ಪುತ್ತೂರು: ಹಾರಾಡಿಯ ಗ್ಯಾರೇಜ್ ವೊಂದರಲ್ಲಿ ರಿಪೇರಿಗಾಗಿ ನಿಲ್ಲಿಸಿದ್ದ ಯಮಹಾ R X 100 ಬೈಕ್‌ನ್ನು ಗ್ಯಾರೇಜ್ ಶೆಟರ್‌ನ ಬೀಗ ಒಡೆದು ಕಳವು ಮಾಡಿರುವ ಘಟನೆ ನಡೆದಿದೆ.
ಪುತ್ತೂರಿನ ಸಾಲ್ಮರ ನಿವಾಸಿ ಜಗದೀಶ್ ಆಚಾರ್ಯರವರು R X 100 ಬೈಕ್‌ನ್ನು ಹಾರಾಡಿ ಗ್ಯಾರೇಜ್ ವೊಂದರಲ್ಲಿ ರಿಪೇರಿಗಾಗಿ ನಿಲ್ಲಿಸಿದ್ದರು.
ಮಾ.8ರ ರಾತ್ರಿ 8ಗಂಟೆಯಿಂದ ಮಾ 9ರ ಬೆಳಗ್ಗೆ 10.45 ರ ನಡುವೆ ಬೈಕ್ ಕಳ್ಳತನವಾದ ಬಗ್ಗೆ ಗ್ಯಾರೇಜ್ ಮಾಲಕರು ಬೈಕ್ ಮಾಲಕರಿಗೆ ತಿಳಿಸಿದ್ದಾರೆ.
ಮುಂಭಾಗಿಲಿನ ಶೆಟರ್ ಬೀಗವನ್ನು ಮುರಿದ ಕಳ್ಳರು ಬೈಕ್ ಕಳ್ಳತನ ಮಾಡಿದ್ದು. ಜತೆಗೆ ಗ್ಯಾರೇಜ್ ನಲ್ಲಿದ್ದ ಟೂಲ್ಸ್ ಅನ್ನು ಕೂಡ ಕದ್ದೊಯ್ದಿದ್ದಾರೆ. ಗ್ಯಾರೇಜ್ ಮಾಲಕರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪಕರಣ ದಾಖಲಿಸಿಕೊಂಡಿದ್ದಾರೆ.
ಕಳವಾದ ಬೈಕಿನ ಮೌಲ್ಯ ಸುಮಾರು 1.50ಲಕ್ಷ ಎಂದು ಅಂದಾಜಿಸಲಾಗಿದೆ. ಕಳ್ಳತನವಾದ ಮಾಹಿತಿ ತಿಳಿಯುತ್ತಲೇ ಬೈಕ್ ಮಾಲಕರು ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಅವರು ತಮ್ಮ ದೂರಿನಲ್ಲಿ ” ಬೈಕ್ ಕೀ ಗ್ಯಾರೇಜ್ ಮಾಲೀಕನ ಕೈಗೆ ಕೊಟ್ಟಿದ್ದು, ದಾಖಲೆಗಳು ತನ್ನ ಸ್ವಾಧೀನದಲ್ಲಿರುವುದಾಗಿ ತಿಳಿಸಿದ್ದಾರೆ.. ಗ್ಯಾರೇಜ್ ಮಾಲೀಕ ನೀಡಿದ ದೂರು ದಾಖಲು ಆಗಿದ್ದು, ಬೈಕ್ ಮಾಲೀಕ ನೀಡಿದ ದೂರು ದಾಖಲು ಮಾಡಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
ಗ್ಯಾರೇಜ್ ಪಕ್ಕದ ನೇತಾಜಿ ರಸ್ತೆಯಲ್ಲಿ ರಾತ್ರಿ 12.30ರ ಸುಮಾರಿಗೆ ಇಬ್ಬರು ವ್ಯಕ್ತಿಗಳು ಬೈಕ್ ತಳ್ಳಿಕೊಂಡು ಹೋಗುವುದನ್ನು ಪ್ರತ್ಯಕ್ಷ ದರ್ಶಿಗಳು ಗಮನಿಸಿದ್ದಾರೆನ್ನಲಾಗಿದೆ. ರಾತ್ರಿ ಗಸ್ತು ಸರಿಯಾಗಿ ನಡೆಯದಿರುವುದೇ ಕಳವು ನಡೆಯಲು ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.