Gl harusha
ಅಪರಾಧ

ಪುತ್ತೂರು ಮುಖ್ಯರಸ್ತೆಯ ಚರಂಡಿ ಪೈಪ್ ಲೈನಿಗೆ ಸಿಲುಕಿಕೊಂಡ ಮಹಿಳೆಯ ಕಾಲು!! ಮೌನಕ್ಕೆ ಶರಣಾದ ಅಧಿಕಾರಿಗಳನ್ನು ಕಾಯದೇ, ರಕ್ಷಣೆಗೆ ಧಾವಿಸಿದ ಸ್ಥಳೀಯರು!!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇಲ್ಲಿನ ಮುಖ್ಯರಸ್ತೆಯ ಬದಿಯ ಚರಂಡಿಯ ಮೇಲ್ಭಾಗದಲ್ಲಿ ಹಾಕಲಾಗಿದ್ದ ಪೈಪ್ ನೊಳಗಡೆ ಬುರ್ಖಾಧಾರಿ ಮಹಿಳೆಯ ಕಾಲು ಸಿಲುಕಿ ಪೇಚಾಟಕ್ಕೆ ಸಿಲುಕಿದ ಪ್ರಸಂಗ ಸೋಮವಾರ ಸಂಜೆ ನಡೆಯಿತು.

srk ladders
Pashupathi

ಪುತ್ತೂರು ಪೇಟೆಯ ಹೂವಿನ ಮಾರ್ಕೆಟ್ ಪಕ್ಕದಲ್ಲೇ ಕಾಲನಿಗೆ ಹೋಗುವ ರಸ್ತೆ ಈ ಘಟನೆಗೆ ಸಾಕ್ಷಿಯಾಯಿತು.

ಮುಖ್ಯರಸ್ತೆಯಿಂದ ಕಾಲನಿ ರಸ್ತೆಗೆ ತಿರುಗುವ ಪ್ರದೇಶದಲ್ಲಿ ಚರಂಡಿಗೆ ಪೈಪ್ ಲೈನ್‌ ಹಾಕಲಾಗಿತ್ತು. ಈ ಪೈಪ್ ಲೈನ್ ಕಳೆದ ಕೆಲ ಸಮಯಗಳಿಂದ ತುಂಡಾಗಿದ್ದು, ಸಂಬಂಧಪಟ್ಟವರನ್ನು ಎಚ್ಚರಿಸುವ ಪ್ರಯತ್ನ ನಡೆಸಲಾಗಿತ್ತು. ಆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು, ಯಾರೋ ಬಡಪಾಯಿಗಳು ಸಂತ್ರಸ್ತರಾಗುವುದನ್ನೇ ಕಾದು ಕುಳಿತಂತಿತ್ತು. ಇದೀಗ ಅಧಿಕಾರಿಗಳ ಆಶಯ ಯಶ ಕಂಡಿದೆ.

ಸೋಮವಾರ ಸಂಜೆ ಪುತ್ತೂರಿಗೆ ಆಗಮಿಸಿದ್ದ ಬುರ್ಖಾಧಾರಿ ಮಹಿಳೆ, ಅರಿವಿಲ್ಲದೇ ಪೈಪ್ ಲೈನೊಳಗಡೆ ಕಾಲು ಹಾಕಿದ್ದಾರೆ. ನೇತಾಡಿಕೊಂಡಿದ್ದ ಪೈಪ್ ಗಳಲ್ಲೊಂದು ತುಂಡಾಗಿ, ಮಹಿಳೆಯ ಕಾಲು ಸಿಲುಕಿಕೊಂಡಿದೆ.

ಸ್ಥಳೀಯರು ತಕ್ಷಣವೇ ಮಹಿಳೆಯ ಸಹಾಯಕ್ಕೆ ಧಾವಿಸಿದ್ದಾರೆ. ಪೈಪ್ ಲೈನ್ ತುಂಡು ಮಾಡಿ, ಮಹಿಳೆಯನ್ನು ರಕ್ಷಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಮಂಗಳೂರು – ಉಳ್ಳಾಲ ಬಸ್’ನಲ್ಲಿ ಯುವತಿಯ ಮುಟ್ಟಿ ವಿಕೃತಿ! ಬಸ್ ನಿರ್ವಾಹಕನ ಅಮಾನತುಗೊಳಿಸಿದ KSRTC ಡಿಸಿ!

ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನೊಬ್ಬನ ವಿರುದ್ಧ ಲೈಂಗಿಕ ಕಿರುಕುಳ, ದೌರ್ಜನ್ಯ ಪ್ರಕರಣ ದಾಖಲಾದ…