Gl jewellers
ಶಿಕ್ಷಣ

ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ರಥಸಪ್ತಮಿ ದಿನಾಚರಣೆ

Karpady sri subhramanya
ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಮಂಗಳವಾರ ರಥಸಪ್ತಮಿಯನ್ನು ಆಚರಿಸಲಾಯಿತು

ಈ ಸುದ್ದಿಯನ್ನು ಶೇರ್ ಮಾಡಿ

SRK Ladders
Akshaya College

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಮಂಗಳವಾರ ರಥಸಪ್ತಮಿಯನ್ನು ಆಚರಿಸಲಾಯಿತು. ಶಾಲೆಯ ೭ನೇ ತರಗತಿಯ ವಿದ್ಯಾರ್ಥಿನಿ ಸಾಯಿಲಕ್ಷಿö್ಮÃ ಮಾತನಾಡಿ ರಥಸಪ್ತಮಿಯು ಸೂರ್ಯನು ಸಿಂಹ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನ. ಪೌರಾಣಿಕ ಕಥೆಗಳ ಪ್ರಕಾರ ಸೂರ್ಯದೇವರ ಜನ್ಮದಿನ ಎಂದೂ ಹೇಳಲಾಗುತ್ತದೆ ಎಂದು ಹೇಳಿದರು. ಅಂತೆಯೇ ಸೂರ್ಯ ನಮಸ್ಕಾರದ ಪರಿಚಯವನ್ನು ಮಾಡಿದರು.
೭ನೇ ತರಗತಿಯ ವಿದ್ಯಾರ್ಥಿನಿ ಪೂರ್ವಿ ಸೂರ್ಯ ನಮಸ್ಕಾರದ ಪ್ರತಿಯೊಂದು ಹಂತದ ಮಹತ್ವವನ್ನು ತಿಳಿಸಿದರು, ವಿದ್ಯಾಲಯದ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಮಾಲತಿ ಡಿ. ಉಪಸ್ಥಿತರಿದ್ದರು. ೬ನೇ ತರಗತಿಯ ವಿದ್ಯಾರ್ಥಿಗಳಾದ ಆದಿಶ್ರೀ ಮತ್ತು ತನ್ವಿ ನಾಗೇಂದ್ರ ಪ್ರಾರ್ಥಿಸಿದರು ಹಾಗೂ ೭ನೇ ತರಗತಿಯ ನಿದಾ ಫಾತಿಮಾ ಕಾರ್ಯಕ್ರಮ ನಿರ್ವಹಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಬಿಸಿಲ ತಾಪಕ್ಕೆ ನೆರಳಾದ ಗುಜುರಿ ಹಣ!! ಹೀಗೂ ಬಸ್ ನಿಲ್ದಾಣ ನಿರ್ಮಿಸಬಹುದೆಂದು ತೋರಿಸಿಕೊಟ್ಟ ಎನ್.ಎಸ್.ಎಸ್. ಕಾರ್ಯಕರ್ತರು!

ಗುಜಿರಿ ಸಂಗ್ರಹಿಸಿ ಮಾರಿ ಸಿಕ್ಕಿದ ಹಣದಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ವಿದ್ಯಾರ್ಥಿಗಳು

ಸರಕಾರಿ ಶಾಲೆಗಳಿಗೆ ಬೀಗ ಹಾಕಲು ಮುಂದಾದ ಇಲಾಖೆ..!! ಕಳವಳಕ್ಕೆ ಕಾರಣವಾಯ್ತು ಶಿಕ್ಷಣ ಇಲಾಖೆ ಸುತ್ತೋಲೆ, ಸಮಿತಿ ರಚನೆ!

ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನುವ ಅನುಮಾನವೊಂದು…