Gl harusha
ಕರಾವಳಿ

ಮೆಡಿಕಲ್ ಕಾಲೇಜು ಹಿಂದಿನ ಲಾಭಿ ಎಷ್ಟಿತ್ತು ಗೊತ್ತಾ? | ನಿಜವಾಗ್ಲೂ ಮೆಡಿಕಲ್ ಕಾಲೇಜು ಪುತ್ತೂರಿನಲ್ಲಿ ಆಗುತ್ತಾ? ನಿರ್ಮಾಣದ ಯೋಜನೆ ಎಲ್ಲಿ? ಲೋಕಾರ್ಪಣೆ ಯಾವಾಗ? ಪತ್ರಿಕಾಗೋಷ್ಠಿ ನಡೆಸಿದ ಶಾಸಕ ಅಶೋಕ್ ರೈ ಏನು ಹೇಳಿದ್ದಾರೆ… ಇಲ್ನೋಡಿ…

ಒಂದು ವರ್ಷ ಏಳು ತಿಂಗಳು. ಅವಿರತ ಶ್ರಮ, ಪ್ರೀ-ಬಜೆಟಲ್ಲಿ ಭಾಗಿ, ಯೋಜನೆ ನೀಡಲೇಬೇಕೆಂಬ ಹಠ… ಇದರ ಮೇಲೆ ಲಾಭಿಗಳು… ಅಬ್ಬಾ… ಒಂದೇ - ಎರಡೇ? ನಿನ್ನೆ ನಿಟ್ಟುಸಿರು ಬಿಟ್ಟೆ!!

ಈ ಸುದ್ದಿಯನ್ನು ಶೇರ್ ಮಾಡಿ

ಒಂದು ವರ್ಷ ಏಳು ತಿಂಗಳು. ಅವಿರತ ಶ್ರಮ, ಪ್ರಿ-ಬಜೆಟಲ್ಲಿ ಭಾಗಿ, ಯೋಜನೆ ತರಲೇಬೇಕೆಂಬ ಹಠ… ಇದರ ಮೇಲೆ ಲಾಭಿಗಳು… ಅಬ್ಬಾ… ಒಂದೇ – ಎರಡೇ? ನಿನ್ನೆ ನಿಟ್ಟುಸಿರು ಬಿಟ್ಟೆ!!

Muliya
srk ladders
Pashupathi

ಶನಿವಾರ ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದ ಶಾಸಕ ಅಶೋಕ್ ಕುಮಾರ್ ರೈ ಅವರು, ಪುತ್ತೂರಿಗೆ ಮೆಡಿಕಲ್ ಕಾಲೇಜು ತರುವ ಪ್ರಯತ್ನದ ಹಿಂದಿನ ಭವಣೆಯನ್ನು ಹೀಗೆ ಬಿಚ್ಚಿಟ್ಟರು.

ಮೆಡಿಕಲ್ ಕಾಲೇಜು ಪುತ್ತೂರಿಗೆ ತರುತ್ತೇನೆ ಎಂಬ ಆಶ್ವಾಸನೆಯನ್ನು ಚುನಾವಣೆ ಸಂದರ್ಭವೇ ನೀಡಿದ್ದೆ. ಶಾಸಕನಾದ ಬಳಿಕ ಅದಕ್ಕಾಗಿ ಸಾಕಷ್ಟು ಶ್ರಮವನ್ನು ಪಟ್ಟಿದ್ದೇನೆ. ಪ್ರಿ – ಬಜೆಟ್ ಮೀಟಿಂಗ್ ಸಚಿವರು, ಅಧಿಕಾರಿಗಳಿಗೆ ಮಾತ್ರ. ಅದರಲ್ಲಿ ಭಾಗವಹಿಸಿದಾಗ, ಸಿಎಂ ನನ್ನನ್ನು ಪ್ರಶ್ನಿಸಿದ್ದಾರೆ. ಶಾಸಕನ ನೆಲೆಯಲ್ಲಿ ಮಾತನಾಡಲು ಅವಕಾಶ ಕೇಳಿದ್ದು, ಅವಕಾಶ ಸಿಕ್ಕಾಗ ಪ್ರೆಸೆಂಟೇಷನ್ ಮಾಡಿದ್ದೇನೆ. ಹೀಗೆ ಒಂದು ವರ್ಷ ಏಳು ತಿಂಗಳು ಅವಿರತ ಶ್ರಮ ಹಾಕಿ, ಮೆಡಿಕಲ್ ಕಾಲೇಜು ತರಲು ಶ್ರಮಿಸಿದ್ದೇನೆ‌. ಕೊನೆಗೆ, ಬಜೆಟ್ ಪುಸ್ತಕದಿಂದಲೂ ಮೆಡಿಕಲ್ ಕಾಲೇಜು ಹೆಸರು ಹೋಗುತ್ತದೆ ಅಂದುಕೊಂಡಿದ್ದೆ. ಹಾಗಾಗಲಿಲ್ಲ. ನಾವು ಪಟ್ಟ ಶ್ರಮಕ್ಕೆ ಫಲ ಸಿಕ್ಕಿದೆ ಎಂದು ಹರ್ಷಿತರಾದರು.

ಮೆಡಿಕಲ್ ಕಾಲೇಜು ನಮಗೂ ಬೇಕೆಂದು ಒಟ್ಟು 18 ಬೇಡಿಕೆಗಳಿತ್ತು. ಈ ಎಲ್ಲಾ ಖಾಸಗಿ ಲಾಭಿಗಳನ್ನು ಮೀರಿ ನಿಂತಿದ್ದೇವೆ. ಮುಂದಿನ ಮೂರು ವರ್ಷಗಳ ಒಳಗಾಗಿ ಮೆಡಿಕಲ್ ಕಾಲೇಜನ್ನು ಲೋಕಾರ್ಪಣೆ ಮಾಡಬೇಕೆಂಬ ಕನಸು ನಮ್ಮದು. ಅದನ್ನು ಈಡೇರಿಸಲು ಇನ್ನೂ ಶ್ರಮಿಸುತ್ತೇನೆ ಎಂದು ಆತ್ಮವಿಶ್ವಾಸದಿಂದ ನುಡಿದರು.

ಸದ್ಯ ತಾಲೂಕು ಆಸ್ಪತ್ರೆಯ ಜಾಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಕಷ್ಟ ಸಾಧ್ಯ. ಹಾಗಾಗಿ ಸೇಡಿಯಾಪಿನಲ್ಲಿ ಶಕುಂತಳಾ ಶೆಟ್ಟಿ ಅವರು ಗುರುತಿಸಿದ 40 ಎಕರೆ ಜಾಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣದ ಯೋಜನೆ ಇದೆ. ಇದರ ನಿರ್ಧಾರ, ಪರಿಣಿತರ ಸಮಿತಿಯ ಚರ್ಚೆಯ ಬಳಿಕವಷ್ಟೇ. ಮುಂದೆ ಡಿಪಿಆರ್, ಕ್ಯಾಬಿನೆಟ್ ಮಂಜೂರಾತಿ, ಟೆಂಡರ್, ಕಟ್ಟಡ ನಿರ್ಮಾಣ, ಫ್ಯಾಕಲ್ಟೀಸ್ ಆಗಬೇಕಿದೆ. ನಂತರ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಬರೆಯಬೇಕು. ಎಲ್ಲಾ ವ್ಯವಸ್ಥೆಗಳ ಜೊತೆಗೆ ರೋಗಿಗಳ ಸಂಖ್ಯೆಯನ್ನು ಆಧರಿಸಿಕೊಂಡು ಮುಂದಿನ ನಿರ್ಣಯ ಆಗುತ್ತದೆ ಎಂದರು.

ಹೊಸದಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ 300 ಬೆಡ್ ಗಳ ಆಸ್ಪತ್ರೆಗೆ 350 ಕೋಟಿ ರೂ.ಗಳ ಅವಶ್ಯಕತೆ ಇದೆ. ಮುಂದಿನ ಎರಡು ವರ್ಷದಲ್ಲಿ ಇದನ್ನು ಸಾಕಾರ ಮಾಡಲಾಗುವುದು. ಇಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಿದ್ದು, ಮುಂದಿನ 6 ತಿಂಗಳಲ್ಲಿ ಇದಕ್ಕೆ ಶಂಕುಸ್ಥಾಪನೆಯೂ ನಡೆಸುವ ಚಿಂತನೆ ಇದೆ. ಈಗ ಸಹಜವಾಗಿ ಏಳುವ ಪ್ರಶ್ನೆ, ಈಗಿರುವ ತಾಲೂಕು ಆಸ್ಪತ್ರೆಯನ್ನು ಏನು ಮಾಡುವುದು ಎಂದು? ಅದನ್ನು ಪ್ರಸೂತಿ ಆಸ್ಪತ್ರೆಯಾಗಿ ಬದಲಿಸಬಹುದು ಎಂದರು.

ಟೀಕೆಗಳಿಗೆ ಶಾಸಕರ ಉತ್ತರ:
ಪಕ್ಷಾತೀತವಾಗಿ ಎಲ್ಲರೂ ನನಗೆ ಅಭಿನಂದನೆ ತಿಳಿಸಿದ್ದಾರೆ. ಹಾಗಾಗಿ ಯಾರ ಟೀಕೆಗೂ ಹೆಚ್ಚಿನ ಉತ್ತರ ನೀಡಲು ಹೋಗಿಲ್ಲ. ಅಭಿವೃದ್ಧಿಯ ಕೆಲಸಗಳಿಗೆ ಪಕ್ಷಾತೀತ ಬೆಂಬಲ ಬೇಕು. ಪ್ರಸಾದಂ, ಖೇಲೋ ಇಂಡಿಯಾ ಯೋಜನೆಗಳಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ಎಂದರು.
ಕೆಲವರು ತಲೆನೇ ಇಲ್ಲದೆ ಟೀಕೆ ಮಾಡಿದ್ದಾರೆ. ಶಕುಂತಳಾ ಶೆಟ್ಟಿ ಅವರು ಸಿದ್ಧಪಡಿಸಿದ್ದ ಫೈಲ್ ಸಹಾಯಕ ಆಯುಕ್ತರ ಕಚೇರಿಯಲ್ಲೇ ಇತ್ತು. ಐದು ವರ್ಷಗಳಲ್ಲಿ ಅದನ್ನು ಬೆಂಗಳೂರಿಗೆ ತಲುಪಿಸಲು ಸಾಧ್ಯವಾಗದೇ ಹೋಯಿತು. ಈ ಕೆಲಸವನ್ನು ಮಾಡುವುದು ಬಿಟ್ಟು, ಅಸಾಧ್ಯವಾದ ಒಣಮೀನಿನ ಘಟಕ ತರಲು ಯೋಜನೆ ರೂಪಿಸಿದರು. ನಾನು ಶಾಸಕನಾದ 8-10 ದಿನದಲ್ಲೇ ಶಕುಂತಳಾ ಶೆಟ್ಟಿ ಅವರು ಸಿದ್ಧಪಡಿಸಿದ್ದ ಫೈಲನ್ನು ಬೆಂಗಳೂರಿಗೆ ತಲುಪಿಸಿ, ಸಂಬಂಧಪಟ್ಟ ಅಧಿಕಾರಿ, ಸಚಿವರ ಜೊತೆ ಮಾತುಕತೆ ನಡೆಸಿದ್ದೇನೆ. ಇಂದು ಯಶಸ್ಸು ಸಿಕ್ಕಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಕಾಂತೇರಿ ಜುಮಾದಿಗೆ ‘ಕಾಂತಾರ’ದಂತ ಭೀತಿ!! ಇದು ದಂತಕಥೆಯಲ್ಲ; ನೈಜಕಥೆ-  ಸೆಝ್’ನಿಂದ ಹೊಸ ತಪರಾಕಿ!

ಮಂಗಳೂರಿನಲ್ಲಿ ಸರ್ಕಾರಿ ಸ್ವಾಮ್ಯದ ಕಂಪೆನಿಯೊಂದು ತುಳುನಾಡಿನ ದೈವಾರಾಧನೆಗೆ ತಡೆಯೊಡ್ಡುವ ಮೂಲಕ…