ವಿದೇಶ

ನೆರೆ ದೇಶಗಳ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷ! ಮತ್ತಷ್ಟು ದಾಳಿಯ ಎಚ್ಚರಿಕೆ ನೀಡಿದ ಟ್ರಂಪ್!!

GL

ಈ ಸುದ್ದಿಯನ್ನು ಶೇರ್ ಮಾಡಿ

ನೆರೆಯ ರಾಷ್ಟ್ರಗಳಿಂದ ನೇರವಾಗಿ ಇರಾನ್ ಮೇಲ್ ದಾಳಿಯಾಗದ ಹೊರತು, ಆ ರಾಷ್ಟ್ರಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಹೇಳಿದ್ದಾರೆ ಎಂದು aljazeera.com ವರದಿ ಮಾಡಿದೆ.

chennai-shopping
maithri

ಇಂತಹ ನಿಲುವಿಗೆ ಇರಾನ್ ನ ಮಧ್ಯಂತರ ನಾಯಕತ್ವ ಮಂಡಳಿ ನಿನ್ನೆ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಡೆದ ದಾಳಿಗಳ ಹಿನ್ನೆಲೆಯಲ್ಲಿ ನೆರೆಯ ರಾಷ್ಟ್ರಗಳಿಗೆ ಉಂಟಾದ ಆತಂಕಕ್ಕೆ, ಅವರಿಗುಂಟಾದ ಅನಾನುಕೂಲದ ಬಗ್ಗೆ ಅಧ್ಯಕ್ಷರು ಕ್ಷಮೆಯಾಚಿಸಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿದೆ.

ಕಠಿಣ ದಾಳಿ ಎಂದ ಟ್ರಂಪ್:

ಇರಾನ್ ಮಧ್ಯಪ್ರಾಚ್ಯದ ತನ್ನ ನೆರೆ ರಾಷ್ಟ್ರಗಳಿಗೆ ಕ್ಷಮೆಯಾಚಿಸಿ ಶರಣಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಜೊತೆಗೆ, ಇರಾನ್ ಮೇಲೆ ಇಂದು ‘ತುಂಬಾ ಕಠಿಣ’ ದಾಳಿ ನಡೆಯಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ತಮ್ಮ ‘ಟ್ರುತ್ ಸೋಶಿಯಲ್’ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.

ಇರಾನ್ ಈಗ ತನ್ನ ನೆರೆ ರಾಷ್ಟ್ರಗಳ ಮೇಲೆ ಗುಂಡಿನ ದಾಳಿ ನಡೆಸುವುದಿಲ್ಲ ಎಂಬ ಭರವಸೆಯನ್ನು ನೀಡಿದೆ ಎಂದು ಟ್ರಂಪ್ ವಾದಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ನಿರಂತರ ದಾಳಿಗಳ ಪರಿಣಾಮವಾಗಿ ಇರಾನ್ ಈ ಭರವಸೆ ನೀಡಲು ಒತ್ತಡಕ್ಕೆ ಒಳಗಾಗಿದೆ ಎಂದು ಅವರು ಹೇಳಿದ್ದಾರೆ.

ಇದರ ನಡುವೆ, ಇರಾನ್ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇರುವುದನ್ನೂ ಟ್ರಂಪ್ ಸೂಚಿಸಿದ್ದಾರೆ. ಇರಾನ್ ನ ‘ಕೆಟ್ಟ ನಡವಳಿಕೆ’ ಹಿನ್ನೆಲೆಯಲ್ಲಿ ಈಗವರೆಗೂ ಗುರಿಯಾಗಿಸದ ಪ್ರದೇಶಗಳು ಮತ್ತು ಜನರ ಗುಂಪುಗಳ ಮೇಲೂ ದಾಳಿ ನಡೆಸುವ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

“ನನ್ನ ಕುಟುಂಬ ಸರ್ವನಾಶ, ನಾನೂ ಸತ್ತಿದ್ರೆ ಚೆನ್ನಾಗಿತ್ತು, ಯಾರನ್ನು ಬಿಡಲ್ಲ”: ಉಗ್ರ ಮಸೂದ್ ಅಜ್ಹರ್ ಕಣ್ಣೀರು!

ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್‌ನ ಪ್ರಮುಖ ನೆಲೆ ಮರ್ಕಜ್ ಸುಭಾನ್ ಅಲ್ಲಾ…