tamanvi
ಅಪಘಾತ

ಕಾಣದ ಕಾಡಾನೆ: ಸವಾರ ಪಾರು, ದ್ವಿಚಕ್ರ ವಾಹನ ಜಖಂ!!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ: ದಿಡುಪೆಯಲ್ಲಿ ದ್ವಿಚಕ್ರ ವಾಹನದ ಮೇಲೆ ಒಂಟಿ ಸಲಗವೊಂದು ದಾಳಿ ಮಾಡಿರುವ ಘಟನೆ ಮೇ 31 ರವಿವಾರ ರಾತ್ರಿ ನಡೆದಿದೆ.

ಮಲವಂತಿಗೆ ಗ್ರಾಮದ ದಿಡುಪೆಯ ನೆಕ್ಕಿಲೊಟ್ಟು ನಾರಾಯಣ ಗೌಡ ಎಂಬವರು ಸ್ಥಳೀಯ ಕಾರ್ಯಕ್ರಮಕ್ಕೆ ಹೋಗಿ ವಾಪಸ್ಸು ತನ್ನ ಮನೆಗೆ ದ್ವಿಚಕ್ರ ವಾಹನದಲ್ಲಿ ಹಿಂದಿರುಗುತ್ತಿದ್ದರು. ಈ ವೇಳೆ ರಾತ್ರಿ 8.45ಕ್ಕೆ ನೇಲ್ಯಡ್ಕ ರಸ್ತೆ ಬಳಿ ಎದುರಾದ ಕಾಡಾನೆ ಏಕಾಏಕಿ ವಾಹನದ ಮೇಲೆ ಎರಗಿ ಸ್ಕೂಟರ್‌ ಅನ್ನು ಜಖಂಗೊಳಿಸಿದೆ.

ಮಳೆ ಸುರಿದ ಕಾರಣದಿಂದ ಕತ್ತಲ ವಾತವರಣದಲ್ಲಿ ರಸ್ತೆಯಲ್ಲಿ ಕಾಡಾನೆ ಇರುವುದು ವಾಹನದ ಬೆಳಕಿನ ಪ್ರಕಾಶದಿಂದ ಸರಿಯಾಗಿ ಗೋಚರಿಸದೆ ಕಾಡಾನೆಯ ಸಮೀಪ ಬಂದಾಗಲೇ ಕಾಡಾನೆ ನಾರಾಯಣ ಗೌಡರಿಗೆ ಕಾಣಿಸಿದೆ ಎನ್ನಲಾಗಿದೆ.

ಆನೆಯನ್ನು ನೋಡಿದ ಅವರು ಭಯದಿಂದ ಸ್ಥಳದಲ್ಲೇ ವಾಹನ ಬಿಟ್ಟು ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts