ಪುತ್ತೂರು: ಮಣ್ಣಿನ ಸಂರಕ್ಷಣೆಯಾಗಬೇಕಾದರೆ ಪ್ಲಾಸ್ಟಿಕ್ ಬಳಕೆ ಕಡಿಮೆ ಆಗಬೇಕು. ಆದರೆ ನಮ್ಮ ದಿನಚರಿ ಆರಂಭವಾಗುವುದೇ ಹಲ್ಲುಜ್ಜುವ ಪ್ಲಾಸ್ಟಿಕ್ ಬ್ರಷ್ನಿಂದ. ಸೌಂದರ್ಯ ವರ್ಧಕಗಳು, ಫೇಸ್ ಮಾಸ್ಕ್, ತಿನ್ನುವ ಆಹಾರ, ಕುಡಿಯುವ ನೀರು ಇವೆಲ್ಲವೂ ಪ್ಲಾಸ್ಟಿಕ್ನಿಂದ ಕೂಡಿವೆ. ಆದ್ದರಿಂದಲೇ ಒಂದಲ್ಲ ಒಂದು ರೀತಿಯ ಅರೋಗ್ಯ ಸಮಸ್ಯೆಗಳು ಮನುಷ್ಯನನ್ನು ಭಾದಿಸುತ್ತಲೇ ಇರುತ್ತವೆ ಎಂದು ಪುತ್ತೂರು ಉಪವಲಯ ಅರಣ್ಯ ಅಧಿಕಾರಿ ಉಲ್ಲಾಸ್ ಕೆ. ಇವರು ಮಾತನಾಡಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯಲ್ಲಿ ಗುರುವಾರ ಆಚರಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ಲಾಸ್ಟಿಕ್ ನಿರ್ಮೂಲನೆಗೆ ಕ್ರಮ ಕೈಗೊಂಡು ಏಳು ವರ್ಷಗಳಾದರು ಅದರ ಸಂಪೂರ್ಣ ನಿರ್ಮೂಲನೆ ಸಾಧ್ಯವಾಗಲಿಲ್ಲ. ನಾವು ಪ್ರತಿನಿತ್ಯ ಪ್ಲಾಸ್ಟಿಕ್ ಬಳಸುವುದನ್ನು ಕಡಿಮೆ ಮಾಡಿ ಬಯೋ ಡಿಗ್ರೆಡೆಬಲ್ ಉತ್ಪನ್ನಗಳನ್ನು ಬಳಸುವುದರಿಂದ ಸ್ವಲ್ಪ ಮಟ್ಟಿನ ಬದಲಾವಣೆಗಳನ್ನು ತರಲು ಸಾಧ್ಯ ಎಂದ ರಲ್ಲದೆ ಭೂಮಿಯ ಬಗೆಗೆ ಕಾಳಜಿಯನ್ನು ವಹಿಸಿ, ಅದನ್ನು ಸಂರಕ್ಷಿಸುವ ಸಲುವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಬೇಕೆನ್ನುವ ತೀರ್ಮಾನವನ್ನು ವಿಶ್ವಸಂಸ್ಥೆಯು 1972 ರಲ್ಲಿ ಕೈಗೊಂಡಿತು. ಅದರನ್ವಯ ನಾವು ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸುತ್ತೇವೆ ಎಂದು ಇತಿಹಾಸದೆಡೆಗೆ ಬೆಳಕು ಚೆಲ್ಲಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಪ್ಲಾಸ್ಟಿಕ್ ಎಂಬುದು ಪರಿಸರಕ್ಕೆ ಹಾನಿಕಾರಕ. ಅದು ಮಣ್ಣಲ್ಲಿ ಮಣ್ಣಾಗುವುದಿಲ್ಲ, ನೀರಲ್ಲಿ ಕರಗುವುದಿಲ್ಲ, ಬೆಂಕಿಯಲ್ಲಿ ಸುಡುವುದಿಲ್ಲ. ಹಾಗಾಗಿ ನಾವು ಪ್ಲಾಸ್ಟಿಕ್ ಕೈ ಚೀಲ ಬಳಸುವುದರ ಬದಲು ಬಟ್ಟೆಯ ಕೈಚೀಲವನ್ನು ಬಳಸಬೇಕು. ಪ್ರಕೃತಿಯನ್ನು ಉಳಿಸುವುದು, ಸಂರಕ್ಷಿಸುವುದು ನಮ್ಮ ಕರ್ತವ್ಯ. ಪ್ರಕೃತಿಯನ್ನು ನಾವು ಸಂರಕ್ಷಿಸದೇ ಇದ್ದಲ್ಲಿ ಪ್ರಕೃತಿಯಲ್ಲಿ ಖಂಡಿತವಾಗಿ ನಮ್ಮ ಅಸ್ತಿತ್ವ ಇರಲು ಸಾಧ್ಯವಿಲ್ಲ ಎಂದರು.
