tamanvi
ಶಿಕ್ಷಣ

ಕೈಕಾರ ಶಾಲೆಯಲ್ಲಿ ಶತಮಾನದ ಸಂಭ್ರಮ ಆಚರಣೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಒಳಮೊಗ್ರು ಗ್ರಾಮದ ಕೈಕಾರ ಸ.ಹಿ.ಪ್ರಾ ಶಾಲೆಯಲ್ಲಿ ಶತಮಾನೋತ್ಸವ ಸಮಾರಂಭದ ಉದ್ಘಾಟನೆಯು ಫೆ.14ರಂದು ನಡೆಯಿತು.

Shani-pooja

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ವ್ಯವಸ್ಥಿತವಾಗಿ ಎಲ್ಲರನ್ನೂ ಸೇರಿಸಿಕೊಂಡು ಕಾರ್ಯಕ್ರಮ ಮಾಡಿರುವುದು ಕೈಕಾರದಲ್ಲಿ ಮಾತ್ರ. ಸೀತಾರಾಮ ರೈಯವರ ನೇತೃತ್ವದಲ್ಲಿ ಕಾರ್ಯಕ್ರಮ ಅದ್ಭುತವಾಗಿ, ಯಶಸ್ವಿಯಾಗಿ, ಅಚ್ಚುಕಟ್ಟಾಗಿ ನಡೆದಿದೆ. ಇದರ ಹಿಂದೆ ಒಂದು ವರ್ಷದ ಕಠಿಣ ಪ್ರಯತ್ನವಿದೆ ಎಂದರು.

ಶಾಲೆಗಳು ಬೆಳೆಯಬೇಕು. ಪ್ರವಾಸೋದ್ಯಮ ಅಭಿವೃದ್ಧಿ ಆಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತು, ಉತ್ತಮ ಉದ್ಯೋಗ ದೊರೆಯಬೇಕು ಎನ್ನುವುದೇ ನಮ್ಮ ಉದ್ದೇಶವಾಗಿದೆ ಎಂದ ಹೇಳಿದ ಶಾಸಕರು, ಶಾಲೆಯ ಕ್ರೀಡಾಂಗಣ ಅಭಿವೃದ್ಧಿಗೆ ಈಗಾಗಲೇ ರೂ.5 ಲಕ್ಷ ಅನುದಾನ ನೀಡಿದ್ದೇನೆ. ಕಡಿಮೆಯಾದರೆ ಇನ್ನೂ ರೂ. 5 ಲಕ್ಷ ಅನುದಾನ ನೀಡಲಾಗುವುದು ಎಂದು ಹೇಳಿದರು.

ಶತಮಾನೋತ್ಸವ ಸಾಂಸ್ಕೃತಿಕ ಕಟ್ಟಡವನ್ನು ಉದ್ಘಾಟಿಸಿದ ಎಂಆರ್‌ಪಿಎಲ್‌ ಚೀಫ್ ಜನರಲ್ ಮ್ಯಾನೇಜರ್ ಮನೋಜ್ ಕುಮಾರ್ ಮಾತನಾಡಿ, ತನ್ನ ಸಾಮಾಜಿಕ ಜವಾಬ್ದಾರಿಯಲ್ಲಿ ಸಂಸ್ಥೆ ಮೂಲಕ ಸಮಾಜ ಸೇವೆ ಮಾಡುತ್ತಿದ್ದು ಎಂಆರ್‌ಪಿಎಲ್ ಸಿಎಸ್‌ಆರ್ ನಿಧಿಯಲ್ಲಿ ನೂರಾರು ಕೋಟಿ ರೂ.ಅನುದಾನ ನೀಡಲಾಗುತ್ತಿದೆ. ಕೈಕಾರ ಶಾಲೆಗೆ ನೀಡಿದ ಅನುದಾನ ಸದ್ಬಳಕೆಯಾಗಿದೆ. ಸಾಮಾಜಿಕ ಕಳಕಳಿಯಲ್ಲಿ ಎಂಆರ್‌ಪಿಎಲ್ ಸೇವೆ ನೀಡುತ್ತಿದೆ ಎಂದರು.

‘ಪನಡ್ಕ ಮಂಜುನಾಥ ಶೆಟ್ಟಿ ಸಾಂಸ್ಕೃತಿಕ ಭವನ’ವನ್ನು ವಿಜಯ ಮಂಜುನಾಥ ಶೆಟ್ಟಿ ಕೈಕಾರ ಪನಡ್ಕ ಉದ್ಘಾಟಿಸಿದರು. ‘ಕೈಕಾರ ಕುಸುಮ ಸುಬ್ಬಣ್ಣ ಶೆಟ್ಟಿ ರಂಗಮಂದಿರ’ವನ್ನು ಅಹಿಲ್ಯಾನಗರ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತಸರ ಕೆ.ಕೆ ಶೆಟ್ಟಿ ಉದ್ಘಾಟಿಸಿದರು. ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಳ್ಳತ್ತಾರು, ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಬೈಟ್ ದೇ ಇಂಡಿಯಾ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಮನಮೋಹನ್ ರೈ ಚೆಲ್ಯಡ್ಕ, ಹಿರಿಯ ಸರ್ಜನ್ ಡಾ.ಎ.ಕೆ ರೈ, ಕೆಯ್ಯೂರು ಕೆಪಿಎಸ್‌ನ ಕಾರ್ಯಾಧ್ಯಕ್ಷ ಎ.ಕೆ.ಜಯರಾಮ ರೈ, ಚಿನ್ನದ ಪದಕ ವಿಜೇತ ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಎ.ಜೆ.ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ|ಶಾಂತರಾಮ ರೈ, ರಾಮಣ್ಣ ಪೂಜಾರಿ ಕೈಕಾರ, ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ನೆಟ್ವಾಳ ಬಾಲಕೃಷ್ಣ ರೈ, ವಿಜಯ ಬ್ಯಾಂಕ್ ನಿವೃತ್ತ ಹಿರಿಯ ಪ್ರಬಂಧಕ ಸುರೇಂದ್ರ ರೈ ಮುಂಡಾಳಗುತ್ತು, ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಆನಂದ ಪುಂಡಿಕಾಯಿ, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಶಿವರಾಮ ಶೆಟ್ಟಿ ‘ಶಿವಸದನ ಬಿಲ್ಲಾಜೆ, ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಪ್ರಧಾನ ಕಾರ್ಯದರ್ಶಿ ರಾಮಣ್ಣ ರೈ, ಕೋಶಾಧಿಕಾರಿ ಶ್ರೀಧರ ರೈ ಹೆಚ್., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶೀಲಾವತಿ, ಎಲ್‌ ಕೆಜಿ-ಯುಕೆಜಿ ಅಭಿವೃದ್ಧಿ ಸಮಿತಿ ಅಧ್ಯಕ್ಷಸಂಜಿತ್ ರೈ ತೊಟ್ಟಿ, ಸಂಚಾಲಕಿ ಶಾರದಾ ಎಸ್. ಶಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಸನ್ಮಾನ:

ಶಾಸಕ ಅಶೋಕ್ ಕುಮಾರ್ ರೈ, ಎಂಆ‌ರ್ ಪಿಎಲ್‌ನ ಚೀಫ್ ಜನರಲ್ ಮ್ಯಾನೇಜರ್ ಮನೋಜ್ ಕುಮಾರ್, ಕೆ.ಕೆ.ಶೆಟ್ಟಿ, ವಿಜಯ ಮಂಜುನಾಥ ಶೆಟ್ಟಿ ಶತಮಾನೋತ್ಸದ ಸಮಿತಿ ಸಂಚಾಲಕ ಸೀತಾರಾಮ ರೈ ಚೆಲ್ಯಡ್ಕ, ಎಲ್‌ ಕೆಜಿ ಯುಕೆಜಿ ಅಭಿವೃದ್ಧಿ ಸಮಿತಿ ಸಂಚಾಲಕಿ ಶಾರದಾ ಎಸ್ ಶೆಟ್ಟಿ, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ ಚಂದ್ರಹಾಸ ರೈ ಹನಡ್ಕ, ಶಾಲಾ ಸ್ಥಳದಾನಿ ರಾಮಣ್ಣ ಪೂಜಾರಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಪಾದ ತೊಳೆದು ಗುರುವಂದನೆ: 

ಹಿರಿಯ ವಿದ್ಯಾರ್ಥಿಗಳು ಶಾಲಾ ನಿವೃತ್ತ ಶಿಕ್ಷಕ ವೆಂಕಪ್ಪ ಗೌಡ ಅವರ ಪಾದ ತೊಳೆದು, ಪಾದಪೂಜೆ ನೆರವೇರಿಸಿ ಗುರುವಂದನೆ ಸಲ್ಲಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಶತಮಾನೋತ್ಸವ ಸಮಿತಿ ಸಂಚಾಲಕ ಸೀತಾರಾಮ ರೈ ಚೆಲ್ಯಡ್ಕ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರಮ್ಯ ಸಂಜಿತ್ ರೈ, ರವಿ ಬಾಳುಮೂಲೆ, ಮಂಜುನಾಥ ಬಿಜತ್ರೆ, ಹರೀಶ್ ಮಿನಿಪದವು, ಗೀತಾ ಡಿ.ರೈ, ಮಾಲತಿ ರೈ, ಸಂತೋಷ್ ರೈ, ರಮೇಶ್ ಬಳ್ಳ, ಸಂದೀಪ್ ರೈ ಚಿಲ್ಲೆತ್ತಾರು, ನವೀನ್ ರೈ ಪನಡ್ಕ, ಪ್ರಜ್ವಲ್ ರೈ ತೊಟ್ಟ, ಅರುಣ್ ಕುಮಾರ್ ರೈ, ಶಶಿಕಾಂತ ಎರ್ಮೆಟ್ಟಿ, ಹರೀಶ್ ರೈ ಮೂಲೆ, ಚಂದ್ರಹಾಸ ರೈ ಪನಡ್ಕ, ಸಂತೋಷ್ ರೈ ತೊಟ್ಟ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಮಂಗಳೂರಿನ ಗೀತ್ ಮ್ಯೂಸಿಕಲ್ಸ್ನ ಕರುಣಾಕರ್ ಇವರಿಂದ ದ್ವಿ ಕಂಠ ಸಿರಿ ಗಾಯನ, ಅಂತರಾಷ್ಟ್ರೀಯ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ಗೆ ಸೇರಿದ ಆರಾಧ್ಯ ಎ ರೈ ತೊಟ್ಟಿ ಇವರಿಂದ ಯೋಗ ಪ್ರದರ್ಶನ, ಸಭಾ ಕಾರ್ಯಕ್ರಮದ ಬಳಿಕ ರಾತ್ರಿ ಕೈಕಾರ ಶಾಲಾ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದ ಅಶೋಕ್ ಪೊಳಲಿಯವರಿಂದ ವಿಭಿನ್ನ ಶೈಲಿಯ ನೃತ್ಯ ಕಾರ್ಯಕ್ರಮ ನಡೆಯಿತು.

ಶತ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ: 

ಕೈಕಾರ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನೂರು ಮಂದಿ ಹಿರಿಯ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಶಾಲಾ ನಿವೃತ್ತ ಶಿಕ್ಷಕ ವೆಂಕಪ್ಪ ಗೌಡ ಧ್ವಜಾರೋಹಣ ನೆರವೇರಿಸುವ ಮೂಲಕ ಶತಮಾನೋತ್ಸವದ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು. ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಶಿವರಾಮ ಶೆಟ್ಟಿ ಶಿವಸದನ ಬಿಲ್ಲಾಜೆ ಧ್ವಜಸ್ಥಂಭ ಲೋಕಾರ್ಪಣೆಗೊಳಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶೀಲಾವತಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಒಳಮೊಗ್ರು ಗ್ರಾ.ಪಂ ಸದಸ್ಯರಾದ ನಳಿನಾಕ್ಷಿ, ವನಿತಾ ಮನೋಜ್, ಪ್ರದೀಪ್ ಎಸ್., ಅಂಗನವಾಡಿ ಕಾರ್ಯಕರ್ತೆ ವೀಣಾ ಕುಮಾರಿ, ಶತಮಾನೋತ್ಸವ ಸಮಿತಿ ಕೋಶಾಧಿಕಾರಿ ಶ್ರೀಧರ ರೈ ಹೆಚ್., ಸಂಚಾಲಕ ಸೀತಾರಾಮ ರೈ ಚೆಲ್ಯಡ್ಕ, ಎಲ್‌ ಕೆಜಿ, ಯುಕೆಜಿ ಅಭಿವೃದ್ಧಿ ಸಮಿತಿ ಅಧ್ಯಕ್ಷಸಂಜಿತ್ ರೈ ತೊಟ್ಟಿ, ಸಂಚಾಲಕಿ ಶಾರದಾ ಎಸ್ ಶೆಟ್ಟಿ ಪನಡ್ಕ, ಶಾಲಾ ನಾಯಕಿ ಧನು ಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ

ಎಸ್‌ಡಿಎಂಸಿ ಅಧ್ಯಕ್ಷೆ ಶೀಲಾವತಿ, ಮಾಜಿ ಅಧ್ಯಕ್ಷರಾದ ಜಯರಾಮ ರೈ ತೊಟ್ಟ ಬಿಲ್ಲಾಜೆ, ಮುರಳೀಧರ ಕಲ್ಲೂರಾಯ, ಸುಧಾಕರ ರೈ ಕೈಕಾರ, ಚೋಮ ನಾಯ್ಕ ಹೊಸಲಕ್ಕೆ, ಗಂಗಾ ಹೊಸಲಕ್ಕೆ, ಸುಧಾ ವಿನಯ ರೈ ಪನಡ್ಕ, ಸರೋಜಿನಿ ಹೊಸಲಕ್ಕೆ, ದಿವಾಕರ ಆಚಾರ್ಯ ಕೈಕಾರ. ಶರೀಫ್ ಕೈಕಾರ, ಅಂಗನವಾಡಿ ಕಾರ್ಯಕರ್ತೆಯರಾದ ವೀಣಾ, ವಿನುತಾ ಸುಭಾಷಿಣಿ, ಅಕ್ಷರ ದಾಸೋಹ ಸಿಬ್ಬಂದಿಗಳಾದ ಗುಣವತಿ, ವಿಮಲ, ಶಕುಂತಳಾ, ಮೀನಾಕ್ಷಿ, ಕುಸುಮ, ಮುಖ್ಯ ಶಿಕ್ಷಕರು, ಖಾಯಂ ಶಿಕ್ಷಕರು, ಅತಿಥಿ ಹಾಗೂ ಗೌರವ ಶಿಕ್ಷಕರು, ಶಾಲಾ ಆವರಣಗೋಡೆ ನಿರ್ಮಾಣಕ್ಕೆ ನರೇಗಾ ಯೋಜನೆಯ ಮೂಲಕ ಸಹಕರಿಸಿದವರು, ಕಾರ್ಯಕ್ರಮದಲ್ಲಿ ಸಹಕರಿಸಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್‌ಎಸ್ಎಸ್ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಸ್ವಾಗತಿಸಿದರು. ಕಾರ್ಯದರ್ಶಿಯಾಗಿರುವ ಮುಖ್ಯಗುರು ರಾಮಣ್ಣ ರೈ ವಂದಿಸಿದರು. ಸಂತೋಷ್ ಕುಮಾರ್ ರೈ ಹಾಗೂ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಕಿಶೋರ್ ಮಿನಿಪದವು, ವಿದ್ಯಾ ದಿನೇಶ್ ರೈ ತೊಟ್ಲ, ವಿಶ್ವನಾಥ ನಾಯ್ಕ ಬಿಜತ್ರೆ, ಪ್ರತಿಮಾ ಪನಡ್ಕ, ದನಿತಾ ಯಜ್ಞನಾಥ ರೈ, ರಮಾನಂದ ರೈ ನಡುಕುಮೇರು, ತುಳಸಿ ದಿನೇಶ್ ಗೌಡ, ಸಂತೋಷ್ ರೈ ಎರ್ಮೆಟ್ಟಿ, ಶ್ರೀನಿವಾಸ ನಾಯ್ಕ ಬಿಜತ್ರೆ, ನವೀನ್ ರೈ ಪನಡ್ಕ, ಕಿರಣ್ ರೈ ಪುಂಡಿಕಾಯಿ, ಶಶಿಕಾಂತ ಶೆಟ್ಟಿ ಎರ್ಮೆಟ್ಟಿ, ಚಿತ್ರಾವತಿ ಸತೀಶ್ ರೈ, ಸವಿತಾ, ಹರೀಶ್ ಕುಲಾಲ್ ಕೈಕಾರ, ಸಂತೋಷ ರೈ ತೊಟ್ಟ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಅಪರಾಹ್ನ ಕೈಕಾರ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ವಿಶಲ ನಾಯಕ್ ಕಲ್ಲಡ್ಕ ಬಳಗದವರಿಂದ ಗೀತಾ-ಸಾಹಿತ್ಯ-ಸಂಭ್ರಮ ನಡೆಯಿತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಅಂಬಿಕಾದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ | ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ವಿಶೇಷ ಯೋಜನೆ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರಾಯೋಜಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು…

ಕೈಕಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ: ಎರಡು ದಿನಗಳ ಐತಿಹಾಸಿಕ ಸಂಭ್ರಮಕ್ಕೆ ಭರ್ಜರಿ ಸಿದ್ಧತೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿರುವ ಕೈಕಾರ ಸರ್ಕಾರಿ ಹಿರಿಯ…