ಕರಾವಳಿ

ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಆಸ್ಪತ್ರೆ ಸಿಬ್ಬಂದಿ!

ದಾರಿ ಮಧ್ಯೆ ಹೃದಯಘಾತಕ್ಕೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಂಗಳೂರಿನ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಅಗತ್ಯ ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ. 

ಈ ಸುದ್ದಿಯನ್ನು ಶೇರ್ ಮಾಡಿ

ಬಂಟ್ವಾಳ:  ದಾರಿ ಮಧ್ಯೆ ಹೃದಯಘಾತಕ್ಕೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಯ ಜೀವ ಉಳಿಸಲು ನೆರವಾದ ಮಂಗಳೂರಿನ ಆಸ್ಪತ್ರೆ సిబ్బంది 

ಬಂಟ್ವಾಳ : ದಾರಿ ಮಧ್ಯೆ ಹೃದಯಘಾತಕ್ಕೆ

SRK Ladders

ಒಳಗಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಂಗಳೂರಿನ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಅಗತ್ಯ ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ. 

ಬೆಳ್ತಂಗಡಿ ತಾಲೂಕಿನ ಅಳಕೆ ನಿವಾಸಿ ಮಿಥುನ್ ಹೃದಯಘಾತಕ್ಕೆ ತುತ್ತಾದವರು.ಬಂಟ್ವಾಳ ತಾಲೂಕಿನ ಮದ್ದಡ್ಕ ನಿವಾಸಿ ಪ್ರದೀಪ್ ನಾಯಕ್ ಸಕಾಲದಲ್ಲಿ ಚಿಕಿತ್ಸೆ ಒದಗಿಸಿದರು,

 ಹೃದಯಘಾತಕ್ಕೊಳಗಾಗಿದ್ದು.ಅವರ ಇಸಿಜಿ ರಿಪೋರ್ಟ್‌ ನ್ನು ಅವರ ಸಂಬಂಧಿಕರು ಪ್ರದೀಪ್ ನಾಯಕ್‌ ಕಳುಹಿಸಿದ್ದರು. ಈ ವರದಿಯನ್ನು ಪ್ರದೀಪ್ ನಾಯಕ್ ಅವರು ಖ್ಯಾತ ಹೃದಯತಜ್ಞ ಡಾ| ಪದ್ಮನಾಭ ಕಾಮತ್ ಅವರಿಗೆ ಕಳುಹಿಸಿದ್ದರು. ವರದಿಯನ್ನು ನೋಡಿ ಕಾಮತ್ ಅವರು ತಕ್ಷಣವೇ ರೋಗಿಯನ್ನು ಮಂಗಳೂರು ಆಸ್ಪತ್ರೆಗೆ ಕರೆತರಲು ಸೂಚಿಸಿದ್ದರು.

ಅದರಂತೆ ಉಪ್ಪಿನಂಗಡಿ ಬಳಿಯ ತಣ್ಣೀರುಪಂತ ಅಳಕೆಯಿಂದ ಮಿಥುನ್ ಅವರನ್ನು ಕಾರಿನಲ್ಲಿ ಕರೆದುಕೊಂಡು ಮಂಗಳೂರಿಗೆ ಬರುತ್ತಿದ್ದರು. ಇದೇ ವೇಳೆ ಪ್ರದೀಪ್‌ ನಾಯಕ್ ಅವರು ತನ್ನ ಮನೆಯಿಂದ ಬಸ್ಸಿನಲ್ಲಿ ಹೊರಟಿದ್ದರು. ಮಿಥುನ್ ಅವರು ಪುಂಜಾಲಕಟ್ಟೆ ಕಳೆದು ಸಾಗುತ್ತಿರುವಾಗ ಅವರಿಗೆ ಎದೆನೋವು ತೀವ್ರವಾಯಿತು

ತಕ್ಷಣ ಈ ವಿಚಾರವನ್ನು ಮಿಥುನ್ ಮನೆಯವರು ಪ್ರದೀಪ್ ನಾಯಕ್ ಗೆ ತಿಳಿಸಿದರು. ಕೂಡಲೇ ವಗ್ಗ ಬಳಿ ಬಸ್ಸಿನಿಂದ  ಇಳಿದು ಮಿಥುನ್ ಅವರಿಗಾಗಿ ಕಾದಿದ್ದರು.ಅವರ ಬಳಿ ಹೃದಯಾಘಾತ ವಾದ ಕೂಡಲೇ ಅಗತ್ಯವಾಗಿ ನೀಡಬೇಕಾದ ಔಷಧಿಯನ್ನು ಇರಿಸಿಕೊಂಡಿದ್ದು, ರೋಗಿಗೆ ನೀಡಿದರು. ಇದರಿಂದ ಮಿಥುನ್ ಅವರಿಗೆ ಮತ್ತೆ ಹೃದಯಾಘಾತವಾಗುವುದು ತಪ್ಪಿತು.

ಬಳಿಕ ಅವರು ಅದೇ ಕಾರಿನಲ್ಲಿ ಮಂಗಳೂರಿಗೆ ಸಾಗುತ್ತಿರುವಾಗ ಟ್ರಾಫಿಕ್ ಜಾಮ್ ಇರುವ ಕಾರಣ ಕೆ.ಎಂ.ಸಿ.ಯ ಅಂಬ್ಯುಲೆನ್ಸ್ ವಾಹನಕ್ಕೆ ಕರೆ ಮಾಡಿ ಬರಿಸಿ, ರೋಗಿಯನ್ನು ಶೀಘ್ರವಾಗಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು. ಇದೀಗ ಮಿಥುನ್ ಅವರಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆದಿದ್ದು. ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ

ಈ ಮಾಹಿತಿ ಬಹಿರಂಗವಾಗುತ್ತಲೇ ಪ್ರದೀಪ್ ನಾಯಕ್‌

ಅವರ ಕಾರ್ಯಕ್ಕೆ ಭಾರೀ ಪ್ರಶಂಸೆ ಗಳಿಸಿದರು


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

ವಿದ್ಯುತ್ ತಂತಿ ಕಡಿದು ಬಿದ್ದು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಸಹಿತ ಇಬ್ಬರು ರಿಕ್ಷಾ ಚಾಲಕರು ಮೃತ್ಯು!!

ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ…