ಶಿಕ್ಷಣ

ಅಕ್ಷಯ ಕಾಲೇಜಿನಲ್ಲಿ ಆತಿಥ್ಯ ವಿಜ್ಞಾನ ವಿಭಾಗದ ‘ಕಾಯು’ ಸಂಘ ಉದ್ಘಾಟನೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಗರದ ಅಕ್ಷಯ ಕಾಲೇಜಿನ ಆತಿಥ್ಯ ವಿಜ್ಞಾನ ವಿಭಾಗದ ವತಿಯಿಂದ ಇತ್ತೀಚೆಗೆ ವಿಭಾಗದ ನೂತನ ಸಂಘ `ಕಾಯು’ ಮತ್ತು ಅದರ ಲೋಗೋವನ್ನು ಕಾಲೇಜು ಸಭಾಂಗಣದಲ್ಲಿ ಉದ್ಘಾಟಿಸಲಾಯಿತು.

chennai-shopping
maithri

ಕಾರ್ಯಕ್ರಮ ಉದ್ಘಾಟಿಸಿದ ಗ್ಯಾಸ್ಪರ್ ರೆಸ್ಟೋರೆಂಟ್, ಲುಟಿನಾ ಯುರೋಪ್ನ ಮುಖ್ಯ ಬಾಣಸಿಗ ನವೀನ್ ಶಂಕರ್ ಮಾತನಾಡಿ, ಆತಿಥ್ಯ ಉದ್ಯಮದಲ್ಲಿ ವೃತ್ತಿಪರತೆ, ಬೆಳವಣಿಗೆ ಮತ್ತು ಸಮರ್ಪಣಾ  ಮನೋಭಾವ ಅಗತ್ಯ ಎಂದರು.

ಮುಖ್ಯ ಅತಿಥಿಯಾಗಿದ್ದ ಹೋಂ ಬೇಕರ್ ಮೇಘಾ ಕುಕ್ಕುಂಜೆ ಅವರು ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸಿಂದ ಬೇಕಿಂಗ್ ಇಂಡಸ್ಟ್ರಿ, ಸ್ವಂತ ಉದ್ಯಮ ಪ್ರಾರಂಭಕ್ಕೆ ಯಾವ ರೀತಿಯಲ್ಲಿ ಸಹಾಯವಾಗುತದೆ ಹಾಗೂ ಈ ಕೋರ್ಸಿನ  ವಿಸ್ತಾರತೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅರ್ಪಿತ್ ಟಿ. ಮಾತನಾಡಿ, ವೃತಿಪರ ಶಿಕ್ಷಣ ನೀಡುವ ಉದೇಶದಿಂದ 3 ವರ್ಷದಿಂದ ಬಿ.ಎಚ್.ಎಸ್. ಕೋರ್ಸ್ ಆರಂಭಿಸಿದೆ ಮುಂದೆ `ಕಾಯು’ ಅಸ್ಸೋಸಿಯೇಷನ್ನಿಂದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಕಾರ್ಯಕ್ರಮ ನಡೆಯಲಿ ಎಂದು ಶುಭಹಾರೈಸಿದರು.

ಪ್ರಮುಖವಾಗಿ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಕಚೇರಿ ಸಹಾಯಕ ಅಶ್ವತ್, ಡಿಸೈನರ್ ಸಂತೋಶ್,  ಹೌಸ್ಕೀಪಿಂಗ್ ಸಿಬ್ಬಂದಿಗಳಾದ ಸುಜಾತ, ಯಶೋದಾ ಮತ್ತು ದಯಾಮಣಿ ಅವರನ್ನು ಸನ್ಮಾನಿಸಲಾಯಿತು.

ವಿಭಾಗದ ಮುಖ್ಯಸ್ಥರಾದ ಅವಿನಾಶ್ ಪ್ರಾಸ್ತಾವಿಕ ಮಾತನಾಡಿದರು. ದ್ವಿತೀಯ ಬಿ.ಎಚ್.ಎಸ್ ಕಿಶನ್ ಸ್ವಾಗತಿಸಿ, ತೃತೀಯ ಬಿ.ಎಚ್.ಎಸ್. ಸಿಂಚನ್, ಪ್ರಥಮ ಬಿ.ಎಚ್.ಎಸ್. ವಿದ್ಯಾರ್ಥಿ ರಶ್ವಿನ್ ಅತಿಥಿಗಳನ್ನು ಪರಿಚಯಿಸಿದರು. ಬಿ.ಎಚ್.ಎಸ್ ವಿಭಾಗದ ಉಪನ್ಯಾಸಕರಾದ ಪ್ರಜ್ವಲ್ ಆಲ್ಬರ್ಟ್ ಡಿಸೋಜಾ ವಂದಿಸಿದರು. I ಬಿ.ಎಚ್.ಎಸ್ ವಿದ್ಯಾರ್ಥಿನಿ ಹರ್ಷಿತಾ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಮಕ್ಕಳ ರಕ್ಷಣೆಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಸರ್ಕಾರ | ಮೊಬೈಲ್ ಬ್ಯಾನ್ ಜೊತೆಗೆ ಹಲವು ಸುಧಾರಣಾ ಕ್ರಮಗಳು!

ಬೆಂಗಳೂರು:ರಾಜ್ಯದಲ್ಲಿ ಮಕ್ಕಳ ಆರೋಗ್ಯ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಹತ್ವದ…