ಪುತ್ತೂರು: ಗುಜರಾತಿನ ಸೂರತಿನಲ್ಲಿರುವ ಔರಾ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 23, 24ರಂದು ನಡೆದ National Level 24-Hours IBM Expert Labs Hackathon 2026 ನಲ್ಲಿ ಪುತ್ತೂರಿನ ಸಮೃದ್ಧಿ ಶೆಣೈ ಅವರು “Girl with Exceptional Skills Winner” ಪ್ರಶಸ್ತಿ ಪಡೆದುಕೊಂಡಿದ್ದು, ಅವರನ್ನು ರೋಟರಿ ಕ್ಲಬ್ ಪುತ್ತೂರು ಈಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಬೂಡಿಯಾರ್ ರಾಧಾಕೃಷ್ಣ ರೈ, ಕ್ಪಬ್ ಅಧ್ಯಕ್ಷ ಶಶಿಧರ ಕಿನ್ನಿಮಜಲು, ಕಾರ್ಯದರ್ಶಿ ನವೀನ್ ರೈ ಪಂಜಳ ಸನ್ಮಾನಿಸಿ ಗೌರವಿಸಿದರು.
National Level 24-Hours IBM Expert Labs Hackathon 2026ರಲ್ಲಿ ದೇಶದ ವಿವಿಧ ಕಾಲೇಜುಗಳಿಂದ 150ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಮಹಿಳಾ ವಿಭಾಗದಲ್ಲಿ ದೇಶದಲ್ಲೇ ವಿಜೇತೆಯಾದ ಏಕೈಕ ಮಹಿಳಾ ಪ್ರತಿನಿಧಿಯೂ ಇವರಾಗಿದ್ದಾರೆ ಎಂದು ಗುರುತಿಸಲ್ಪಟ್ಟಿದ್ದಾರೆ.
ಸಮೃದ್ಧಿ ಶೆಣೈ ಅವರು ಕೆಮ್ಮಿಂಜೆ ನಿವಾಸಿಗಳಾದ ಶಿವಾನಂದ ಶೆಣೈ ಮತ್ತು ಲತಾ ಶೆಣೈ ದಂಪತಿ ಪುತ್ರಿ.























