ಪ್ರಚಲಿತ

ಹರ್ಮುಜ್ ಜಲಸಂಧಿಯಲ್ಲಿ ‘ಟೋಲ್’ ತೆರೆದ ಇರಾನ್!! ಭಾರತದ ರೂಪಾಯಿ ಲೆಕ್ಕದಲ್ಲಿ 16- 18 ಕೋಟಿ ರೂ. ಶುಲ್ಕ!! ಭಾರತಕ್ಕೆ ಸಿಗಲಿದೆಯೇ ವಿನಾಯಿತಿ!

GL

ಈ ಸುದ್ದಿಯನ್ನು ಶೇರ್ ಮಾಡಿ

ಮಧ್ಯಪ್ರಾಚ್ಯ ಯುದ್ಧದ ಕ್ಷಿಪಣಿ ದಾಳಿಗಿಂತ ಹರ‍್ಮುಜ್ ಜಲಸಂಧಿಯ ಅಲೆಗಳೇ ಹೆಚ್ಚು ಸದ್ದು ಮಾಡುತ್ತಿವೆ.

chennai-shopping
maithri

ಹರ್ಮುಜ್ ಜಲಸಂಧಿ ತೆರೆಯುವಂತೆ ಅಮೆರಿಕ ಹಾಕಿದ್ದ ಬೆದರಿಕೆಗೆ ಪ್ರತಿಯಾಗಿ ಇರಾನ್ ತೆಗೆದುಕೊಂಡ ನಿರ್ಧಾರ ಜಾಗತಿಕ ಆರ್ಥಿಕತೆಯನ್ನೇ ಬುಡಮೇಲು ಮಾಡುವಂತಿದೆ.

ಜಾಗತಿಕ ತೈಲ ಪೂರೈಕೆಯ ಜೀವನಾಡಿಯಾಗಿರುವ ಹರ್ಮುಜ್ ಜಲಸಂಧಿಯಲ್ಲಿ ಹೊಸ ಟೋಲ್ ನಿಯಮವನ್ನು ಜಾರಿಗೆ ತರುವ ಮೂಲಕ ಮಧ್ಯಪ್ರಾಚ್ಯದ ಯುದ್ಧ ಮತ್ತೊಂದು ಮಗ್ಗುಲಿಗೆ ಹೊರಳಿದೆ.

ಹರ್ಮುಜ್ ಜಲಸಂಧಿ ದಾಟಿ ಬರುವ ಹಡಗುಗಳು ಇನ್ನು 2 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ 16ರಿಂದ 18 ಕೋಟಿ ರೂ. ಟೋಲ್ ಪಾವತಿಸಬೇಕಾಗಿದೆ.

ಜಗತ್ತಿನ ಕಚ್ಚಾ ತೈಲ ಪೂರೈಕೆಯ ಶೇಕಡಾ 20ರಷ್ಟು, ಅಂದರೆ ಜಾಗತಿಕ ತೈಲದ ಐದನೇ ಒಂದು ಭಾಗ ಇದೇ ಹರ್ಮುಜ್ ಜಲಸಂಧಿಯ ಮೂಲಕವೇ ಹಾದುಹೋಗಬೇಕು. ಈ ನಿರ್ಣಾಯಕ ಜಲಮಾರ್ಗದ ಮೇಲೆ ತನ್ನ ಹಿಡಿತ ಸಾಧಿಸಿರುವ ಇರಾನ್, ಇದೀಗ ಕೆಲವು ನಿರ್ದಿಷ್ಟ ಹಡಗುಗಳು ಜಲಸಂಧಿ ದಾಟಲು 2 ಮಿಲಿಯನ್ ಡಾಲರ್ ಶುಲ್ಕ ಪಾವತಿಸಬೇಕು ಎಂದು ಫರ್ಮಾನು ಹೊರಡಿಸಿದೆ. ಇದರಿಂದ ಜಗತ್ತು ಅಕ್ಷರಶ: ಬೆಚ್ಚಿಬಿದ್ದಿದೆ.

ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ ಸದಸ್ಯ ಅಲಾವುದ್ದೀನ್ ಬೊರುಜರ್ಡಿ ಮಾತನಾಡಿ, “ದಶಕಗಳ ಬಳಿಕ ಜಲಸಂಧಿಯಲ್ಲಿ ಇರಾನಿನ ಹೊಸ ಸಾರ್ವಭೌಮ ಆಡಳಿತ ಶುರುವಾಗಿದೆ ಎಂಬುದರ ಸಂಕೇತವಿದು. ಯುದ್ಧ ಎಂದ ಮೇಲೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಯುದ್ಧದ ವೆಚ್ಚವನ್ನು ಸರಿದೂಗಿಸಲು ಮತ್ತು ನಮ್ಮ ಸಾರ್ವಭೌಮತೆಯನ್ನು ಎತ್ತಿಹಿಡಿಯಲು ಹರ್ಮುಜ್ ಜಲಸಂಧಿ ಮೂಲಕ ಹಾದುಹೋಗುವ ಹಡಗುಗಳಿಂದ ಟ್ರಾನ್ಸಿಟ್ ಶುಲ್ಕವನ್ನು ತೆಗೆದುಕೊಳ್ಳಲೇಬೇಕಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

” ಹರ್ಮುಜ್ ಜಲಸಂಧಿಯು ಇರಾನಿನ ವಿರೋಧಿಗಳನ್ನು ಹೊರತುಪಡಿಸಿ, ಉಳಿದೆಲ್ಲರಿಗೂ ಮುಕ್ತವಾಗಿದೆ. ಯಾರು ನಮ್ಮ ಶತ್ರುಗಳಲ್ಲವೋ, ಯಾರು ನಮ್ಮ ಸಾರ್ವಭೌಮತೆಗೆ ಧಕ್ಕೆ ತರುವುದಿಲ್ಲವೋ, ಅವರ ಹಡಗುಗಳು ಸುರಕ್ಷಿತವಾಗಿ ಸಂಚರಿಸಬಹುದು” ಎಂದು ಮಸೂದ್ ಪೆಜೆಶ್ಕಿಯಾನ್ ಸ್ಪಷ್ಟಪಡಿಸಿದ್ದಾರೆ.

ಭಾರತಕ್ಕೂ ತಟ್ಟಲಿದೆ ಪರಿಣಾಮ:

ತನ್ನ ವಿರೋಧಿಗಳನ್ನು ಹೊರತುಪಡಿಸಿ ಉಳಿದವರಿಗೆ ಹರ್ಮುಜ್ ಮುಕ್ತವಾಗಿದೆ ಎಂದು ಇರಾನ್ ಸ್ಪಷ್ಟಪಡಿಸಿರುವುದರಿಂದ, ಭಾರತ ತನ್ನ ತೈಲ ಆಮದನ್ನು ನಿರಾತಾಂಕವಾಗಿ ಮುಂದುವರೆಸಬಹುದು ಎಂದು ಅಂದಾಜಿಸಲಾಗಿದೆ. ಹರ್ಮುಜ್ ಜಲಸಂಧಿಯಿಂದ ಸಾಗಲು ಭಾರತದ ಹಡಗುಗಳಿಗೆ ಇರಾನ್ ಅನುಮತಿ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ಆದರೆ ಮಧ್ಯಪ್ರಾಚ್ಯ ಸಂಘರ್ಷದಿಂದ ಜಗತ್ತಿನ ಮೇಲಾಗುತ್ತಿರುವ ಪರಿಣಾಮಗಳಿಂದ ಭಾರತವೂ ತಪ್ಪಿಸಿಕೊಳ್ಳಲಾಗದು ಎಂದು ಹೇಳಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಯುದ್ಧ ಸನ್ನದ್ಧತೆಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕರೆ! ಸೈನಿಕ ತರಬೇತಿ ವೇಳೆ ಪುತ್ರಿ ಜೊತೆ ಟ್ಯಾಂಕ್ ಏರಿದ ಕಿಮ್ ಜಾಂಗ್ ಉನ್

ಸೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಮ್ಮ ಪುತ್ರಿಯೊಂದಿಗೆ ಟ್ಯಾಂಕ್ ಏರಿ…

ಇಬ್ಬರು ಗೆಳತಿಯರ ಜೊತೆ ಮನೆಯಲ್ಲಿದ್ದೆ: ಸುದ್ದಿಗೋಷ್ಠಿಯಲ್ಲಿ ಅರಿವಿಲ್ಲದೇ ಮಾತನಾಡಿದ ಕೆಕೆಆರ್ ಆಟಗಾರ!!

ಐಪಿಎಲ್ ಟರ‍್ನಮೆಂಟ್ ಶುರುವಾಗುವ ಸಿದ್ಧತೆಯಲ್ಲಿದ್ದಾಗಲೇ ಕೆಕೆಆರ್ ಆಟಗಾರ ಬ್ರಾವೋ ಮಾತು ಇದೀಗ…