All Newsಸ್ಥಳೀಯ

ಸಂಘಟನೆ ವಿಷಯದಲ್ಲಿ ಪುತ್ತೂರು ದೇಶಕ್ಕೆ ಮೊದಲು | ವಿಶ್ವ ಹಿಂದೂ ಪರಿಷತ್ ನೂತನ ಕಟ್ಟಡಕ್ಕೆ ಭೂಮಿಪೂಜೆಯಲ್ಲಿ ಗೋಪಾಲ್

ಪುತ್ತೂರು: ದೇಶದಲ್ಲೇ ಎಲ್ಲಾ ಗ್ರಾಮಗಳಲ್ಲಿ ಶಾಖೆ ಮಾಡಿದ ಸಂಘಟನೆಯ ಮೊದಲ ತಾಲೂಕು ಪುತ್ತೂರು ಎಂದು ವಿಶ್ವ ಹಿಂದೂ ಪರಿಷದ್ ಕೇಂದ್ರೀಯ ಕಾರ್ಯದರ್ಶಿ ಗೋಪಾಲ್ ಜೀ ಹೇಳಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸಂಘಟನೆ ವಿಷಯದಲ್ಲಿ ಪುತ್ತೂರು ಯಾವತ್ತೂ ಮುಂದೆ ಇದೆ. ಅದರಲ್ಲೂ ಎಲ್ಲಾ ಗ್ರಾಮಗಳಲ್ಲಿ ಶಾಖೆ ಮಾಡಿದ ದೇಶದಲ್ಲೇ ಸಂಘಟನೆಯ ಮೊದಲ ತಾಲೂಕು ಪುತ್ತೂರು ಎಂದು ವಿಶ್ವ ಹಿಂದೂ ಪರಿಷದ್ ಕೇಂದ್ರೀಯ ಕಾರ್ಯದರ್ಶಿ ಗೋಪಾಲ್ ಜೀ ಹೇಳಿದರು.

ವಿಶ್ವ ಹಿಂದೂ ಪರಿಷದ್ ಕರ್ನಾಟಕ, ವಿಶ್ವ ಹಿಂದೂ ಪರಿಷದ್ ಪುತ್ತೂರು ಕಟ್ಟಡ ನಿರ್ಮಾಣ ಸಮಿತಿ ವತಿಯಿಂದ ಪುತ್ತೂರಿನಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಕಾರ್ಯಾಲಯಕ್ಕೆ ಭೂಮಿ ಪೂಜೆ ಬಳಿಕ ನಡದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

SRK Ladders

ಪುರುಷಾರ್ಥ ಹಾಗೂ ಪರಾಕ್ರಮ ಹಿಂದೂವಿಗೆ ಅನ್ವರ್ಥನಾಮ. ಎಲ್ಲಾ ಜಾತಿ, ರೀತಿಯ ಹಿಂದೂಗಳನ್ನು ನಮ್ಮ ಮಿತ್ರರು ಎಂದು ಪರಿಗಣಿಸುವ ಸಂಘಟನೆ ವಿಶ್ವ ಹಿಂದೂ ಪರಿತ್ ಎಂದ ಅವರು, ಧಾರ್ಮಿಕ ವಿಚಾರದಲ್ಲಿ ವಿಹಿಂಪ ಸದಾ ಮುಂದು. ಸಾಮಾಜಿಕ ಪರಿವರ್ತನೆ ತರುವಲ್ಲಿಯೂ ವಿಹಿಂಪ ಸಾಕಷ್ಟು ಕೆಲಸ ಮಾಡಿದೆ. ಅಸ್ಪೃಶ್ಯತೆ ವಿರುದ್ಧ ಸಮಾನತೆಯ ಕಾರ್ಯ, 15 ಲಕ್ಷ ಕ್ರೈಸ್ತ, ಮುಸ್ಲಿಮರನ್ನು ವಾಪಾಸು ಹಿಂದೂ ಧರ್ಮಕ್ಕೆ ತರುವಲ್ಲಿ, ಜಿಹಾದಿ ಕೆಲಸಗಳ ವಿರುದ್ಧ ನಿರಂತರ ಕೆಲಸ ಮಾಡಿದೆ ಎಂದರು.

ಆಶೀರ್ವಚನ ನೀಡಿದ ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ನಮ್ಮ ಸನಾತನ ಸಂಸ್ಕೃತಿ ಬೆಳೆಸುವ ಕೇಂದ್ರಗಳನ್ನು ಪ್ರತಿಷ್ಠೆ ಮಾಡಬೇಕಿರುವುದು ಅನಿವಾರ್ಯ. ಅಲ್ಲಿ ಹಿಂದೂ ಧರ್ಮದ ಪ್ರಗತಿಗೆ ಪೂರಕವಾದ ಕೆಲಸಗಳು ಆಗಬೇಕು. ಅದಕ್ಕೆ ದಾನಿಗಳ ಕೊಡುಗೆಯೂ ಪೂರಕವಾಗಿರಬೇಕು ಎಂದರು. ಕುಟುಂಬವೊಂದರಲ್ಲಿ 3 ಮಕ್ಕಳಿದ್ದು, ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು. ಹೆಣ್ಣು ಮಕ್ಕಳಿಗೆ ಭರತನಾಟ್ಯದಂತೆ ಆತ್ಮರಕ್ಷಣೆ ಕಲೆಯನ್ನು ಕಲಿಸಬೇಕು ಎಂದು ಸಲಹೆ ನೀಡಿದರು.

ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಮಾತನಾಡಿ, ಸಹನೆ, ತಾಳ್ಮೆ ಹಿಂದೂ ಸಮಾಜದ ಗೌರವವೂ ಹೌದು, ದೌರ್ಬಲ್ಯವೂ ಹೌದು. ವಿಶ್ವ ಹಿಂದೂ ಪರಿಷತ್ ಸಮಾಜವನ್ನು ಏಕೀಕೃತಗೊಳಿಸುವ ಕೆಲಸ ಮಾಡಿದೆ. ಇದರ ಕಾರ್ಯಕರ್ತರು ಯಾವತ್ತೂರು ಸ್ಥಾನಮಾನ, ಗೌರವ ಅಪೇಕ್ಷಿಸಿಲ್ಲ. ಹಿಂದೂ ಧರ್ಮ ವಿರೋಧಿಗಳಿಗಿಂತ ಸ್ವಧರ್ಮೀಯರಿಂದಲೇ ಸವಾಲು ಎದುರಿಸುತ್ತಿದೆ. ಈ ಸ್ಥಿತಿ ಬದಲಾಗಬೇಕು ಎಂದರು.

ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಚಾಲಕ್ ವಿನಯಚಂದ್ರ ಉಜಿರೆ, ವಿಹಿಂಪ ಪ್ರಖಂಡ ಅಧ್ಯಕ್ಷರಾಗಿದ್ದ ಹಿರಿಯ ನ್ಯಾಯವಾದಿ ಎನ್. ಸುಬ್ರಹ್ಮಣ್ಯ ಕೊಳತ್ತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಲವರ ದೇಣಿಗೆ ವಾಗ್ದಾನ

ನೂತನ ಕಾರ್ಯಾಲಯ ಕಟ್ಟಡಕ್ಕೆ ಸುಮಾರು 4 ಕೋಟಿ ವೆಚ್ಚ ತಗುಲುತ್ತಿದ್ದು, ಆರಂಭಿಕವಾಗಿ ಹಣ ದೇಣಿಗೆ ವಾಗ್ದಾಣ ನೀಡಿದವರಿಗೆ ಗೌರವ ಸಲ್ಲಿಸಲಾಯಿತು. ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಲಯದಿಂದ ರೂ. 11 ಲಕ್ಷವನ್ನು ಆರಂಭಿಕವಾಗಿ ನೀಡುವ ಕುರಿತು ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಘೋಷಿಸಿದರು. ಸುಬ್ರಹ್ಮಣ್ಯ ಶ್ರೀಗಳು 5 ಲಕ್ಷ, ಪ್ರೊ.ಎಂಬಿ. ಪುರಾಣಿಕ್ 5 ಲಕ್ಷ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಶಶಿಕುಮಾರ್ ಬಾಲ್ಯೊಟ್ಟು, ಡಾ. ಸುಧಾ ಎಸ್. ರಾವ್, ಡಾ. ಸುರೇಶ್ ಪುತ್ತೂರಾಯ, ಯು. ಪೂವಪ್ಪ, ಡಾ. ಕೃಷ್ಣ ಪ್ರಸನ್ನ, ಗೋಪಾಲಕೃಷ್ಣ ಭಟ್ ದ್ವಾರಕ, ಮುರಳೀಕೃಷ್ಣ ಹಸಂತಡ್ಕ, ದಾಮೋದರ ಪಾಟಾಳಿ, ಬೊಳುವಾರು ವಿಜಯ ಸರ್ವಿಸಸ್, ಡಾ. ದಯಾಕರ, ಸೀತಾರಾಮ ರೈ ಕೆದಂಬಾಡಿಗುತ್ತು, ಪ್ರೊ.ಎ.ವಿ. ನಾರಾಯಣ, ವಾಮನ ಪೈ, ಹರ್ಷಕುಮಾರ್ ರೈ ಮಾಡಾವು, ರಾಧಾಕೃಷ್ಣ ಕೋಲ್ಪೆ ಸೇರಿ ಒಟ್ಟು 38 ಲಕ್ಷ ವಾಗ್ದಾಣ ಮಾಡಲಾಯಿತು.
ಸಂಘ ಪರಿವಾರದ ಪ್ರಮುಖರಾದ ನವೀನ್, ಸುಭಾಷ್, ಮಹಾಬಲೇಶ್ವರ ಹೆಗ್ಡೆ, ಶರಣ್ ಪಂಪುವೆಲ್, ಪುನೀತ್ ಅತ್ತಾವರ, ಪ್ರದೀಪ್ ಸಾರಿಪಲ್ಲ, ಅಚ್ಯುತ ನಾಯಕ್, ಪ್ರತಾಪಸಿಂಹ ನಾಯಕ್, ಭುಜಂಗ ಕುಲಾಲ್, ಗೋಪಾಲ್ ಕುತ್ತಾರು, ಸುಧೀಶ್ ರೋಹಿತ್, ದಕ್ಷ ರವೀಂದ್ರ, ಪ್ರಮುಖರಾದ ಜಿ.ಎಲ್. ಬಲರಾಮ ಆಚಾರ್ಯ, ಮುಳಿಯ ಕೇಶವ ಪ್ರಸಾದ್, ಅಪ್ಪಯ್ಯ ಮಣಿಯಾಣಿ, ಶೇಖರ ನಾರಾವಿ, ಶ್ರೀಕೃಷ್ಣ ಉಪಾಧ್ಯಾಯ, ಪಿ.ಜಿ. ಜಗನ್ನಿವಾಸ್ ರಾವ್, ಸಾಜ ರಾಧಾಕೃಷ್ಣ ಆಳ್ವ, ಜೀವಂಧರ್ ಜೈನ್, ಭರತ್ ಕುಮ್ಡೇಲು, ಜನಾರ್ದನ ಬೆಟ್ಟ, ಅರುಣ್ ಕುಮಾರ್ ಪುತ್ತಿಲ ಮೊದಲಾದವರು ಪಾಲ್ಗೊಂಡರು.

ಪ್ರಸ್ತಾವಿಕವಾಗಿ ಮಾತನಾಡಿದ ವಿಹಿಂಪ ಪ್ರಾಂತ ಕಾರ್ಯದರ್ಶಿ ಯು. ಪೂವಪ್ಪ, 30 ವರ್ಷಗಳ ಹಿಂದೆ ಸೀರತ್ ಕಮಿಟಿಗೆ ನೀಡಲು ಮುಂದಾಗಿದ್ದ ಭೂಮಿಯನ್ನು 1.60 ಲಕ್ಷಕ್ಕೆ ಅಗಿರಮೆಂಟ್ ಮಾಡಿಕೊಂಡು ದೇಣಿಗೆ ಸಂಗ್ರಹಿಸಿ ಖರೀದಿಸಲಾಗಿತ್ತು. ಅದನ್ನು ಹಿಂದೂ ಕಲ್ಯಾಣ ಪ್ರತಿಷ್ಠಾನ ಟ್ರಸ್ಟ್ ಹೆಸರಿನಲ್ಲಿ ನೋದಣಿ ಮಾಡಲಾಯಿತು. ಇದೀಗ ಕಟ್ಟಡ ನಿರ್ಮಾಣಕ್ಕೆ ಸುಮಾರು 4 ಕೋಟಿ ಅಗತ್ಯವಿದ್ದು, ಹಲವು ಮಂದಿ ದಾನಿಗಳು ಈಗಾಗಲೇ ವಾಗ್ದಾಣ ಮಾಡಿದ್ದಾರೆ. ಪುತ್ತೂರಿನಿಂದಲೇ 1 ಕೋಟಿ ಸಂಗ್ರಹಿಸುವ ಗುರಿ ಇರಿಸಲಾಗಿದೆ. 1 ವರ್ಷದೊಳಗೆ ಕಾರ್ಯಾಲಯ ಕಟ್ಟಡವನ್ನು ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಟಿ. ಶೆಟ್ಟಿ ವಿಶೇಷವಾಗಿ ಭಾಗವಹಿಸಿದರು. ಅವರನ್ನು ವೇದಿಕೆಯಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು.

ಬಜರಂಗದಳ ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ವಿಶಾಖ್ ಸಸಿಹಿತ್ಲು ಪ್ರಾರ್ಥಿಸಿದರು. ವಿಹಿಂಪ ಪುತ್ತೂರು ಜಿಲ್ಲಾಧ್ಯಕ್ಷ ಹಾಗೂ ಕಟ್ಟಡ ನಿರ್ಮಾಣ ಸಮಿತಿ ಕಾರ್ಯದರ್ಶಿ ಡಾ. ಕೃಷ್ಣಪ್ರಸನ್ನ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ವಂದಿಸಿದರು. ನಗರ ಪ್ರಖಂಡ ಅಧ್ಯಕ್ಷ ದಾಮೋದರ ಪಾಟಾಳಿ ಕಾರ್ಯಕ್ರಮ ನಿರ್ವಹಿಸಿದರು.

ಚಿತ್ರ ಕೃಪೆ: ಭೂಮಿ ಫೊಟೋ ವರ್ಲ್ಡ್


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2