ಧಾರ್ಮಿಕ

32ನೇ ವರ್ಷದ ಪುತ್ತೂರು ಕೋಟಿ ಚೆನ್ನಯ ಕಂಬಳದ ಆಮಂತ್ರಣ  ಬಿಡುಗಡೆ |ರಾಜ್ಯಮಟ್ಟದ ಕೆಸರುಗದ್ದೆ ಓಟ ಸೇರ್ಪಡೆ

GL
32ನೇ ವರ್ಷದ ಪುತ್ತೂರು ಕೋಟಿ ಚೆನ್ನಯ ಕಂಬಳದ ಆಮಂತ್ರಣ ಪತ್ರಿಕೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ಪ್ರಾರ್ಥನೆ ನಡೆಸಿ ಬಿಡುಗಡೆಗೊಳಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

32ನೇ ವರ್ಷದ ಪುತ್ತೂರು ಕೋಟಿ ಚೆನ್ನಯ ಕಂಬಳದ ಆಮಂತ್ರಣ ಪತ್ರಿಕೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ಪ್ರಾರ್ಥನೆ ನಡೆಸಿ ಬಿಡುಗಡೆಗೊಳಿಸಲಾಯಿತು.

maithri

ಈ ಬಾರಿ ನಡೆಯುವ ಕಂಬಳದ ಮಧ್ಯೆ ರಾಜ್ಯಮಟ್ಟದ ಕೆಸರುಗದ್ದೆ ಓಟ ಸ್ಪರ್ಧೆಯನ್ನು ನಡೆಯಲಿದೆ. ಕೆಸರುಗದ್ದೆ ಓಟ ಕಂಬಳದ ಒಂದು ಭಾಗವಾಗಿದ್ದು ಮುಂದಿನ ಯುವ ಪೀಳಿಗೆಗೆ ಪ್ರೇರಣೆ ನೀಡುವ ಉದ್ದೇಶದಿಂದ ಹಾಗೂ ಇಂತಹ ಕಾರ್ಯಕ್ರಮದಲ್ಲಿ ಯುವಕರು ಆಸಕ್ತಿಯಿಂದ ತೊಡಗಿಸಿಕೊಳ್ಳುವಂತಾಗಲು ಕಂಬಳದ ಮಧ್ಯೆ ಬಿಡುವಿನ ವೇಳೆಯಲ್ಲಿ ಕೆಸರುಗದ್ದೆ ಓಟವನ್ನು ನಡೆಸಲು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ನಿರ್ಣಯಿಸಲಾಯಿತು.

ಅತಿಥಿಯಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವ‌ರ್, ಸಂತೋಷ್ ಲಾಡ್ :

ಕಂಬಳ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಸಚಿವ ಸಂತೋಷ್‌ ಲಾಡ್ ರವರನ್ನು ಆಹ್ವಾನಿಸಿದ್ದಾರೆ.

ಆಮಂತ್ರಣ ಪತ್ರ ಬಿಡುಗಡೆ ಸಂದರ್ಭ ಮಾಜಿ ಶಾಸಕಿ ಶಕುಂತಳ ಶೆಟ್ಟಿ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ. ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್‌. ಚಂದ್ರಹಾಸ ಶೆಟ್ಟಿ, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ..ಕಂಬಳ ಸಮಿತಿಯ ಉಪಾಧ್ಯಕ್ಷರಾದ ಶಿವರಾಮ ಆಳ್ವ ಕುರಿಯ, ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯ ವಿನಯ ಸುವರ್ಣ, ಉಮೇಶ್‌ ಶೆಟ್ಟಿ ಮಾಣಿಸಾಗು. ಪ್ರೋ ಕಬ್ಬಡಿ ಆಟಗಾರ ಪ್ರಶಾಂತ್ ರೈ ಕೈಕಾರ. ವರುಣ್ ಶೆಟ್ಟಿ, ನಿರಂಜನ್ ರೈ ಮಠಂತಬೆಟ್ಟು. ಜಿನ್ನಪ್ಪ ಪೂಜಾರಿ ಮುರ, ಪದಾಧಿಕಾರಿಗಳಾದ ಪ್ರವೀಣ್ ಶೆಟ್ಟಿ ಅಳಕೆಮಜಲು, ವಿಕ್ರಂ ಶೆಟ್ಟಿ ಅಂತರ, ಮಂಜುನಾಥ ಗೌಡ, ನವೀನ್ ಚಂದ್ರ ನ್ಯಾಕ್ ಬೆದ್ರಾಳ, ರಂಜಿತ್ ಬಂಗೇರ, ರೋಷನ್ ರೈ ಬನ್ನೂರು, ಸನ್ಮತ್ ರೈ ಕುಂಬ್ರ, ಅಜಿತ್ ಮಾಣಿಲ, ಹರೀಶ್ ಶೆಟ್ಟಿ, ಗಣೇಶ್ ರಾಜ್, ಚಂದ್ರಹಾಸ ಬನ್ನೂರು, ಉಮಾಶಂಕರ್ ನಾಯ್, ಸುದೇಶ್ ಕುಮಾ‌ರ್, ಶಶಿಕುಮಾರ್ ನೆಲ್ಲಿ ಕಟ್ಟೆ. ಶರತ್ ಪಡಿಲು ಮೊದಲಾದವರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಉಪ್ಪಿನಂಗಡಿ ವೃತ್ತದಲ್ಲಿ ಉಬಾರ್ ಮಂಜ ಬೈದ್ಯರ ಪುತ್ಥಳಿ ಸ್ಥಾಪಿಸಿ, ಅವರ ಹೆಸರನ್ನಿಡುವಂತೆ ಗೆಜ್ಜೆಗಿರಿ ಸಮಿತಿ ಮನವಿ

ಉಪ್ಪಿನಂಗಡಿ ಮುಖ್ಯ ರಸ್ತೆಯ ವೃತ್ತಕ್ಕೆ ವೀರ ಉಬಾರ್ ಮಂಜ ಬೈದ್ಯರ ತ್ಯಾಗವನ್ನು ಸಾರುವ ಸಲುವಾಗಿ…

ಅನಾಹುತ, ಮೃತ್ಯು ಕಂಟಕ ಪರಿಹಾರಕ್ಕಾಗಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಸೂಕ್ತ ಜಪ, ವಿಶೇಷ ಪ್ರಾರ್ಥನೆ

ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಮೃತ್ಯುಂಜಯ…