ಶಿಕ್ಷಣ

ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್ ರೈರವರಿಗೆ ಡಾಕ್ಟರೇಟ್ ಪದವಿ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಇಂಗ್ಲೀಷ್‌ ವಿಭಾಗದ ಮುಖ್ಯಸ್ಥೆ ಭಾರತಿ ಎಸ್‌. ರೈ ಅವರು ಸಲ್ಲಿಸಿದ “ರಿಇನ್ವೆಂಟಿಂಗ್‌ ಕರ್ಣ: ಅನ್‌ ಎಕ್ಸಪ್ಲೋರೇಷನ್‌ ಆಫ್‌ ಸೆಲೆಕ್ಟ್‌ ರಿಟೆಲ್ಲಿಂಗ್ಸ್‌ ಆಫ್‌ ದ ಮಹಾಭಾರತ” [REINVENTING KARNA: AN EXPLORATION OF SELECT RETELLINGS OF THE MAHABHARATA] ಎಂಬ ಮಹಾ ಪ್ರಬಂಧಕ್ಕೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯ ಡಾಕ್ಟರೇಟ್‌ ಪದವಿ ಪ್ರದಾನ ಮಾಡಿದೆ.

ಶ್ರೀನಿವಾಸ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕಿ ಡಾ| ಮಂಜುಳಾ ಕೆ.ಟಿ. ಮಾರ್ಗದರ್ಶನ ನೀಡಿದ್ದರು. ಸಂಶೋಧನೆ ಅವಧಿಯಲ್ಲಿ ಭಾರತಿ ಎಸ್.ರೈ ಅವರ ಹನ್ನೆರಡು ಸಂಶೋಧನಾ ಲೇಖನಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪೀರ್-ರಿವ್ಯೂಡ್ ಸಂಶೋಧನಾ  ನಿಯತಕಾಲಿಕಗಳಲ್ಲಿ(Peer Reviewed) ಪ್ರಕಟಿಸಲ್ಪಟ್ಟಿವೆ ಮತ್ತು 3 ರಾಷ್ಟ್ರಮಟ್ಟದ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುತ್ತಾರೆ.

ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ., ಎಂ.ಫಿಲ್ ಹಾಗೂ ಕಾನೂನು ಪದವೀಧರೆಯಾಗಿರುವ ಇವರು   ಪ್ರಸ್ತುತ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಇಂಗ್ಲೀಷ್‌ ವಿಭಾಗದ ಮುಖ್ಯಸ್ಥರಾಗಿ ಹಾಗೂ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸಂಸ್ಥೆಯ ಸಂಚಾಲಕ ವಂ.ಲಾರೆನ್ಸ್ ಮಸ್ಕರೇನ್ಹಸ್ ಹಾಗೂ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೊ ಅವರು ಅಭಿನಂದಿಸಿದ್ದಾರೆ.

ಫಿಲೋಮಿನಾ ಕಾಲೇಜಿನಲ್ಲಿ 24 ವರ್ಷಗಳ ಸೇವೆ ಪೂರೈಸಿರುವ ಡಾ. ಭಾರತಿ ಎಸ್ ರೈ ಅವರು ತಮ್ಮ ಶೈಕ್ಷಣಿಕ ಸೇವೆಗಾಗಿ ಪುತ್ತೂರು ತಾಲೂಕು ಬಂಟರ ಸಂಘದ 2022ರ ಅಶ್ವಿನಿ ಬೆಸ್ಟ್ ಟೀಚರ್ ಗೋಲ್ಡ್ ಅವಾರ್ಡ್ ಗೆ ಭಾಜನರಾಗಿರುತ್ತಾರೆ. ಸಂಸ್ಥೆಯಲ್ಲಿ 14 ವರ್ಷಗಳ ಕಾಲ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಯಾಗಿ, 5 ವರ್ಷಗಳ ಕಾಲ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಯಾಗಿ, 3 ವರ್ಷಗಳ ಕಾಲ ಮಹಿಳಾ ಘಟಕದ ನಿರ್ದೇಶಕರಾಗಿ, ಕಾಲೇಜಿನ ವಾರ್ಷಿಕ ಸಂಚಿಕೆ “ಫಿಲೋಪ್ರಭ “ಹಾಗೂ “ಪರ್ಲ್ ಬಹುಶಿಸ್ತೀಯ ಸಂಶೋಧನಾ ನಿಯತಕಾಲಿಕೆ”ಯ ಸಹಸಂಪಾದಕಿಯಾಗಿ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ.

ಡಾI ಭಾರತಿ  ಎಸ್. ರೈ ಅವರು, ದಿI ಬೆಳಿಯೂರುಗುತ್ತು ಬಾಲಕೃಷ್ಣ ರೈ ಮತ್ತು ದಿI ಸಣಂಗಳ ಲಲಿತಾ ಬಿ.ಬಿ. ರೈ ಅವರ ಪುತ್ರಿ ಹಾಗೂ ಉದ್ಯಮಿ ಬೇಲ್ಯ ಸನತ್ ಕುಮಾರ್ ರೈ ಅವರ ಧರ್ಮಪತ್ನಿ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸೇಂಟ್ ಫಿಲೊಮಿನಾ ಕಾಲೇಜಿನಲ್ಲಿ ಹುತಾತ್ಮರ ದಿನಾಚರಣೆ | ಮಹಾತ್ಮ ಗಾಂಧೀಜಿ, ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ

ಪುತ್ತೂರು: ಇಲ್ಲಿನ ಸೇಂಟ್ ಫಿಲೊಮಿನಾ ಕಾಲೇಜಿನ (ಸ್ವಾಯತ್ತ) ಸ್ಪಂದನ ಹಾಲ್‌ನಲ್ಲಿ ಜನವರಿ…