ನಿಧನ

ಬೊಳುವಾರು ಪ್ರವೀಣ್’ರವರ ಮಾತೃಶ್ರೀ ಭಾಗೀರಥಿ ನಿಧನ!!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬೊಳುವಾರು ನಿವಾಸಿ, ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಮೊಕ್ತೇಸರರಾಗಿದ್ದ ನಾರಾಯಣ ಮಣಿಯಾಣಿ ಅವರ ಧರ್ಮಪತ್ನಿ ಭಾಗೀರಥಿ (79 ವ.) ಅವರು ಜೂನ್ 17ರಂದು ರಾತ್ರಿ ಪುತ್ತೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು.

ದೃಶ್ಯ ಮಾಧ್ಯಮದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ, ಪುತ್ತೂರು ಪತ್ರಿಕಾ ಭವನದ ಮ್ಯಾನೇಜರ್ ಪ್ರವೀಣ್ ಬೊಳುವಾರು ಅವರ ತಾಯಿ ಇವರಾಗಿದ್ದು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಮೃತರು ಪುತ್ರರಾದ ಪ್ರವೀಣ್ ಬೊಳುವಾರು, ನೀಲಂತ್ ಕುಮಾರ್, ಪುತ್ರಿ ವಾಣಿ ಅನಂತ್ ರಾವ್, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಸಹೋದರ – ಸಹೋದರಿಯರನ್ನು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮಾಜಿ ಶಾಸಕ ಸಂಜೀವ ಮಠಂದೂರು, ಅರುಣ್ ಕುಮಾರ್ ಪುತ್ತಿಲ, ರಾಜೇಶ್ ಬನ್ನೂರು, ಯು. ಲೊಕೇಶ್ ಹೆಗ್ಡೆ ಮೊದಲಾದವರು ಮನೆಗೆ ಆಗಮಿಸಿ ಸಂತಾಪ ಸೂಚಿಸಿದ್ದಾರೆ.

ಮೃತರ ಅಂತಿಮ ವಿಧಿವಿಧಾನಗಳು ಜೂನ್  19ರಂದು ಬೆಳಿಗ್ಗೆ 9 ಗಂಟೆಗೆ ಪುತ್ತೂರಿನ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts