ಅಪಘಾತ

ದೇವಸ್ಥಾನದ ಮೇಲೆ ತುಂಡಾಗಿ ಬಿದ್ದ ವಿದ್ಯುತ್ ತಂತಿ; ಮಂಗ ಚೇಷ್ಠೆಗೆ 2 ಬಲಿ, 29 ಮಂದಿಗೆ ಗಾಯ!!

GL

ಈ ಸುದ್ದಿಯನ್ನು ಶೇರ್ ಮಾಡಿ

ವಿದ್ಯುತ್ ತಂತಿಯೊಂದು ದೇವಾಲಯದ ಶೆಡ್ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸ್ಪರ್ಶಿಸಿದೆ ಇದರಿಂದ ಭಯಭೀತರಾದ ಭಕ್ತರು ಓಡಲಾರಂಭಿಸಿ ಕಾಲ್ತುಳಿತ ಸಂಭವಿಸಿ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

chennai-shopping
maithri

ಉತ್ತರ ಪ್ರದೇಶದ ಬಾರಾಬಂಕಿಯ ಅವಸಾನೇಶ್ವರ ದೇವಸ್ಥಾನದ ಬಳಿ ಸೋಮವಾರ ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಶ್ರಾವಣ ಸೋಮವಾರ ಆಗಿದ್ದರಿಂದ ಭಾನುವಾರ ರಾತ್ರಿಯೇ ಬಾರಾಬಂಕಿ ಜಿಲ್ಲೆಯ ಹೈದರ್ ಘರ್ ಪ್ರದೇಶದಲ್ಲಿರುವ ಅವಸಾನೇಶ್ವರ ಮಹಾದೇವ ದೇವಸ್ಥಾನಕ್ಕೆ ಬಂದಿದ್ದಾರೆ ಬೆಳಿಗ್ಗೆ ಬೇಗನೆ ಶಿವನಿಗೆ ಜಲಾಭಿಷೇಕ ಮಾಡುವ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು, ಅದರಂತೆ ಮುಂಜಾನೆಯಿಂದಲೇ ಜಲಾಭಿಷೇಕ ಆರಂಭವಾಗಿತ್ತು ಈ ವೇಳೆ ಬೆಳಗಿನ ಜಾವ 2 ಗಂಟೆಗೆ ದೇವಸ್ಥಾನದ ಶೆಡ್‌ ಮೇಲೆ ವಿದ್ಯುತ್ ತಂತಿ ಬಿದ್ದು ವಿದ್ಯುತ್ ಸ್ಪರ್ಶವಾಗಿದೆ, ಇದರಿಂದ ಭಯಗೊಂಡ ಭಕ್ತರು ಓಡುವ ಭರದಲ್ಲಿ ಕಾಲ್ತುಳಿತ ಸಂಭವಿಸಿ ದುರ್ಘಟನೆ ಸಂಭವಿಸಿದೆ.

ಕೋತಿಯಿಂದ ಅವಾಂತರ:

ದೇವಸ್ಥಾನದ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಮೇಲೆ ಕೋತಿ ಹಾದು ಹೋಗುವ ವೇಳೆ ತಂತಿ ತುಂಡಾಗಿ ದೇವಸ್ಥಾನ ಮೇಲೆ ಬಿದ್ದಿರುವುದೇ ದುರ್ಘಟನೆಗೆ ಪ್ರಮುಖ ಕರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಹೆಚ್ಚಿನ ಸಂಖ್ಯೆಯಲ್ಲಿ ಕೋತಿಗಳು ತಂತಿ ಮೇಲೆ ಸಾಗಿದ್ದರಿಂದ ತಂತಿ ತುಂಡಾಗಿ ಬಿದ್ದಿದೆ ಎಂದು ಹೇಳಿದ್ದಾರೆ.

ಕಾಲ್ತುಳಿತದಲ್ಲಿ ಇಬ್ಬರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, 29 ಮಂದಿ ಗಾಯಗೊಂಡಿದ್ದಾರೆ ಅವರನ್ನು ಹೈದರಢ ಮತ್ತು ತ್ರಿವೇದಿಗಂಜ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಜೊತೆಗೆ ಗಂಭೀರ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts