ಪುತ್ತೂರು: ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಬಿಡುಗಡೆಗಾಗಿ ಶೀಘ್ರ ಬೇಲ್ ಸಿಗುವಂತೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಅಭಿನವ ಭಾರತ ಮಿತ್ರ ಮಂಡಳಿ, ಸೌಜನ್ಯ ನ್ಯಾಯಪರ ಹೋರಾಟ ಸಮಿತಿ, ಮಹೇಶ್ ಶೆಟ್ಟಿ ಅಭಿಮಾನಿ ಬಳಗ ಪ್ರಾರ್ಥನೆ ಸಲ್ಲಿಸಿತು.
ಅಭಿನವ ಮಿತ್ರ ಮಂಡಳಿಯ ದಿನೇಶ್ ಕುಮಾರ್ ಜೈನ್, ಧನ್ಯ ಕುಮಾರ್ ಬೆಳಂದೂರು, ನವೀನ್ ಕುಲಾಲ್, ಸೌಜನ್ಯ ನ್ಯಾಯಪರ ಹೋರಾಟ ಸಮಿತಿಯ ನವೀನ್ ರೈ ಬನ್ನೂರು, ಗಗನ್ ದೀಪ್ ಕರ್ಮಲ, ಮಹೇಶ್ ಶೆಟ್ಟಿ ತಿಮರೋಡಿ ಅಭಿಮಾನಿಗಳು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.