10ನೇ ತರಗತಿ ವಿದ್ಯಾರ್ಥಿನಿ ತನ್ವಿ ಯು. ಪರಿಸರ ಮಾಲಿನ್ಯದ ಕುರಿತು ಮಾತನಾಡಿದರೆ, ೮ನೇ ತರಗತಿ ವಿದ್ಯಾರ್ಥಿನಿ ಅನ್ವಿತಾ ಹವಾಮಾನದ ಕುರಿತು, 7ನೇ ತರಗತಿ ವಿದ್ಯಾರ್ಥಿನಿ ಶಾಂಭವಿ ರಂಜನ್ ಪ್ರಕೃತಿಯ ವೈಶಿಷ್ಟ್ಯತೆಯ ಕುರಿತು ಮಾಹಿತಿಯನ್ನು ಹಂಚಿಕೊAಡರು. ವೇದಿಕೆಯಲ್ಲಿ ಶಾಲಾ ಪ್ರಂಶುಪಾಲೆ ಮಾಲತಿ ಡಿ. ಭಟ್ ಉಪಸ್ಥಿತರಿದ್ದರು.
9ನೇ ತರಗತಿಯ ವಿದ್ಯಾರ್ಥಿನಿ ದ್ವಿತಿ ಸ್ವಾಗತಿಸಿ, 9ನೇ ತರಗತಿಯ ವಿದ್ಯಾರ್ಥಿ ಯಶಸ್ ವಂದಿಸಿದರು. 8ನೇ ತರಗತಿಯ ವಿದ್ಯಾರ್ಥಿ ಶ್ರೀರಾಮ್ ಕಾರ್ಯಕ್ರಮ ನಿರೂಪಿಸಿದರು.
ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಪರಿಸರ ದಿನಾಚರಣೆ | ಪ್ಲಾಸ್ಟಿಕ್’ನಿಂದ ಪರಿಸರ ಮತ್ತು ಆರೋಗ್ಯ ಹಾನಿ : ಉಲ್ಲಾಸ್ ಕೆ.
What's your reaction?
- 594c
- 594cc
- 5ai technology
- 5ajjavara
- 5alwas
- 5apology
- 5artificial intelegence
- 5avg
- 5bihar minister
- 5bjp
- 4bjp leader
- 4bjp national president
- 4bt ranjan
- 4co-operative
- 4coastal
- 4crime
- 4crime news
- 4cyclothon
- 4darmasthala
- 4death news
- 4dust bin
- 4education
- 4fraud
- 3gl
- 3gods own country
- 3gold
- 3google for education
- 3independence
- 3jewel
- 3jewellers
- 3jnana vikasa
- 3karnataka state
- 3kerala village
- 3kukke - kollur temple
- 3lokayuktha
- 2lokayuktha raid
- 2manipal
- 2minister krishna bairegowda
- 2mla ashok rai
- 2mohan alwa
- 2mudubidre
- 2nidana news
- 2nirvathu mukku
- 2nitin nabin
- 2police
- 2ptr tahasildar
- 2puttur
- 2puttur news
- 1puttur tahasildar
- 1republic
- 1revenue
- 1revenue department
- 1revenue minister
- 1school
- 1senior citizen
- 1silver
- 1society
- 1sowmya
- 1students
- 1tahasildar
- 0tahasildar absconded
- 0teachers
- 0tour
- 0trending
- 0udupi
- 0wastage
Related Posts
ಪುರುಷ ಪ್ರಧಾನ ಮನಸ್ಥಿತಿಯೇ ಮಹಿಳಾ ದೌರ್ಜನ್ಯಕ್ಕೆ ಕಾರಣ | ಮಹಿಳಾ ದೌರ್ಜನ್ಯ ಮತ್ತು ಕಾನೂನು ಪರಿಹಾರ ವಿಚಾರ ಸಂಕಿರಣದಲ್ಲಿ ಕೃಷ್ಣಪ್ರಸಾದ್ ನಡ್ಸಾರ್
ಪುತ್ತೂರು: ಮಹಿಳೆಯರು ಸಮಾಜದ ಕಣ್ಣು. ಹಾಗೆಂದು ದೌರ್ಜನ್ಯ ಇಂದಿಗೂ ಮುಂದುವರಿಯುತ್ತಲೇ ಇದೆ. ಇದು…
10 ಸಾವಿರ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ. – ಯು.ಕೆ.ಜಿ. ಆರಂಭಕ್ಕೆ ಸಜ್ಜು
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ದಾಖಲಾತಿ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ…
ಡಿಹೆಚ್ಎಫ್ಡಬ್ಲೂಎಸ್ನಲ್ಲಿ 20 ಆರೋಗ್ಯ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಮಹಿಳೆಯರಿಗೆ ಇಲ್ಲೊಂದು ಸಿಹಿಸುದ್ದಿಯಿದೆ.…
CET 2026: ಅರ್ಜಿ ತಿದ್ದುಪಡಿಗೆ ಗಡುವು!
ಬೆಂಗಳೂರು: ಎಂಜಿನಿಯರಿಂಗ್ ಹಾಗೂ ಕೃಷಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗಾಗಿ…
ಪೊಲೀಸ್ ಸಿಬ್ಬಂದಿಗೆ ಐಎಎಸ್ – ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಜಾಗೃತಿ ಕಾರ್ಯಾಗಾರ
ಪುತ್ತೂರು: ಪೊಲೀಸ್ ಸಿಬ್ಬಂದಿಗಳ ವೃತ್ತಿಜೀವನದ ಜೊತೆಗೆ ಅವರ ವೈಯಕ್ತಿಕ ಪ್ರಗತಿಗೂ ಉತ್ತೇಜನ…
ದ.ಕ.–ಉಡುಪಿಯಲ್ಲಿ ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: ಕಠಿಣ ಭದ್ರತಾ ಕ್ರಮಗಳು ಜಾರಿಗೆ
ಮಂಗಳೂರು: 2025–26ನೇ ಶೈಕ್ಷಣಿಕ ವರ್ಷದ ವಾರ್ಷಿಕ ದ್ವಿತೀಯ ಪಿಯುಸಿ ಪರೀಕ್ಷೆಗಳು ಶನಿವಾರ,…
ಅಕ್ಷಯ ಕೆರಿಯರ್ ಅಕಾಡೆಮಿಯ ಉಚಿತ ವಿಮಾನಯಾನ ತರಬೇತಿ ಯಶಸ್ವಿ
ಪುತ್ತೂರು ಅಕ್ಷಯ ಕೆರಿಯರ್ ಅಕಾಡೆಮಿ ವತಿಯಿಂದ ಡಿಪ್ಲೊಮಾ ಇನ್ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ…
ವಿವೇಕಾನಂದ ಕಾಲೇಜಿನಲ್ಲಿ ಹಂಸಧ್ವನಿ ಕಾರ್ಯಕ್ರಮ | ಸಂಗೀತ ಭಾರತೀಯ ಸಂಸ್ಕೃತಿಯ ಸಂಪತ್ತು: ವಿದ್ವಾನ್ ಕಾಂಚನ ಎ. ಈಶ್ವರ ಭಟ್
ಪುತ್ತೂರು: ಸಂಗೀತವೆಂದರೆ ಒಂದು ಕುಟುಂಬವಿದ್ದಂತೆ. ಸಂಗೀತ ಹೇಳುವುದು ಹಾಗೂ ಕೇಳುವುದರಲ್ಲಿ…
ವಿದ್ಯಾರ್ಥಿಗಳ ಮೊಬೈಲ್ ಅಡಿಕ್ಷನ್’ಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ | ‘ಫೋನ್ ಬಿಡಿ, ಪುಸ್ತಕ ಹಿಡಿ’ ಅಭಿಯಾನ ಆರಂಭ
ಬೆಂಗಳೂರು: ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಫೋನ್ ಬಳಕೆ ನಿಯಂತ್ರಿಸಲು ರಾಜ್ಯ ಸರ್ಕಾರ…
ಮಕ್ಕಳ ರಕ್ಷಣೆಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಸರ್ಕಾರ | ಮೊಬೈಲ್ ಬ್ಯಾನ್ ಜೊತೆಗೆ ಹಲವು ಸುಧಾರಣಾ ಕ್ರಮಗಳು!
ಬೆಂಗಳೂರು:ರಾಜ್ಯದಲ್ಲಿ ಮಕ್ಕಳ ಆರೋಗ್ಯ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಹತ್ವದ…























