ಶಿಕ್ಷಣ

ಅಂಬಿಕಾ  ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಆಟಿದ ಕೂಟ ಕಾರ್ಯಕ್ರಮ|ಆಧುನಿಕತೆ, ಅನ್ಯಭಾಷೆಗಳ  ಹೇರಿಕೆಯಿಂದ ತುಳುವಿಗೆ ಹಾನಿ: ಹೇಮಂತ್

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರುತುಳು ಭಾಷೆಗೆ ಅದರದ್ದೇ ಆದ ಲಿಪಿ ಇದೆತುಳು ಗ್ರಂಥಗಳಿವೆಆದರೆ ಆಧುನಿಕತೆ ಮತ್ತು ಅನ್ಯ ಭಾಷಾ ಹೇರಿಕೆಯಿಂದಾಗಿ ತುಳು ಭಾಷೆ ತೆರೆಯಮರೆಗೆ ಸರಿಯುತ್ತಿದೆ ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ ಸಂಸ್ಥೆಯ ಜೀವನ ಕೌಶಲ್ಯ ಶಿಕ್ಷಕ ಹೇಮಂತ್ ಹೇಳಿದರು.

akshaya college

     ಅವರು ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಲಾದ ಆಟಿದ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಅನುಭವಿಸುತ್ತಿದ್ದ ಕಷ್ಟದ ಜೀವನ ಕಾಲಕ್ಕೆ ಸೇವಿಸುತ್ತಿದ್ದ ಆಹಾರ ಪದ್ಧತಿರೋಗರುಜಿನಗಳಿಗೆ ಔಷಧವಿಲ್ಲದ ಸಂದರ್ಭದಲ್ಲಿ ಪಾಲೆ ತೊಗಟೆಯ ಕಷಾಯ ಸೇವನೆ ಮತ್ತು ಅದರಲ್ಲಿನ ರೋಗ ನಿರೋಧಕ ಶಕ್ತಿಯ ಗುಣಗಳನ್ನು ವಿವರಿಸಿಆಟಿ ತಿಂಗಳ ಕಷ್ಟವನ್ನು ಕಳೆಯಲು ಬರುವ ಆಟಿಕಳಂಜನ ಹಿನ್ನೆಲೆವೇಷಭೂಷಣಆಚರಣಾ ಪದ್ಧತಿಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ತುಳುನಾಡಿನ ಪರಂಪರೆಯ ದ್ಯೋತಕವಾದ ಚೆನ್ನಮಣೆ ಆಟದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರುಪ್ರಾಂಶುಪಾಲೆ ಮಾಲತಿ ಡಿ ಭಟ್ ಹಾಗೂ ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರುವಿವಿಕ್ತಾ ರೈ ಸ್ವಾಗತಿಸಿಕನಿಷ್ಕ್ ಧನ್ಯವಾದ ಸಮರ್ಪಣೆ ಮಾಡಿದರು ರಕ್ಷಾ ಕಾರ್ಯಕ್ರಮ ನಿರೂಪಿಸಿದರುಆಟಿಕಳಂಜನ ಆಗಮನದ ಮೂಲಕ ತುಳು ಭಾಷೆಯಲ್ಲಿಯೇ ಆಟಿದ ಕೂಟ ಕಾರ್ಯಕ್ರಮ ನಡೆಸಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಅಂಬಿಕಾದ ಅಡುಗೆಮನೆಗೆ ಆಧುನಿಕ ಸ್ಪರ್ಶ! ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ಹೈಟೆಕ್ ವ್ಯವಸ್ಥೆ

ಪುತ್ತೂರು: ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ…