ಅಹಮದಾಬಾದ್: ಏರ್ ಇಂಡಿಯಾ ವಿಮಾನ AI 171 ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು. ಇದರಲ್ಲಿ ಪ್ರಯಾಣಿಕನೋರ್ವ ಪವಾಡಸದೃಶ ರೀತಿ ಪಾರಾದ ಘಟನೆ ವರದಿಯಾಗಿದೆ.
ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ನಾಗರಿಕರು, ಓರ್ವ ಕೆನಡಾ ಪ್ರಜೆ ಮತ್ತು ಏಳು ಪೋರ್ಚುಗೀಸ್ ನಾಗರಿಕರು ಹಾಗೂ ವಿಮಾನದ ಸಿಬ್ಬಂದಿ ಸೇರಿದಂತೆ ಒಟ್ಟು 242 ಜನರಿದ್ದು ಎಲ್ಲರೂ ಸಜೀವದಹನವಾಗಿದ್ದಾರೆ. ಆದರೆ ಪವಾಡ ಸದೃಶ್ಯ ಪ್ರಯಾಣಿಕನೊಬ್ಬ ವಿಮಾನದ ಎಮೆರ್ಜೆನ್ಸಿ ವಿಂಡೋದಿಂದ ಜಿಗಿದು ಪಾರಾಗಿದ್ದಾನೆ ಎಂಬ ಸುದ್ದಿ ಬಂದಿದೆ.
ವಿಮಾನದಲ್ಲಿ 11ಎ ಸೀಟ್ ನಲ್ಲಿ ಕುಳಿತಿದ್ದ ರಮೇಶ್ ಎಂಬಾತ ಬದುಕುಳಿದ ಅದೃಷ್ಠವಂತ. ರಮೇಶ್ ಬದುಕಿದ ಬಗ್ಗೆ ಹಿರಿಯ ಪೊಲೀಸರು ಮಾಹಿತಿ ನೀಡಿದ್ದಾರೆ.