ಪುತ್ತೂರು: ಮಂಗಳೂರಿಗೆ ದಿನನಿತ್ಯ ತೆರಳುತ್ತಿದ್ದ ಪ್ರಯಾಣಿಕರು ಎಂದಿನಂತೆ ಪುತ್ತೂರು ಬಸ್ ನಿಲ್ದಾಣಕ್ಕೆ ಬಂದರೆ, ಬಸ್ ಇಲ್ಲ…!
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ದೊಡ್ಡ ಪ್ರಮಾಣದಲ್ಲೇ ಸೇರಿದ್ದರು. ಮಂಗಳೂರಿಗೆ ತೆರಳುವ ಒಂದೇ ಒಂದು ಬಸ್ ಇಲ್ಲ ಎನ್ನುವುದನ್ನು ತಿಳಿದು, ಗೊಂದಲಕ್ಕೆ ಒಳಗಾದರು.
ಇದೇ ವೇಳೆ, ಕೆ.ಎಸ್.ಆರ್.ಟಿ.ಸಿ. ಅನೌನ್ಸ್’ಮೆಂಟ್ ಮಾಡಿದ್ದು – “ಪ್ರಯಾಣಿಕರೇ ಗಮನಿಸಿ, ಮಂಗಳೂರಿಗೆ ಯಾವುದೇ ಬಸ್ ಸಂಚರಿಸುತ್ತಿಲ್ಲ” ಎಂದು ಮೊಳಗಿತು.
ಮಡಿಕೇರಿಯಿಂದ ಬಸ್ ಆಗಮಿಸಿದ್ದು, ಕೆಲವರು ಬಸ್ ಹತ್ತಿದರು. ಜಿಲ್ಲೆಯಲ್ಲಿ ಸಂಚಾರ ಇಲ್ಲದೇ ಇರುವುದರಿಂದ ಬಸ್ ಎಲ್ಲಿವರೆಗೆ ಹೋಗುತ್ತದೆಯೋ, ಅಲ್ಲಿವರೆಗೆ ಮಾತ್ರ ಹೋಗುವುದಾಗಿ ಕಂಡಕ್ಟರ್ ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಸ್.ಆರ್.ಟಿ.ಸಿ. ಅಧಿಕಾರಿ, “ಮಂಗಳೂರಿಗೆ ಬಸ್ ಬಿಡುತ್ತಿಲ್ಲ. ಉಳಿದ ಪ್ರದೇಶಗಳಿಗೆ ಬಸ್ ಬಿಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.



































