್ಯ ಪಾಕಿಸ್ತಾನದ ಸಂಸದರೊಬ್ಬರು ತಮ್ಮದೇ ಪ್ರಧಾನಿಯನ್ನು ಹೇಡಿ ಎಂದು ಟೀಕಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೂ ಭಾರತದೊಂದಿಗೆ ನಡೆಯುತ್ತಿರುವ ಸಂಘರ್ಷವನ್ನು ಸರ್ಕಾರ ಹೇಗೆ ನಿಭಾಯಿಸುತ್ತಿದೆ ಎಂಬುದರ ಕುರಿತು ಶುಕ್ರವಾರ ಪಾಕಿಸ್ತಾನದ ಸಂಸತ್​ನಲ್ಲಿ ಚರ್ಚೆ ನಡೆದಿದ್ದು, ಈ ವೇಳೆ ತೀವ್ರ ಕೋಲಾಹಲ ಸೃಷ್ಟಿಯಾಗಿದೆ. ಭಾರತದ ವಿರುದ್ಧ ಒಂದೇ ಒಂದು ಹೇಳಿಕೆ ಬಂದಿಲ್ಲ. ಗಡಿಯಲ್ಲಿ ನಿಂತಿರುವ ಪಾಕಿಸ್ತಾನಿ ಸೈನಿಕರು ಸರ್ಕಾರ ಧೈರ್ಯದಿಂದ ಹೋರಾಡುತ್ತದೆ ಎಂದು ನಿರೀಕ್ಷಿಸುತ್ತಾರೆ. ನಮ್ಮ ನಾಯಕ, ಮೋದಿಯ ಹೆಸರನ್ನು ಸಹ ಉಚ್ಚರಿಸಲಾಗದ ಹೇಡಿ. ಗಡಿಯಲ್ಲಿ ಹೋರಾಡುವ ಸೈನಿಕನಿಗೆ ನೀವು ಯಾವ ಸಂದೇಶವನ್ನು ನೀಡುತ್ತಿದ್ದೀರಿ ಎಂದು ಪಾಕ್‌ ಪ್ರಧಾನಿ ವಿರುದ್ಧ ಸಂಸದ ಸಂಸದ ಶಾಹಿದ್‌ ಖಟ್ಟಕ್‌ ವಾಗ್ದಾಳಿ ನಡೆಸಿದ್ದಾನೆ.

ಭಾರತೀಯ ಸೇನೆ ಹಿಮ್ಮೆಟ್ಟಿಸಲು ಪಾಕಿಸ್ತಾನ ವಿಫಲವಾಗಿದ್ದರಿಂದ ಆಕ್ರೋಶಗೊಂಡಿರುವ ಸಂಸದ ಶಾಹಿದ್‌ ಖಟ್ಟಕ್‌, ನಮ್ಮ ದೇಶದ ಪ್ರಧಾನಿ ಹೇಡಿಯಂತೆ ವರ್ತಿಸುತ್ತಿದ್ದಾರೆ. ರಾಜ ಸಿಂಹದಂತೆ ಇದ್ದರೆ ಸೇನೆಯೂ ಸಿಂಹದಂತೆ ಇರುತ್ತೆ. ರಾಜ ಹೇಡಿಯಾಗಿದ್ದು ಸೇನೆ ಸಿಂಹದಂತಿದ್ದರೆ ಪ್ರಯೋಜನವಿಲ್ಲ ಎಂದು ಟಿಪ್ಪು ಸುಲ್ತಾನ್ ಹೇಳಿಕೆ ಉಲ್ಲೇಖಿಸಿ ತಮ್ಮ ದೇಶದ ಪ್ರಧಾನಿಯನ್ನು ಹೇಡಿ ಎಂದು ಕಿಡಿಕಾರಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ವೆನೆಜುವೆಲಾಕ್ಕೆ ಸ್ವಯಂಘೋಷಿತ ಅಧ್ಯಕ್ಷ! ಅಷ್ಟಕ್ಕೂ ಅಮೆರಿಕ ಅಧ್ಯಕ್ಷರಿಗೆ ಬೇಕಾಗಿರುವುದೇನು ಎಂದು ಪ್ರಶ್ನಿಸಿದ ನೆಟ್ಟಿಗರು!!

ವಾಷಿಂಗ್ಟನ್: ವೆನೆಜುವೆಲಾ ಅಧ್ಯಕ್ಷ ಮಡುರೊ ಅವರನ್ನು ಅಮೆರಿಕ ಅಪಹರಿಸಿ ಬಂಧಿಸಿದ್ದೇ ವಿಶ್ವಕ್ಕೆ…

“ನನ್ನ ಕುಟುಂಬ ಸರ್ವನಾಶ, ನಾನೂ ಸತ್ತಿದ್ರೆ ಚೆನ್ನಾಗಿತ್ತು, ಯಾರನ್ನು ಬಿಡಲ್ಲ”: ಉಗ್ರ ಮಸೂದ್ ಅಜ್ಹರ್ ಕಣ್ಣೀರು!

ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್‌ನ ಪ್ರಮುಖ ನೆಲೆ ಮರ್ಕಜ್ ಸುಭಾನ್ ಅಲ್ಲಾ…