All Newsಸ್ಥಳೀಯ

ಕಂಬಳ, ಕೋಳಿ ಅಂಕ, ಪಿಲಿಗೊಬ್ಬುಗೆ ಧಾರ್ಮಿಕ ಸ್ಪರ್ಶ! ಪಿಲಿಗೊಬ್ಬು ಸೀಸನ್ 2 ವೇದಿಕೆ ಉದ್ಘಾಟಿಸಿ ಮಾಜಿ ಸಂಸದ ನಳಿನ್  ಕುಮಾರ್

ಪುತ್ತೂರು: ‘ಪಿಲಿಗೊಬ್ಬು’ ಕೇವಲ ಮನರಂಜನೆಯ ಆಟವಾಗಿರದೆ ಧಾರ್ಮಿಕ ನೆಲೆಗಟ್ಟನ್ನು ಹೊಂದಿದೆ. ತುಳುನಾಡಿನ ಪ್ರತಿ ಜನಪದೀಯ ಚಟುವಟಿಕೆಗಳಿಗೂ ಧಾರ್ಮಿಕ ಹಿನ್ನಲೆ ಇದೆ. ಕಂಬಳ, ಕೋಳಿ ಅಂಕ, ಯಕ್ಷಗಾನ ಹಾಗೂ ಹುಲಿ ಕುಣಿತ ಎಲ್ಲದಕ್ಕೂ ಧಾರ್ಮಿಕ ಸ್ಪರ್ಶವನ್ನು ಹಿರಿಯರು ನೀಡಿದ್ದಾರೆ. ಕೋಳಿ ಅಂಕ ಕೂಡ ನಿಷಿದ್ಧ ಅಲ್ಲ ಎಂದು ಮಾಜಿ ಸಂಸದ ನಳಿನ್‌ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ‘ಪಿಲಿಗೊಬ್ಬು’ ಕೇವಲ ಮನರಂಜನೆಯ ಆಟವಾಗಿರದೆ ಧಾರ್ಮಿಕ ನೆಲೆಗಟ್ಟನ್ನು ಹೊಂದಿದೆ. ತುಳುನಾಡಿನ ಪ್ರತಿ ಜನಪದೀಯ ಚಟುವಟಿಕೆಗಳಿಗೂ ಧಾರ್ಮಿಕ ಹಿನ್ನಲೆ ಇದೆ. ಕಂಬಳ, ಕೋಳಿ ಅಂಕ, ಯಕ್ಷಗಾನ ಹಾಗೂ ಹುಲಿ ಕುಣಿತ ಎಲ್ಲದಕ್ಕೂ ಧಾರ್ಮಿಕ ಸ್ಪರ್ಶವನ್ನು ಹಿರಿಯರು ನೀಡಿದ್ದಾರೆ. ಕೋಳಿ ಅಂಕ ಕೂಡ ನಿಷಿದ್ಧ ಅಲ್ಲ ಎಂದು ಮಾಜಿ ಸಂಸದ ನಳಿನ್‌ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ವಿಜಯ ಸಾಮ್ರಾಟ್ ಆಶ್ರಯದಲ್ಲಿ ಪುತ್ತೂರು ಪಿಲಿಗೊಬ್ಬು ಸಮಿತಿ ವತಿಯಿಂದ ಜನರ ಸಂಭ್ರಮಕ್ಕಾಗಿ ಪುತ್ತೂರು ಪಿಲಿಗೊಬ್ಬು ಸೀಸನ್ -2 ವೇದಿಕೆ ಉದ್ಘಾಟಿಸಿ ಮಾತನಾಡಿದರು.

SRK Ladders

ಯುವ ಶಕ್ತಿ ದೇಶದಲ್ಲಿ ದೊಡ್ಡ ಮಟ್ಟಿನಲ್ಲಿದ್ದು, ಸಮರ್ಥವಾಗಿ ಸಮಾಜ ಕಟ್ಟುವ ಶಕ್ತಿಹೊಂದಿದೆ. ಕಲಾವಿದರಿಗೆ ಪ್ರತಿಭೆಗಳನ್ನು ತೋರಿಸಲು ಅವಕಾಶಗಳು ಲಭಿಸುತ್ತಿದೆ. ಸಂಘ ಸಂಸ್ಥೆಗಳ ಮೂಲಕ ಸಾಮಾಜಿಕ ಕೆಲಸದ ಜತೆಗೆ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ಕತ್ತಾರ್ ಕರ್ನಾಟಕ ಸಂಘದ ಅಧ್ಯಕ್ಷ ಮೂಡಂಬೈಲು ರವಿ ಶೆಟ್ಟಿ ಹೇಳಿದರು.

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಮಾಲೀಕ ಬಲರಾಮ ಆಚಾರ್ಯ ಮಾತನಾಡಿ ತುಳುನಾಡಿನ ಜಾನಪದ ಹಿನ್ನಲೆಯುಳ್ಳ ಸಾಂಸ್ಕೃತಿಕ ವೈಭವಕ್ಕೆ ಜನರಿಂದ ಉತ್ತಮ ಸ್ಪಂದನೆ ಲಭಿಸಿದ್ದು, ಪ್ರತಿವರ್ಷ ಇದೇ ರೀತಿಯಲ್ಲಿ ಯಶಸ್ಸು ಕಾಣುವಂತಾಗಲಿ. ವಿಜಯ ಸಾಮ್ರಾಟ್ ಸಂಸ್ಥೆಯ ಮೂಲಕ ಅದ್ಬುತವಾದ ಕಾರ್ಯಕ್ರಮ ಮಾಡುತ್ತಿರುವುದಕ್ಕೆ ಅಭಿನಂದನೀಯ ಎಂದು ತಿಳಿಸಿದರು

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮಾತನಾಡಿ ಆಟ ಹಾಗೂ ಊಟ ಜನರಿಗೆ ಖುಷಿಯನ್ನು ನೀಡುತ್ತದೆ. ಪಿಲಿಗೊಬ್ಬು ಮೂಲಕ ಪುತ್ತೂರಿನಲ್ಲಿ ವಿದ್ಯುತ್ ಸಂಚಾರ ನಡೆಯುವಂತೆ ಮಾಡಿದೆ. ಕಲೆಯ ಮೂಲಕ ಜನರಲ್ಲಿ ಧಾರ್ಮಿಕ ಭಾವನೆ ಜಾಗೃತಗೊಳ್ಳಲು ವೇದಿಕೆ ಸಹಕಾರಿಯಾಲಿ ಎಂದು ತಿಳಿಸಿದರು.

ಸ್ವಚ್ಛತೆಯನ್ನು ನಡೆಸಿದ ರೇಣುಕಾ ನೇತೃತ್ವದ ತಂಡವನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರಿನ ಉದ್ಯಮಿ ಸುನಿಲ್ ಆಚಾರ್ ವಹಿಸಿದ್ದರು.

ಮಾಜಿ ಶಾಸಕ ಸಂಜೀವ ಮಠಂದೂರು, ಉದ್ಯಮಿ ಹರ್ಷ ಕುಮಾರ್ ರೈ ಮಾಡಾವು, ಉಪ್ಪಿನಂಗಡಿ ಸಹಸ್ತ್ರಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್.ಬಿ.ಜಯರಾಮ ರೈ ಬಳೆಜ್ಜ, ಶಶಿಕುಮಾರ್ ರೈ ಬಾಲ್ಯೊಟ್ಟು, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆಯ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಪುತ್ತೂರು ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭೆಯ ಸದಸ್ಯರಾದ ಭಾಮಿ ಅಶೋಕ್ ಶೆಣೈ, ರಮೇಶ್ ರೈ ಮೊಟ್ಟೆತ್ತಡ್ಕ, ಎ. ಕೆ. ಜಯರಾಮ ರೈ, ದಯಕರ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

ಸಹಜ್ ರೈ ಬಳಜ್ಜ ಸ್ವಾಗತಿಸಿದರು. ಪುತ್ತೂರು ಉಮೇಶ್ ನಾಯಕ್ ಪ್ರಸ್ತಾವಿಕವಾಗಿ ಮಾತನಾಡಿದರು. ಆದರ್ಶ ಶೆಟ್ಟಿ ವಂದಿಸಿದರು. ಬಾಲಕೃಷ್ಣ ಪೊರ್ದಾಳ್‌ ನಿರೂಪಿಸಿದರು. ಸುಜಿತ್ ರೈ ಪಾಲ್ತಾಡ್, ನಾಗರಾಜ್ ಭಟ್ ನಡುವಡ್ಕ, ಶರತ್ ಆಳ್ವ, ದೇವಿಪ್ರಕಾಶ್ ಭಂಡಾರಿ, ಅಶೋಕ್ ಅಡೂರು ರಾಜೇಶ್ ಕೆ.ಗೌಡ, ಅರುಣ್ ರೈ ಮತ್ತಿತರರು ಇದ್ದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಜಿಲ್ಲೆಯ ಪ್ರಸಿದ್ದ ಹುಲಿ ಕುಣಿತ ತಂಡಗಳು ವೇದಿಕೆಯಲ್ಲಿ ಪ್ರದರ್ಶನ ನೀಡಿದವು . ಅತ್ಯಾಕರ್ಷಕವಾಗಿ ಮೂಡಿ ಬಂದ ಹುಲಿ ಕುಣಿತಕ್ಕೆ ಪುತ್ತೂರಿನ ಜನತೆ ಫಿಧಾಗೊಂಡರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2